ಪಾದರಾಯನಪುರ ಗಲಭೆ ಸಂಬಂಧ ಜಮೀರ್‌ ಅಹಮದ್ ವಿರುದ್ಧ ಗೂಂಡಾ ಕೇಸ್‌ ದಾಖಲಿಸಿ; ಕಟೀಲ್ ಆಗ್ರಹ

ಕೊರೋನಾದಂತಹ ತುರ್ತು ಸಂದರ್ಭದಲ್ಲಿ ಪಾದರಾಯನಪುರ ಗಲಾಟೆ ಅಕ್ಷಮ್ಯ. ಈ ಗಲಭೆಕೋರರ ವಿರುದ್ದ ಸರ್ಕಾರ ಸೂಕ್ತ ಕ್ರಮ ಜರುಗಿಸುತ್ತಿದೆ. ಆದರೆ, ಇದಕ್ಕೆ ಕಾರಣವಾದ ಶಾಸಜ ಜಮೀರ್ ಅಹಮದ್ ವಿರುದ್ಧ ಗೂಂಡಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ನಳಿನ್ ಕುಮಾರ್‌ ಕಟೀಲ್ ಒತ್ತಾಯಿಸಿದ್ದಾರೆ.

ನಳೀನ್ ಕುಮಾರ್ ಕಟೀಲ್

ನಳೀನ್ ಕುಮಾರ್ ಕಟೀಲ್

 • Share this:
  ಬೆಂಗಳೂರು (ಏಪ್ರಿಲ್ 25); ಪಾದರಾಯನಪುರ ಗಲಭೆಗೆ ಮಾಜಿ ಸಚಿವ ಶಾಸಕ ಜಮೀರ್ ಅಹಮದ್ ಅವರೇ ಕಾರಣ ಹೀಗಾಗಿ ಅವರ ವಿರುದ್ಧ ಗೂಂಡಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

  ಇತ್ತೀಚೆಗೆ ಪಾದರಾಯನಪುರದಲ್ಲಿ ವೈದ್ಯ ಇಲಾಖೆ ಸಿಬ್ಬಂದಿಗಳು ಶಂಕಿತ ಕೊರೋನಾ ಸೋಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಮುಂದಾದ ಸಂದರ್ಭದಲ್ಲಿ ದೊಡ್ಡ ಗಲಾಟೆಯೇ ನಡೆದಿತ್ತು. ಇಡೀ ರಾಜ್ಯದ ಗಮನ ಸೆಳೆದ ಈ ಗಲಾಟೆಗೆ ಸಂಬಂಧಿಸಿದಂತೆ ಈವರೆಗೆ 120ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಈ ಗಲಭೆಗೆ ಆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಅವರೇ ಕಾರಣ ಎಂದು ಆರೋಪಿಸಲಾಗಿದೆ.

  ಈ ಗಲಾಟೆಗೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, “ಕೊರೋನಾದಂತಹ ತುರ್ತು ಸಂದರ್ಭದಲ್ಲಿ ಪಾದರಾಯನಪುರ ಗಲಾಟೆ ಅಕ್ಷಮ್ಯ. ಈ ಗಲಭೆಕೋರರ ವಿರುದ್ದ ಸರ್ಕಾರ ಸೂಕ್ತ ಕ್ರಮ ಜರುಗಿಸುತ್ತಿದೆ. ಆದರೆ, ಇದಕ್ಕೆ ಕಾರಣವಾದ ಶಾಸಜ ಜಮೀರ್ ಅಹಮದ್ ವಿರುದ್ಧ ಗೂಂಡಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಕುರಿತು ಮೆಚ್ಚುಗೆ ಸೂಚಿಸಿರುವ ಅವರು, “ಅಮೆರಿಕ, ಇಟಲಿ ದೇಶಗಳು ಕೊರೋನಾ ಕುರಿತು ಸೂಕ್ತ ಎಚ್ಚರಿಕೆವಹಿಸದ ಕಾರಣ ಅತಿಹೆಚ್ಚಿನ ಸಂಖ್ಯೆಯ ಸಾವು ನೋವನ್ನು ಎದುರಿಸಿದೆ.

  ಆದರೆ, ಪ್ರಧಾನಿ ಮೋದಿ ಪ್ರಾರಂಭದ ಹಂತದಲ್ಲೇ ಉತ್ತಮವಾಗಿ ನಿರ್ವಹಣೆ ಮಾಡಿದ್ದರು.ಇವತ್ತು ಇಡೀ ಜಗತ್ತು ಭಾರತದ ಕಡೆ, ಮೋದಿ ತೆಗೆದುಕೊಳ್ಳುವ ತೀರ್ಮಾನದ ಕಡೆ ನೋಡುತ್ತಿದೆ. ಮೋದಿ ತೆಗೆದುಕೊಂಡ ತೀರ್ಮಾನಗಳಿಂದಾಗಿ 3ನೇ ಸ್ಥಾನದಲ್ಲಿದ್ದ ಭಾರತ 11 ಸ್ಥಾನಕ್ಕೆ ಬಂದಿದೆ” ಎಂದು ಪ್ರಶಂಶಿಸಿದ್ದಾರೆ.

  ಇದನ್ನೂ ಓದಿ : Padarayanapura Riot: ರಾಜ್ಯವನ್ನೇ ನಡುಗಿಸಿದ ಪಾದರಾಯನಪುರ ಗಲಾಟೆ, ಕಂಬಿ ಹಿಂದೆ ಆರೋಪಿಗಳು; ಇಲ್ಲಿದೆ ಘಟನೆಯ ಕಂಪ್ಲೀಟ್ ಡೀಟೈಲ್ಸ್‌!
  First published: