ತೀವ್ರಗೊಂಡ ಕೋವಿಡ್​​​-19: ಭಾರತದ 20 ಕೊರೋನಾ ಹಾಟ್​​ಸ್ಪಾಟ್​​​ ಗುರುತಿಸಿದ ಕೇಂದ್ರ ಸರ್ಕಾರ

ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ವೈರಸ್ ಹರಡುತ್ತಿರುವುದರಿಂದ 150ಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಭೆ ನಡೆದ ನಿಜಾಮುದ್ದೀನ್​ ಪ್ರದೇಶದ 1,800 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಏ.02): ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​​​​​​​ ಸೋಂಕಿನ ಅಟ್ಟಹಾಸ ಭಾರತದಲ್ಲೂ ಮುಂದುವರೆದಿದೆ. ಇದುವರೆಗೂ ದೇಶದಲ್ಲಿ ಈ ವೈರಸ್​ಗೆ 50 ಮಂದಿ ಬಲಿಯಾಗಿದ್ದಾರೆ. ಜತೆಗೆ ಸೋಂಕಿತರ ಸಂಖ್ಯೆ 1,965ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆಯೇ ಕೇಂದ್ರ ಸರ್ಕಾರ ಭಾರತದ 20 ಕೊರೋನಾ ಹಾಟ್​​ಸ್ಪಾಟ್​​ಗಳನ್ನು ಗುರುತಿಸಿದೆ. ಹಾಗೆಯೇ 22 ಹಾಟ್​​ಸ್ಪಾಟ್​​ ಆಗುವ ಸಾಧ್ಯತೆಗಳಿರುವ ಪ್ರದೇಶಗಳನ್ನು ಕಂಡುಹಿಡಿಯಲಾಗಿದೆ. ಈ ಪ್ರದೇಶಗಳಲ್ಲಿ ಮುಂಜಾಗೃತ ಕ್ರಮವಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

  ಭಾರತ ಗುರುತಿಸಿದ ಕೊರೋನಾ ಹಾಟ್'ಸ್ಪಾಟ್ ಹೀಗಿದೆ..

  • ಅಹಮದಾಬಾದ್, ಗುಜರಾತ್

  • ಇಂದೋರ್, ಮಧ್ಯಪ್ರದೇಶ

  • ನವಾನ್‌ಶಹರ್, ಪಂಜಾಬ್

  • ಪಥನಮತ್ತಟ್ಟ, ಕೇರಳ

  • ಕಾಸರಗೋಡು, ಕೇರಳ

  • ನೋಯ್ಡಾ, ಉತ್ತರ ಪ್ರದೇಶ

  • ದಿಲ್ಶಾದ್ ಗಾರ್ಡನ್, ದೆಹಲಿ

  • ನಿಜಾಮುದ್ದೀನ್, ದೆಹಲಿ

  • ಪುಣೆ, ಮಹಾರಾಷ್ಟ್ರ

  • ಬೆಂಗಳೂರು, ಕರ್ನಾಟಕ

  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

  • ಈರೋಡ್, ತಮಿಳುನಾಡು

  • ಮೀರತ್, ಉತ್ತರ ಪ್ರದೇಶ

  • ಭಿಲ್ವಾರಾ, ರಾಜಸ್ಥಾನ

  • ಜೈಪುರ, ರಾಜಸ್ಥಾನ

  • ಮುಂಬೈ, ಮಹಾರಾಷ್ಟ್ರ


  ಇದುವರೆಗೂ ಭಾರತದಲ್ಲಿ ಸುಮಾರು 1,965 ಜನರಿಗೆ ಕೊರೋನಾ ಸೋಂಕು ಹರಡಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 9 ಹೊಸ ಕೇಸ್​ಗಳು ವರದಿಯಾಗಿವೆ. ಈವರೆಗೆ ಮೂರು ಜನ ಸಾವನ್ನಪ್ಪಿದ್ದಾರೆ.

  ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ವೈರಸ್ ಹರಡುತ್ತಿರುವುದರಿಂದ 150ಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಭೆ ನಡೆದ ನಿಜಾಮುದ್ದೀನ್​ ಪ್ರದೇಶದ 1,800 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

  ಇದನ್ನೂ ಓದಿ: ಭಾರತದಲ್ಲಿ 50ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ; 2000 ಗಡಿದಾಟಿದ ಸೋಂಕಿತರು!

  ಇತ್ತೀಚೆಗೆ ಇಡೀ ದೇಶವನ್ನು ಲಾಕ್​​ಡೌನ್​​ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಆದೇಶಿಸಿದರು. ಅಂದಿನಿಂದ ಇಂದಿನವರೆಗೂ ಸುರಕ್ಷಿತ ಝೋನ್​​ನಲ್ಲಿರುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಈ ಮಾರಕ ರೋಗವನ್ನು ತಡೆಯಲು ಸಾಮಾಜಿಕ ಅಂತರ ಕಾಯ್ಜುಕೊಳ್ಳಬೇಕಾಗಿದೆ. ಅದಕ್ಕೀಗ ಈ ಲಾಕ್​​ಡೌನ್​​ ಅಗತ್ಯವಿದೆ.
  First published: