ಕೊರೋನಾ ಜೊತೆ ಕಾಡುತ್ತಿದೆ ಹಂದಿಜ್ವರ, ಕಾಲರಾ ಭೀತಿ; ರಾಜ್ಯದಲ್ಲಿ 51 ಮಂದಿಗೆ ಎಚ್1ಎನ್1 ಸೋಂಕು

ಬೆಂಗಳೂರಿನಲ್ಲಿ 36 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿವೆ. ಇನ್ನು ಶಿವಮೊಗ್ಗ 10, ಉಡುಪಿ 4, ದಕ್ಷಿಣ ಕನ್ನಡದಲ್ಲಿ ಓರ್ವನಿಗೆ ಹಂದಿಜ್ವರದ ಲಕ್ಷ್ಮಣಗಳಿರುವುದು ದೃಢಪಟ್ಟಿದೆ.

news18-kannada
Updated:March 9, 2020, 4:32 PM IST
ಕೊರೋನಾ ಜೊತೆ ಕಾಡುತ್ತಿದೆ ಹಂದಿಜ್ವರ, ಕಾಲರಾ ಭೀತಿ; ರಾಜ್ಯದಲ್ಲಿ 51 ಮಂದಿಗೆ ಎಚ್1ಎನ್1 ಸೋಂಕು
ಹೆಚ್1ಎನ್1
  • Share this:
ಬೆಂಗಳೂರು (ಮಾ. 09): ರಾಜ್ಯದಲ್ಲಿ ಕೊರೋನಾ ವೈರಸ್ ಜೊತೆಗೆ ಜನರಲ್ಲಿ ಹಂದಿಜ್ವರ ಭೀತಿ ಕೂಡ ಕಾಡುತ್ತಿದೆ. ಜಿಲ್ಲೆಯಲ್ಲಿ ಎಚ್​1ಎನ್​1 (ಹಂದಿಜ್ವರ) ಸೋಂಕು ಉಲ್ಬಣಗೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. 

ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಕಳೆದ ಒಂದು ವಾರದಲ್ಲಿ 51 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 36 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿವೆ. ಇನ್ನು ಶಿವಮೊಗ್ಗ 10, ಉಡುಪಿ 4, ದಕ್ಷಿಣ ಕನ್ನಡದಲ್ಲಿ ಓರ್ವನಿಗೆ ಹಂದಿಜ್ವರದ ಲಕ್ಷ್ಮಣಗಳಿರುವುದು ದೃಢಪಟ್ಟಿದೆ.

ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾಲರ ಭೀತಿ ಕೂಡ ಆವರಿಸಿದೆ. ರಾಜಧಾನಿಯಲ್ಲಿ ಒಟ್ಟು 17 ಮಂದಿಗೆ ಕಾಲರಾ ಪತ್ತೆಯಾಗಿದ್ದು, ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. 

ಕಲುಷಿತ ನೀರಿನ ಪೂರೈಕೆ ಹಿನ್ನೆಲೆ ಈ ಕಾಲರಾ ಆವರಿಸಿದ್ದು, ಈ ಬಗ್ಗೆ ಎಚ್ಚರಿಕೆವಹಿಸುವಂತೆ ಜಲಮಂಡಳಿಗೆ ಪತ್ರ ಕೂಡ ಬರೆಯಲಾಗಿದೆ.

ಇದನ್ನು ಓದಿ: ಕೊರೋನಾ ಭೀತಿ; ಬೆಂಗಳೂರಿನಲ್ಲಿ ಇಂದಿನಿಂದ ಒಂದು ತಿಂಗಳು ಶಾಲೆಗಳಿಗೆ ರಜೆ

ಇನ್ನು ಈ ಕುರಿತು ಮಾತನಾಡಿರುವ ಬಿಬಿಎಂಪಿ ಮುಖ್ಯ ವೈದ್ಯಾಧಿಕಾರಿ ಡಾ. ವಿಜಯೇಂದ್ರ, ಯಾವ ರೋಗಿಯ ಜೀವಕ್ಕೂ ಅಪಾಯವಿಲ್ಲ. ಎಲ್ಲರೂ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬೇರೆ ಸಂದರ್ಭಗಳಿಗಿಂತ ಬೇಸಿಗೆಯಲ್ಲಿ ಕಾಲರಾ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅನುಮಾನವಿರುವ ಕಡೆ ನೀರಿನ ಮಾದರಿ ಕೂಡಾ ಶೇಖರಣೆ ಮಾಡಿ ಲ್ಯಾಬ್​ಗೆ ಕಳಿಸಲಾಗಿದೆ. ವರದಿ ಬಂದ ಮೇಲೆ ಇದರ ನಿರ್ದಿಷ್ಟ ಕಾರಣ ತಿಳಿಯಲಿದೆ ಎಂದಿದ್ದಾರೆ.
First published: March 9, 2020, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading