ರಕ್ಷಾ ಬಂಧನ ಹಬ್ಬದ ನಿಮಿತ್ತ ಆಗಸ್ಟ್ 22 ರಂದು ನಡೆಯುತ್ತಿರುವ ಕೋವಿಡ್ -19 ಲಸಿಕೆ ಹಾಕುವಿಕೆಯನ್ನು ಸ್ಥಗಿತಗೊಳಿಸುವುದಾಗಿ ಗುಜರಾತ್ ಸರ್ಕಾರ ಶುಕ್ರವಾರ ಘೋಷಿಸಿದೆ. ಹೇಳಿಕೆಯಲ್ಲಿ, ಆರೋಗ್ಯ ಖಾತೆ ನಿರ್ವಹಿಸುವ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಭಾನುವಾರ (ಆಗಸ್ಟ್ 22) ಒಂದು ದಿನದ ವಿರಾಮ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದರಿಂದ ಲಸಿಕೆ ಹಾಕುವ ಅಭಿಯಾನದಲ್ಲಿ ತೊಡಗಿರುವ ಮಹಿಳಾ ಆರೋಗ್ಯ ಕಾರ್ಯಕರ್ತರು ತಮ್ಮ ಕುಟುಂಬದೊಂದಿಗೆ ರಕ್ಷಾ ಬಂಧನವನ್ನು ಆಚರಿಸಬಹುದು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರದವರೆಗೆ, ಗುಜರಾತ್‌ನಲ್ಲಿ 4.19 ಕೋಟಿಗೂ ಹೆಚ್ಚು ಜನರಿಗೆ ಸರ್ಕಾರವು ಕೋವಿಡ್ -19 ಲಸಿಕೆಗಳನ್ನು ನೀಡಿದೆ. ಗುಜರಾತ್‌ನಲ್ಲಿ ಗುರುವಾರ 19 ಹೊಸ ಕರೋನ ವೈರಸ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿನ ಸಂಖ್ಯೆ 8,25,255 ಕ್ಕೆ ತಲುಪಿದೆ ಅದರಲ್ಲಿ ಇದುವರೆಗೆ 10,078 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ಪುರಾಣದ ಪ್ರಕಾರ ದೇವತೆಗಳಿಗೂ- ರಾಕ್ಷಸರಿಗೂ ಹನ್ನೆರಡು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತಂತೆ, ರಾಕ್ಷಸರು ದೇವತೆಗಳನ್ನು ಸೋಲಿಸಿ, ದೇವಲೋಕವನ್ನು ಆಕ್ರಮಿಸಿ, ದೇವತೆಗಳನ್ನು ಅಲ್ಲಿಂದ ಒದ್ದೋಡಿಸಿದ್ದಾರೆ. ಮೂರು ಲೋಕಗಳ ಆಡಳಿತವನ್ನು ತಮ್ಮ ಕೈವಶ ಮಾಡಿಕೂಂಡ ದಾನವರು, ಯಾವುದೇ ಯಜ್ಞಗಳನ್ನು ಮಾಡಬಾರದೆಂದೂ, ತಮ್ಮನ್ನೇ ಪೂಜಿಸಬೇಕೆಂದು ಎಲ್ಲರರಿಗೂ ಕಟ್ಟಪ್ಪಣೆ ನೀಡುತ್ತಾರೆ ಹಾಗೂ ಹೆದರಿಸುತ್ತಾರೆ. ಇದರ ಪರಿಣಾಮ ಎಲ್ಲಾ ರೀತಿಯ ಆಚರಣೆಗಳು ನಿಂತು ಹೋಗುತ್ತವೆ, ದೇವತೆಗಳ ರಾಜ ಇಂದ್ರನು, ಗುರು ಬೃಹಸ್ಪತಿ ಆಚಾರ್ಯರಲ್ಲಿ ದೇವತೆಗಳಿಗೆ ಬಂದಿರುವ ಈ ಸಂಕಷ್ಟದ ಕುರಿತು ಹೇಳಿಕೊಳ್ಳುತ್ತಾನೆ. ಆ ಸಮಯದಲ್ಲಿ ಬೃಹಸ್ಪತಿ ಅವರು ಕಿವಿ ಮಾತು ಹೇಳುತ್ತಾರೆ.
ಇದನ್ನೂ ಓದಿ: ತಾಲಿಬಾನ್ ಪ್ರಮುಖ ನಾಯಕ ಶೇರ್ ಮೊಹಮ್ಮದ್ಗೆ ಭಾರತದ ನಂಟು; ನೆನಪು ಹಂಚಿಕೊಂಡ ಮಿಲಿಟರಿ ಸ್ನೇಹಿತರು
ಗುರುಗಳ ಬಳಿ ತನ್ನ ವೇದನೆಯನ್ನು ಹೇಳಿಕೊಳ್ಳುವ ಇಂದ್ರನು ‘ಈ ಪರಿಸ್ಥಿತಿಯಲ್ಲಿ ಯುದ್ಧ ಮಾಡಲು ಆಗುತ್ತಿಲ್ಲ, ಮಾಡದೆ ಇದ್ದರೆ ನಮ್ಮವರಿಗೆ ಉಳಿಗಾಲವಿಲ್ಲ, ಏನು ಮಾಡಬೇಕೆಂದು ಅರಿಯದವನಾಗಿದ್ದೇನೆ. ಯಾವುದಾದರೂ ಉಪಾಯ ಸೂಚಿಸಿ’ ಎಂದಾಗ ದೇವೇಂದ್ರನಿಗೆ ಯುದ್ದದಲ್ಲಿ ವಿಜಯ ಪ್ರಾಪ್ತಿಯಾಗಲು, ಶ್ರಾವಣಪೂರ್ಣಿಮೆ ದಿನ ಈ ವಿಶಿಷ್ಟ ಹಬ್ಬವಾದ ರಕ್ಷಾ ಬಂಧನವನ್ನು ಪ್ರಾರಂಭಿಸುತ್ತಾರೆ ಎಂಬುದು ನಂಬಿಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ