ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 24 ಗಂಟೆ ದಿನಸಿ ಅಂಗಡಿ ತೆರೆಯಲು ಅವಕಾಶ

ರಾಜ್ಯದ ಎಲ್ಲ ಕಡೆ ದಿನಸಿ, ಕಿರಾಣಿ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‌ಗಳು ದಿನದ 24 ಗಂಟೆ ತೆರೆಯಲು ಅನುಮತಿ ನೀಡಲಾಗಿದೆ. ಹಾಗೆಯೇ  ವೈದ್ಯಕೀಯ ಚಿಕಿತ್ಸೆ, ನೆರವು ಬೇಕಾದವರಿಗೆ ಕರ್ಫ್ಯೂ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

news18-kannada
Updated:March 26, 2020, 7:11 AM IST
ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 24 ಗಂಟೆ ದಿನಸಿ ಅಂಗಡಿ ತೆರೆಯಲು ಅವಕಾಶ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಹೀಗಾಗಿ ರೈಲು, ಬಸ್ಸು ಸಂಚಾರ ಸೇರಿ ಎಲ್ಲ ವಾಹನಗಳ ಓಡಾಟವನ್ನು ರದ್ದು ಮಾಡಲಾಗಿದೆ. ದೇಶವನ್ನು ಏಕಾಏಕಿ ಬಂದ್ ಮಾಡಿರುವುದರಿಂದ ದಿನನಿತ್ಯದ ವಹಿವಾಟಿನ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿದೆ. ದೇಶ ಲಾಕ್​ ಡೌನ್​ ಆಗಿ ಎರಡು ದಿನ ಆಗಿರುವುದರಿಂದ ಆಹಾರ ಸಾಮಗ್ರಿಗಳ ಕೊರತೆ ಕಂಡು ಬಂದಿಲ್ಲ. ಆದರೆ ಕೆಲವು ದಿನಗಳ ನಂತರ ದಿನನಿತ್ಯ ಬಳಕೆಯ ದಿನಸಿಗಳ ಅಭಾವ ಎದುರಾಗಲಿದೆ.

ಆಹಾರ ಸಾಮಗ್ರಿ ಅಭಾವ ಎದುರಾಗುವುದನ್ನು ಮನಗಂಡಿರುವ ಸರ್ಕಾರ, ಅಗತ್ಯ ಕ್ರಮ ವಹಿಸುತ್ತಿದೆ. ದಿನಬಳಕೆಯ ವಸ್ತುಗಳ ಸಾಗಟಕ್ಕೆ ಇಂದಿನಿಂದ ಬೆಂಗಳೂರಿನಾದ್ಯಂತ 1 ಸಾವಿರ ಬಸ್​ಗಳ‌ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಬಳಕೆ ವಸ್ತುಗಳ ಪೂರೈಕೆ ಮತ್ತು ತುರ್ತು ಆರೋಗ್ಯ ಸೇವೆಗಳಿಗೆ ಮಾತ್ರ ಬಸ್ ಬಳಕೆ ಸೀಮಿತಗೊಳಿಸಲಾಗಿದೆ. 

ಅದೇ ರೀತಿ ದಿನದ 24 ಗಂಟೆ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು,  ಸಾರ್ವಜನಿಕರ ಅನುಕೂಲಕ್ಕಾಗಿ ಆಹಾರ ಪದಾರ್ಥ ಖರೀದಿಸಲು ಅನುವು ಮಾಡಿಕೊಡಿಕೊಡಲಾಗಿದೆ. ರಾಜ್ಯದ ಎಲ್ಲ ಕಡೆ ದಿನಸಿ, ಕಿರಾಣಿ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‌ಗಳು ದಿನದ 24 ಗಂಟೆ ತೆರೆಯಲು ಅನುಮತಿ ನೀಡಲಾಗಿದೆ. ಹಾಗೆಯೇ  ವೈದ್ಯಕೀಯ ಚಿಕಿತ್ಸೆ, ನೆರವು ಬೇಕಾದವರಿಗೆ ಕರ್ಫ್ಯೂ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಕೊರೋನಾ ಎಫೆಕ್ಟ್​​​: ದೇಶಾದ್ಯಂತ ಏ.14ರವರೆಗೂ ರೈಲು ಸಂಚಾರ ಸ್ತಬ್ಧ; ರೈಲ್ವೆ ಇಲಾಖೆ ಅಧಿಕೃತ ಆದೇಶ
First published: March 26, 2020, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading