HOME » NEWS » Coronavirus-latest-news » GOVERNMENT DECIDES TO TREAT CORONAVIRUS PROVIDING ASSISTANCE UNDER THE SDRF RH

ಕೊರೋನಾ ವೈರಸ್​ ಚಿಕಿತ್ಸೆಯ ಆರ್ಥಿಕ ನೆರವಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ; ಎಸ್​ಡಿಆರ್​ಎಫ್ ನಿಧಿ ಬಳಕೆಗೆ ಸೂಚನೆ

ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪ್ರಾಥಮಿಕ ಆರ್ಥಿಕ ನೆರವಾಗಿ ಈ ಎಸ್​ಡಿಆರ್​ಎಫ್​ ನಿಧಿಯನ್ನು ರಾಜ್ಯ ಸರ್ಕಾರಗಳು ಬಳಸಿಕೊಳ್ಳಬಹುದಾಗಿದೆ. ಇದೀಗ ಕೊರೋನಾ ವೈರಸ್ ತಡೆಗೂ ಈ ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

news18-kannada
Updated:March 14, 2020, 6:08 PM IST
ಕೊರೋನಾ ವೈರಸ್​ ಚಿಕಿತ್ಸೆಯ ಆರ್ಥಿಕ ನೆರವಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ; ಎಸ್​ಡಿಆರ್​ಎಫ್ ನಿಧಿ ಬಳಕೆಗೆ ಸೂಚನೆ
ಪ್ರಧಾನಿ ನರೇಂದ್ರ ಮೋದಿ
  • Share this:
ವದೆಹಲಿ: ದೇಶಾದ್ಯಂತ ಕೋಲಾಹಲ ಸೃಷ್ಟಿಸಿರುವ ಕೊರೋನಾ ವೈರಸ್ ತಡೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಕೊರೋನಾ ವೈರಸ್​ಅನ್ನು ರಾಷ್ಟ್ರೀಯ ದುರಂತ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.



ಕೊರೋನಾ ವೈರಸ್​ ದೇಶ ಎದುರಿಸುತ್ತಿರುವ ಭೀಕರ ರಾಷ್ಟ್ರೀಯ ಸಮಸ್ಯೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸೋಂಕು ಪೀಡಿತರಿಗೆ ಪರಿಹಾರ ನೀಡುವ ನಿಯಮಾವಳಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೊತೆಗೆ ಮಾರಕ ವೈರಸ್​ನಿಂದ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.


ಕೋವಿಡ್​ 19 ಅನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿರುವ ಮಾರಕ ವೈರಸ್​ ತಡೆಗೆ ಕೇಂದ್ರ ಸರ್ಕಾರ ಹತ್ತು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಸಂಬಂಧ ಇಂದು ಅಧಿಸೂಚನೆಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ತುರ್ತು ಅಗತ್ಯ ಆರ್ಥಿಕ ನೆರವಿಗೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎಸ್​ಡಿಆರ್​ಎಫ್​) ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.


ಕೋವಿಡ್​ ಸೋಂಕು ದೃಢಪಟ್ಟವರ ಆಸ್ಪತ್ರೆ ಖರ್ಚು-ವೆಚ್ಚವನ್ನು ರಾಜ್ಯ ಸರ್ಕಾರವೇ ನಿಭಾಯಿಸಬೇಕು. ರೋಗಿಗಳನ್ನು ಪ್ರತ್ಯೇಕವಾಗಿ ಇರಿಸುವುದು, ಮಾದರಿ ಸಂಗ್ರಹಣೆ, ಮತ್ತು ಸ್ಕ್ರೀನಿಂಗ್ ವೆಚ್ಚ ಕೂಡ ಎಸ್​ಡಿಆರ್​ಎಫ್​ ನಿಧಿಯೊಳಗೆ ಬರಲಿದೆ. ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪ್ರಾಥಮಿಕ ಆರ್ಥಿಕ ನೆರವಾಗಿ ಈ ಎಸ್​ಡಿಆರ್​ಎಫ್​ ನಿಧಿಯನ್ನು ರಾಜ್ಯ ಸರ್ಕಾರಗಳು ಬಳಸಿಕೊಳ್ಳಬಹುದಾಗಿದೆ. ಇದೀಗ ಕೊರೋನಾ ವೈರಸ್ ತಡೆಗೂ ಈ ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.









First published: March 14, 2020, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories