ಕೊರೋನಾ ಸಮುದಾಯಿಕವಾಗಿ ಹರಡಿರುವುದನ್ನು ಕೊನೆಗೂ ಒಪ್ಪಿಕೊಂಡ ಕೇಂದ್ರ ಸರ್ಕಾರ

ರೋಗಿಗಳ ಸೋಂಕಿನ ಮೂಲ ಹುಡುಕಲು ಅಸಾಧ್ಯವಾದಾಗ ಸಾಮುದಾಯಿಕವಾಗಿ ಅದು ಹರಡುತ್ತಿರುವುದರ ಕುರುಹು. ಭಾರತದಲ್ಲಿ ಕೊರೋನಾ ಹರಡುವಿಕೆ ಈ ಮೂರನೇ ಹಂತ ತಲುಪಿರುವುದನ್ನು ಕೇಂದ್ರ ಸರ್ಕಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.

Vijayasarthy SN | news18
Updated:October 18, 2020, 7:17 PM IST
ಕೊರೋನಾ ಸಮುದಾಯಿಕವಾಗಿ ಹರಡಿರುವುದನ್ನು ಕೊನೆಗೂ ಒಪ್ಪಿಕೊಂಡ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • News18
  • Last Updated: October 18, 2020, 7:17 PM IST
  • Share this:
ನವದೆಹಲಿ(ಅ. 18): ದೇಶದ ಹಲವೆಡೆ ಕೊರೋನಾ ವೈರಸ್ ಮಿತಿಮೀರಿ ಹರಡುತ್ತಿರುವುದು ಕಣ್ಣಿಗೆ ಕಟ್ಟಿದಂತಿರುವ ಸತ್ಯವಾಗಿದೆ. ಆದರೂ ಕೇಂದ್ರ ಸರ್ಕಾರ ಇದೂವರೆಗೂ ಇದನ್ನು ತಳ್ಳಿಹಾಕುತ್ತಲೇ ಬಂದಿತ್ತು. ಸೋಂಕು ಪ್ರಾರಂಭವಾಗಿ ಒಂಬತ್ತು ತಿಂಗಳ ಬಳಿಕ ಸರ್ಕಾರ ಇದೀಗ ಕೊರೋನಾ ಸಮುದಾಯಿಕವಾಗಿ ಹರಡಿರುವುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿದೆ. ಸಂಡೇ ಸಂವಾದ ಕಾರ್ಯಕ್ರಮದ ಆರನೇ ಸಂಚಿಕೆಯ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ವಿವಿಧ ರಾಜ್ಯಗಳ ವಿವಿಧೆಡೆ ಸಮುದಾಯದಲ್ಲಿ ಕೊರೋನಾವೈರಸ್ ಹರಡುತ್ತಿರುವುದು ಹೌದು ಎಂದು ಹೇಳಿದ್ದಾರೆ.

“ಹಲವು ರಾಜ್ಯಗಳ ವಿವಿಧ ಸ್ಥಳಗಳಲ್ಲಿ, ಅದರಲ್ಲೂ ಜನಸಂದಣಿ ಪ್ರದೇಶಗಳಲ್ಲಿ ವೈರಸ್ ಸಾಮುದಾಯಿಕವಾಗಿ ಹರಡುವುದು ನಿರೀಕ್ಷಿತವೇ. ಆದರೆ, ದೇಶದ ಎಲ್ಲಾ ಕಡೆಯೂ ಈ ಸ್ಥಿತಿ ಇಲ್ಲ. ಕೆಲ ರಾಜ್ಯಗಳ ನಿರ್ದಿಷ್ಟ ಜಿಲ್ಲೆಗಳಿಗೆ ಮಾತ್ರ ಇದು ಸೀಮಿತವಾಗಿದೆ” ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಸಂಡೇ ಸಂವಾದದ ವೇಳೆ, ಪಶ್ಚಿಮ ಬಂಗಾಳದಲ್ಲಿ ಸಾಮುದಾಯಿಕವಾಗಿ ಕೋವಿಡ್ ಹರಡುತ್ತಿರುವ ಸುದ್ದಿಗಳ ಬಗ್ಗೆ ಅವರು ಈ ಮೇಲಿನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ತನ್ನ ರಾಜ್ಯದಲ್ಲಿ ಕೊರೋನಾ ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂದು ಹೇಳಿತ್ತು. ಕೇರಳ, ದೆಹಲಿ ಸರ್ಕಾರಗಳೂ ಕೂಡ ಇದರ ಬಗ್ಗೆ ಮಾತನಾಡಿದ್ದವು. ಆದರೆ, ಕೇಂದ್ರ ಸರ್ಕಾರ ಯಾವತ್ತೂ ಕೂಡ ವೈರಸ್ ಹರಡುವಿಕೆ ಮೂರನೇ ಹಂತದಲ್ಲಿರುವುದನ್ನು ಒಪ್ಪಿಕೊಂಡಿಯೇ ಇರಲಿಲ್ಲ. ಅಲ್ಲಲ್ಲಿ ಸಣ್ಣಮಟ್ಟದಲ್ಲಿ ಕೊರೋನಾ ಹರಡುತ್ತಿದೆ ಎಂದಷ್ಟೇ ಹೇಳುತ್ತಿತ್ತು. ಈಗ ಮೊದಲ ಬಾರಿಗೆ ಅದು ಕೋವಿಡ್ ಸಾಮುದಾಯಿಕವಾಗಿ ಹರಡುತ್ತಿರುವುದು ಒಪ್ಪಿಕೊಂಡಿದೆ.

ಇದನ್ನೂ ಓದಿ: ಚೀನಾ ಅಪಾಯ ವಿಚಾರ: ಯಾವುದೇ ಪರಿಸ್ಥಿತಿ ಎದುರಿಸಲು ನಮ್ಮ ಸೇನೆ ಸನ್ನದ್ಧ - ಅಮಿತ್ ಶಾ

ಕೊರೋನಾ ಸಾಮುದಾಯಿಕವಾಗಿ ಹರಡುತ್ತಿದೆ ಎಂದರೆ ಅದು ಮೂರನೇ ಹಂತ ಪ್ರವೇಶ ಮಾಡಿದಂತಾಗಿದೆ. ಇದನ್ನೂ ದಾಟಿ ನಾಲ್ಕನೇ ಹಂತ ಪ್ರವೇಶಿಸಿದರೆ ಅದು ಎಪಿಡೆಮಿಕ್ ಕಾಯಿಲೆ ಎನಿಸುತ್ತದೆ. ಎಪಿಡೆಮಿಕ್ ಎಂದರೆ ಒಂದು ಸಮುದಾಯದಲ್ಲಿ ಬಹಳ ವೇಗವಾಗಿ ದೊಡ್ಡ ಸಂಖ್ಯೆಯಲ್ಲಿ ಜನರಿಗೆ ವ್ಯಾಪಿಸುವ ರೋಗವಾಗುತ್ತದೆ. ಪ್ಲೇಗ್, ಇನ್​ಫ್ಲೂಯೆಂಜಾ, ಇಬೋಲಾ, ಸಿಡುಬು, ಮಲೇರಿಯಾ ಇತ್ಯಾದಿ ರೋಗಳನ್ನ ಸಾಂಕ್ರಾಮಿಕ ಕಾಯಿಲೆ ಎಂದು ಪರಿಗಣಿಸಲಾಗಿದೆ. ಈಗ ಕೋವಿಡ್ ಕೂಡ ಎಪಿಡೆಮಿ ಎಂದು ಪರಿಗಣಿತವಾಗಿದೆ.

ರೋಗಿಗಳ ಸೋಂಕಿನ ಮೂಲ ಹುಡುಕುವುದು ಅಸಾಧ್ಯವಾದಾಗ ಅದು ಸಾಮುದಾಯಿಕ ಹಂತ ತಲುಪಿರುತ್ತದೆ. ಈಗ ಕೋವಿಡ್ ರೋಗಿಗಳ ಸೋಂಕಿ ಮೂಲ ಪತ್ತೆ ಮಾಡುವುದು ನಿಲ್ಲಿಸಿ ಹಲವು ದಿನಗಳೇ ಆಗಿವೆ. ಒಂದೆರಡು ತಿಂಗಳ ಹಿಂದೆಯೇ ಇದು ಅನೇಕ ಕಡೆ ಸಾಮುದಾಯಿಕವಾಗಿ ಹರಡಲು ಪ್ರಾರಂಭವಾಗಿರುವುದು ವೇದ್ಯವಾಗಿದೆ.

ಇದನ್ನೂ ಓದಿ: ಮೈತ್ರಿಕೂಟದಿಂದ ಹೊರ ಬಂದಿರುವುದು ನನ್ನದೇ ನಿರ್ಧಾರ; ಅಮಿತ್​ ಶಾ ಹೇಳಿಕೆ ಬಗ್ಗೆ ಚಿರಾಗ್​ ಪಾಸ್ವಾನ್​ ಸ್ಪಷ್ಟನೆಇದೇ ವೇಳೆ, ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಅವರಿಂದ ನೇಮಕವಾದ ಸಮಿತಿಯೊಂದು ನಿನ್ನೆ ವರದಿ ನೀಡಿದ್ದು, ಅದರ ಪ್ರಕಾರ ದೇಶದ ಶೇ. 30ಕ್ಕಿಂತ ಹೆಚ್ಚು ಮಂದಿಯಲ್ಲಿ ಕೊರೋನಾದ ಪ್ರತಿಕಾಯ (Antibody) ಇದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಫೆಬ್ರವರಿಯಲ್ಲಿ ಭಾರತದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದ್ದು. ಒಂಬತ್ತು ತಿಂಗಳಲ್ಲಿ ಅಧಿಕೃತವಾಗಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 75 ಲಕ್ಷ ದಾಟಿದೆ. 1.14 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷದ ಸಮೀಪ ಇದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಆಂಧ್ರ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಕೊರೋನಾ ಸೋಂಕು ಅತಿಹೆಚ್ಚು ವ್ಯಾಪಿಸಿದೆ.
Published by: Vijayasarthy SN
First published: October 18, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading