• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೊನಾ, ಬ್ಲ್ಯಾಕ್ ಫಂಗಸ್ ಔಷಧಗಳ ಮೇಲೆ GST ಇಲ್ಲ, ಲಸಿಕೆ ಮೇಲಿನ GST ಹಣವೂ ರಾಜ್ಯಗಳಿಗೆ ಹಂಚಿಕೆ

ಕೊರೊನಾ, ಬ್ಲ್ಯಾಕ್ ಫಂಗಸ್ ಔಷಧಗಳ ಮೇಲೆ GST ಇಲ್ಲ, ಲಸಿಕೆ ಮೇಲಿನ GST ಹಣವೂ ರಾಜ್ಯಗಳಿಗೆ ಹಂಚಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಔಷಧಗಳು, ವ್ಯಾಕ್ಸಿನ್​​, ಪಿಪಿಇ ಕಿಟ್​​, ಮಾಸ್ಕ್​​​ ಆಕ್ಸಿ ಮೀಟರ್​​ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳಿಗೆ ಜಿಎಸ್​ಟಿ ರದ್ದು ಅನ್ವಯಿಸಲಿದೆ.

  • Share this:

ನವದೆಹಲಿ: ಕೊರೊನಾ, ಲಾಕ್​ಡೌನ್​​ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ದೇಶದ ಜನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಹಲವು ವಿನಾಯ್ತಿಗಳನ್ನು ನೀಡುವ ಮೂಲಕ ಜನಸಾಮಾನ್ಯರ ಹೊರೆ ತಗ್ಗಿಸಿದ್ದಾರೆ. ಇಂದು ನಡೆದ GST ಕೌನ್ಸಿಲ್​ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶವಾಸಿಗಳು ಎದುರಿಸುತ್ತಿರುವ ಕೋವಿಡ್​​, ಬ್ಲ್ಯಾಕ್​​ ಫಂಗಸ್​​​ ಕಾಯಿಲೆಯ ಔಷಧದ ಮೇಲಿನ GSTಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಕೊರೊನಾ ಸಂಬಂಧಿತ ಎಲ್ಲಾ ಔಷಧಗಳು, ಬ್ಲ್ಯಾಕ್​​ ಫಂಗಸ್​​ ಚಿಕಿತ್ಸೆಯ ಎಲ್ಲಾ ಮೆಡಿಸನ್​ಗಳ ಮೇಲಿನ ತೆರಿಗೆಯನ್ನು ರದ್ದುಗೊಳಿಸಿರುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್​ ಸಭೆ ಬಳಿಕ ಘೋಷಿಸಿದ್ದಾರೆ.


ಇನ್ನು ಲಸಿಕೆಗಳ ಮೇಲಿನ ಶೇ.5ರಷ್ಟು GST ಮುಂದುವರೆಯಲಿದೆಯಾದರೂ GST ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಹೇಳಿರುವಂತೆ ಶೇ.75ರಷ್ಟು ಲಸಿಕೆಯನ್ನು GSTಯೊಂದಿಗೆ ಖರೀದಿಸಲಾಗುವುದು. GSTಯಿಂದ ಬಂದ ಲಾಭದಲ್ಲಿ ಶೇ.70ರಷ್ಟು ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು. ಇದರಿಂದ ರಾಜ್ಯಗಳ ಲಸಿಕೆ ತೆರಿಗೆ ಹೊರೆ ತಗ್ಗಲಿದೆ.


ಕೊರೊನಾ ಸಂಬಂಧಿತ ವಸ್ತುಗಳನ್ನು ನಿರ್ಮಿಸುತ್ತಿರುವ ಕಂಪನಿಗಳಿಗೆ ತೆರಿಗೆ ವಿನಾಯ್ತಿಯನ್ನು ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಲಾಗಿದೆ. ಕಳೆದ GST ಕೌನ್ಸಿಲ್​ ಸಭೆಯಲ್ಲಿ ರಾಜ್ಯ ಸರ್ಕಾರಗಳು ಕೋವಿಡ್​ ಔಷಧ, ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದವು. ಈ ಬಾರಿಯ ಸಭೆಯಲ್ಲಿ ರಾಜ್ಯ ಸರ್ಕಾರಗಳ ಮನವಿಯನ್ನು ಪುರಸ್ಕರಿಸಿ GST ರದ್ದುಗೊಳಿಸಲಾಗಿದೆ. ಔಷಧಗಳು, ವ್ಯಾಕ್ಸಿನ್​​, ಪಿಪಿಇ ಕಿಟ್​​, ಮಾಸ್ಕ್​​​ ಆಕ್ಸಿ ಮೀಟರ್​​ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳಿಗೆ ಜಿಎಸ್​ಟಿ ರದ್ದು ಅನ್ವಯಿಸಲಿದೆ.


ಇದನ್ನೂ ಓದಿ: Bangalore Beat Corona: ಕೊರೊನಾ ವಿರುದ್ಧ ಕೊನೆಗೂ ಗೆದ್ದ ಬೆಂಗಳೂರು: ಪಾಸಿಟಿವಿಟಿ ದರದಲ್ಲಿ ದಾಖಲೆಯ ಇಳಿಕೆ


ಇನ್ನು ಕೊರೊನಾದಿಂದ ಗುಣಮುಖರಾದವರಲ್ಲಿ ಕಂಡು ಬರುತ್ತಿರುವ ಬ್ಲ್ಯಾಕ್​​ ಫಂಗಸ್​​ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದ್ದು, ಮೂರು ವಾರಗಳ ಅಂತರದಲ್ಲಿ ಪ್ರಕರಣಗಳ ಸಂಖ್ಯೆ 31,216ಕ್ಕೆ ಏರಿಕೆಯಾಗಿದೆ. ಜತೆಗೆ ಇದೇ ಅವಧಿಯಲ್ಲಿ ಸಾವಿಗೀಡಾಗಿದವರ ಸಂಖ್ಯೆ 2,109 ತಲುಪಿದೆ. 3 ವಾರಗಳ ಅಂತರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 150ರಷ್ಟು ಏರಿಕೆ ದಾಖಲಾಗಿದೆ. ಇದರಿಂದ ಮೊದಲೇ ಒತ್ತಡದಲ್ಲಿರುವ ಆರೋಗ್ಯ ವ್ಯವಸ್ಥೆ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿಯಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: