ಕೊರೋನಾ ರೋಗಿಗಳಿಗೆ ಬೆಡ್ ಕೊಡದೆ ಸತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ಕಣ್ಗಾವಲು

ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ, ಐಎಎಸ್ ಅಧಿಕಾರಿಗಳ ಕಣ್ಗಾವಲು ಇರಿಸಿದೆ. ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇಡಲು ಹಿರಿಯ ಐಎಎಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಿದೆ. ಬೆಂಗಳೂರಿನ 31 ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇಡಲು 7 ಜನ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ತಂಡ ಕೆಲಸ ಮಾಡಲಿದೆ.

ಸಾಂದರ್ಭಿ ಚಿತ್ರ

ಸಾಂದರ್ಭಿ ಚಿತ್ರ

  • Share this:
ಬೆಂಗಳೂರು(ಜು. 20): ಕೊವೀಡ್ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಹಾಗೂ ಬೆಡ್ ನೀಡದೆ ಕಳ್ಳಾಟ ಆಡ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಖುದ್ದಾಗಿ ತಾಕೀತು ಮಾಡಿದೆ. ಬಿಬಿಎಂಪಿಯಿಂದ ಶಿಫಾರಸ್ಸುಗೊಂಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ಕೋವಿಡ್ ಚಿಕಿತ್ಸೆಯ ದರ ಪಟ್ಟಿಯ ಫಲಕವನ್ನು ಪ್ರದರ್ಶಿಸುವಂತೆ ಸೂಚನೆ ಕೂಡಾ ನೀಡಿದೆ.

ಪ್ರಮುಖವಾಗಿ ಶಿಫಾರಸ್ಸುಗೊಂಡ ರೋಗಿಗಳಿಂದ ಪಡೆಯುವ ಮತ್ತು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಬಂದು ದಾಖಲಾಗುವ ರೋಗಿಗಳಿಂದ ಪಡೆಯುವ ದರಪಟ್ಟಿಯ ಬಗ್ಗೆ ಆಸ್ಪತ್ರೆಗಳ ನಾಮಫಲಕಗಳಲ್ಲಿ ಪ್ರದರ್ಶನ ಮಾಡುವಂತೆ ಸೂಚಿಸಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳು ಕೊರೋನಾ ಪೀಡಿತ ರೋಗಿಗಳಿಗೆ ಶೇಕಡಾ 50ರಷ್ಟು ಕಡ್ಡಾಯವಾಗಿ ಮೀಸಲಿಡುವಂತೆ ಸೂಚಿಸಿದ್ದು, ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಇನ್ನು, ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ, ಐಎಎಸ್ ಅಧಿಕಾರಿಗಳ ಕಣ್ಗಾವಲು ಇರಿಸಿದೆ. ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇಡಲು ಹಿರಿಯ ಐಎಎಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಿದೆ. ಬೆಂಗಳೂರಿನ 31 ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇಡಲು 7 ಜನ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ತಂಡ ಕೆಲಸ ಮಾಡಲಿದೆ.

ಛತ್ತೀಸ್​ಗಢದಲ್ಲಿ ಅಭಿವೃದ್ದಿಗಾಗಿ ಸರ್ಕಾರದ ನೆರವು ಕೇಳಿದ ಜನರ ಮೇಲೆ ನಕ್ಸಲರ ಹಲ್ಲೆ; 25 ಮಂದಿಗೆ ಗಾಯ

ಆ ತಂಡಗಳಲ್ಲಿ ಇರುವ ಐಎಎಸ್ ಅಧಿಕಾರಿಗಳು ಅಂದರೆ ಉಮಾ ಮಹದೇವನ್, ಮೊಹಮ್ಮದ್ ಮೊಹ್ಸೀನ್, ಏಕರೂಪ ಕೌರ್, ಮಹೇಶ್ವರ ರಾವ್, ಕಪಿಲ್ ಮೋಹನ್, ಹರ್ಷಗುಪ್ತ ಮತ್ತು ಗೌರವ್ ಗುಪ್ತ ನೇತೃತ್ವದ 7 ತಂಡಗಳ ರಚನೆ ಮಾಡಿದ್ದು, ಇವರು ಪ್ರತಿ ಐಎಎಸ್ ಅಧಿಕಾರಿಗೆ ತಲಾ 4 ರಿಂದ 6 ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ ಹೊತ್ತಿಕೊಳ್ಳಬೇಕಿದೆ.

ಈ ಐಎಎಸ್ ಅಧಿಕಾರಿಗಳ ತಂಡದಲ್ಲಿ ಪ್ರತಿ ಆಸ್ಪತ್ರೆಗೂ ತಲಾ ಒಬ್ಬೊಬ್ಬ ಸ್ಥಳೀಯ ಬಿಬಿಎಂಪಿ ಅಥವಾ ಬೆಸ್ಕಾಂ ಅಧಿಕಾರಿಗಳು, ತಲಾ ಒಬ್ಬೊಬ್ಬ ಆರೋಗ್ಯ ‌ಮಿತ್ರ ಅಧಿಕಾರಿಗಳು ಇರಲಿದ್ದಾರೆ.  ತಂಡದಲ್ಲಿರುವ ಅಧಿಕಾರಿಗಳಾದ ಬಿಬಿಎಂಪಿ, ಬೆಸ್ಕಾಂ, ಆರೋಗ್ಯ ಮಿತ್ರ ಅಧಿಕಾರಿಗಳ ಮೊಬೈಲ್ ನಂಬರ್ ಗಳನ್ನು ಖಾಸಗಿ ಆಸ್ಪತ್ರೆಗಳು ಡಿಸ್ಪ್ಲೇ ಮಾಡುವಂತೆ ಸರ್ಕಾರ ಸೂಚಿಸಿದೆ.

ಒಟ್ಟಾರೆ ಬೆಡ್ ಕೊಡುವುದಾಗಿ ದಿನ ಕಳೆದಂತೆ ಸರ್ಕಾರಕ್ಕೆ ಸುಳ್ಳು ಹೇಳಿಕೊಂಡು ಬರುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಖಡಕ್ ತಾಕೀತು ಮಾಡಿದ್ದು, ಸರ್ಕಾರದ ಈ ಆದೇಶವನ್ನು ಖಾಸಗಿ ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಪಾಲಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
Published by:Latha CG
First published: