ವೆಂಟಿಲೇಟರ್-ಸರ್ಜಿಕಲ್ ಮಾಸ್ಕ್‌ಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ ಸರ್ಕಾರ

ಇಡೀ ದೇಶಕ್ಕೆ ಇಂದು ಕೋವಿಡ್ -19 ಆವರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ವೆಂಟಿಲೇಟರ್‌ಗಳು ಮತ್ತು ಇತರ ವಸ್ತುಗಳ ತಕ್ಷಣದ ಅಗತ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಮೂಲಭೂತ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಸೆಸ್‌ನಿಂದ ವಿನಾಯಿತಿ ನೀಡಿದೆ.

ವೆಂಟಿಲೇಟರ್‌

ವೆಂಟಿಲೇಟರ್‌

  • Share this:
ನವ ದೆಹಲಿ (ಏಪ್ರಿಲ್ 10): ಮಾರಣಾಂತಿಕ ಕೊರೋನಾ ವೈರಸ್ ವಿರುದ್ಧ ಹೋರಾಡುವ ಸಲುವಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ವೆಂಟಿಲೇಟರ್, ಮಾಸ್ಕ್,  ಸರ್ಜಿಕಲ್ ಮಾಸ್ಕ್‌, ವೈಯಕ್ತಿಕ ರಕ್ಷಣಾ ಕಿಟ್ ಮತ್ತು ಕೋವಿಡ್ -19 ಪರೀಕ್ಷಾ ಕಿಟ್‌ಗಳ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಸೆಸ್ ಅನ್ನು ಗುರುವಾರ ತೆಗೆದುಹಾಕಿದೆ.

“ಇಡೀ ದೇಶಕ್ಕೆ ಇಂದು ಕೋವಿಡ್ -19 ಆವರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ವೆಂಟಿಲೇಟರ್‌ಗಳು ಮತ್ತು ಇತರ ವಸ್ತುಗಳ ತಕ್ಷಣದ ಅಗತ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಮೂಲಭೂತ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ಸೆಸ್‌ನಿಂದ ವಿನಾಯಿತಿ ನೀಡಿದೆ. ಈ ಸರಕುಗಳ ಆಮದಿನ ಮೇಲಿನ ಸುಂಕ ಇಳಿಸಿರುವ ಕಾರಣ ದೇಶದ ಆದಾಯದ ಮೇಲೂ ತಕ್ಷಣದ ಪರಿಣಾಮ ಬೀರಲಿದೆ” ಎಂದು ಆದಾಯ ಇಲಾಖೆ ತಿಳಿಸಿದೆ.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಸ್ಟಮ್ಸ್ ಶುಲ್ಕ ವಿನಾಯಿತಿ ಸೆಪ್ಟೆಂಬರ್ 30ರ ವರೆಗೆ ಮುಂದುವರೆಯಲಿದೆ ಎಂದು ಕಂದಾಯ ಇಲಾಖೆ ತಿಳಿಸಲಾಗಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 199ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 33 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, 6.412 ಜನಕ್ಕೆ ಈ ಸೋಂಕು ತಗುಲಿರುವುದು ದೃಢವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಭಾರತದಲ್ಲಿ 199ಕ್ಕೆ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ; 6,412 ಜನರಿಗೆ ತಗುಲಿದೆ ಸೋಂಕು!
First published: