Holi Festival 2020: ರಾಜ್ಯದ ವಿವಿಧೆಡೆ ಕೊರೋನಾ ಭೀತಿ ನಡುವೆ ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಜನ

Happy Holi 2020: ಪ್ರತಿಬಾರಿಗೆ ಹೋಲಿಸಿದರೆ, ಈ ಬಾರಿ ಹೋಳಿ ಸಂಭ್ರಮದಲ್ಲಿ ಕಡಿಮೆ ಜನರು ಭಾಗಿಯಾಗಿದ್ದಾರೆ. ಹಿರಿಯರಲ್ಲಿ ಕೊಂಚ ನಿರಾಸಕ್ತಿ ಕಂಡು ಬಂದರೂ ಯುವಜನತೆ, ಚಿಣ್ಣರು ಹೋಳಿಯಲ್ಲಿ ಮಿಂದೆದ್ದಿದ್ದಾರೆ.

news18-kannada
Updated:March 10, 2020, 12:18 PM IST
Holi Festival 2020: ರಾಜ್ಯದ ವಿವಿಧೆಡೆ ಕೊರೋನಾ ಭೀತಿ ನಡುವೆ ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಜನ
ಹೋಳಿ ಸಂಭ್ರಮ ಆಚರಣೆ
  • Share this:
ಬಾಗಲಕೋಟೆ (ಮಾ.10): ವಿಶ್ವವನ್ನು ಬೆಚ್ಚಿಬೀಳಿಸಿರುವ ಕೊರೋನಾ ಭೀತಿ ರಾಜ್ಯದಲ್ಲಿಯೂ ಆತಂಕ ಮೂಡಿಸಿದೆ. ಬೆಂಗಳೂರು ಮೂಲದ ಟೆಕ್ಕಿಗೆ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಇನ್ನಷ್ಟು ಭಯ ಮೂಡಿದೆ. ವೈರಸ್​ ಬಗ್ಗೆ ಜಾಗೃತಿ ಮೂಡಿಸುವ ಕೆಲಸದ ಜೊತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ  ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸುತ್ತಿದೆ. ಈ ಸೋಂಕಿನ ಭಯದ ನಡುವೆ ಜನರು ಇಂದು ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು, ಬಣ್ಣ ಎರಚಿ ಸಂತಸಪಟ್ಟಿದ್ದಾರೆ. 

ಪ್ರತಿಬಾರಿಗೆ ಹೋಲಿಸಿದರೆ, ಈ ಬಾರಿ ಹೋಳಿ ಸಂಭ್ರಮದಲ್ಲಿ ಕಡಿಮೆ ಜನರು ಭಾಗಿಯಾಗಿದ್ದಾರೆ. ಹಿರಿಯರಲ್ಲಿ ಕೊಂಚ ನಿರಾಸಕ್ತಿ ಕಂಡು ಬಂದರೂ ಯುವಜನತೆ, ಚಿಣ್ಣರು ಹೋಳಿಯಲ್ಲಿ ಮಿಂದೆದ್ದಿದ್ದಾರೆ.

ಇನ್ನು ಕೋಲ್ಕತಾ ಬಳಿಕ ಅತಿಹೆಚ್ಚು ಹೋಳಿ ಸಂಭ್ರಮ ಆಚರಿಸುವ ಬಾಗಲಕೋಟೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಣ್ಣದೋಕುಳಿ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಐತಿಹಾಸಿಕ ಬಾದಾಮಿಯಲ್ಲಿ ವಿದೇಶಿ ಪ್ರವಾಸಿಗರೊಂದಿಗೆ ಸ್ಥಳೀಯರು  ಬಣ್ಣ ಎರಚಿ ಸಂಭ್ರಮಿಸಿದ್ದಾರೆ.

ಇನ್ನು, ಧಾರವಾಡದಲ್ಲಿ ಕೊರೋನಾ ಆತಂಕದ ಹಿನ್ನೆಲೆ ಮುಂಜಾಗೃತ ಕ್ರಮವಹಿಸಿದ ಜನರು ಬಣ್ಣಕ್ಕೆ ಔಷಧಿ ಗುಣಹೊಂದಿದ ಅರಿಶಿನ ಬಳಕೆ ಮಾಡಿ ಜನರು ಓಕುಳಿ ಎರಚಿ ಖುಷಿ ಪಟ್ಟಿದ್ದಾರೆ. ಇದೇ ವೇಳೆ ಕರೋನಾ ಬಗ್ಗೆ ಜಾಗೃತಿ ಮೂಡಿಸಿದ ಇಲ್ಲಿನ ನಿವಾಸಿಗಳು ಕಾಮಣ್ಣನಿಗೂ ಮಾಸ್ಕ್​ ಹಾಕಿದ್ದಾರೆ. ನಗರದ ವಿಜಯಾನಂದ ನಗರದ ಸರ್ಕಲ್​ನಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣನ ಮುಖಕ್ಕೆ ಮಾಸ್ಕ್​ ಹಾಕಿರುವುದು ಕಂಡು ಬಂದಿದೆ. ಮಾಸ್ಕ್​ನೊಂದಿಗೆ ಕಾಮಣ್ಣನನ್ನು ಸುಡುವ ಮೂಲಕ ಕಾಮನೊಂದಿಗೆ ಕರೋನಾವೂ ದಹಿಸಿ ಹೋಗಲಿ ಎಂದು ಪ್ರಾರ್ಥಿಸಿದ್ದಾರೆ

ಕಲಬುರಗಿಯಲ್ಲಿ ಓಕುಳಿಯಾಟಕ್ಕೆ ಹಿರಿಯರು ನಿರಾಸಕ್ತಿ ತೋರಿದರೂ ಮಕ್ಕಳು ಉತ್ಸಾಹದಿಂದ ಭಾಗಿಯಾಗಿದ್ದಾರೆ. ಪರಸ್ಪರ ಬಣ್ಣ ಎರಚಿ ಹೋಳಿ ಶುಭಾಶಯ ಕೋರಿದ್ದಾರೆ.

ಇದನ್ನು ಓದಿ: ಕಾಫಿನಾಡಿಗರನ್ನು ಕೊರೋನಾಗಿಂತ ಹೆಚ್ಚು ಕಾಡುತ್ತಿದೆ ಮಂಗನ ಕಾಯಿಲೆ ಭೀತಿ; ಪ್ರವಾಸೋದ್ಯಮ ಇಳಿಮುಖ

ವಿಶ್ವಪ್ರಸಿದ್ಧಿ ಹಂಪಿಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಹೋಳಿ ಸಂಭ್ರಮದಲ್ಲಿ ಭಾಗಿಯಾದ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಹೋಳಿ ಹಬ್ಬದಲ್ಲಿ ಭಾಗಿಯಾಗಿರುವ ಪ್ರವಾಸಿಗರು ಸುರಕ್ಷತಾ ಕ್ರಮವಾಗಿ ಮಾಸ್ಕ್​ ಧರಿಸಿ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

 

 

 
First published: March 10, 2020, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading