HOME » NEWS » Coronavirus-latest-news » GOT COVID 19 VACCINE YOU MAY GET HIGHER INTEREST RATES ON BANK FDS STG HG

ಕೋವಿಡ್ 19 ಲಸಿಕೆ ಪಡೆದಿರುವಿರಾ? ಹಾಗಿದ್ದರೆ ನಿಮಗೆ ಬ್ಯಾಂಕ್ ಎಫ್.ಡಿ.ಗೆ ಸಿಗಲಿದೆ ಅಧಿಕ ಬಡ್ಡಿ!

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಿಂದ ದೇಶದ ಎಲ್ಲ ವಯಸ್ಕರಿಗೂ ಉಚಿತ ಕೋವಿಡ್ ಲಸಿಕೆಗಳನ್ನು ವಿತರಿಸುವ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಅದನ್ನು ಬೆಂಬಲಿಸಿ ನಿಗದಿತ ಅವಧಿಗೆ ಈ ಆಫರ್ ಅನ್ನು ಕೋಲ್ಕತಾ ಮೂಲದ ಯುಕೋ ಬ್ಯಾಂಕ್, 30 ಅಂಕಗಳ (ಬಿಪಿಎಸ್) ಆಧಾರದಲ್ಲಿ 999 ದಿನಗಳ ನಿಶ್ಚಿತ ಠೇವಣಿಗೆ ಅಧಿಕ ಬಡ್ಡಿ ನೀಡುವ ಘೋಷಣೆ ಮಾಡಿದೆ.

news18-kannada
Updated:June 9, 2021, 3:02 PM IST
ಕೋವಿಡ್ 19 ಲಸಿಕೆ ಪಡೆದಿರುವಿರಾ? ಹಾಗಿದ್ದರೆ ನಿಮಗೆ ಬ್ಯಾಂಕ್ ಎಫ್.ಡಿ.ಗೆ ಸಿಗಲಿದೆ ಅಧಿಕ ಬಡ್ಡಿ!
ಕೊರೋನಾ ಲಸಿಕೆ
  • Share this:

ಕೋವಿಡ್ ಲಸಿಕೆಗಳನ್ನು ಪಡೆದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ದೇಶದ ನಾಗರಿಕರು ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ. ಆದರೆ ಇನ್ನೂ ಹಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಅವರನ್ನು ಪ್ರೇರಣೆಗೊಳಿಸಲು ಸರಕಾರ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.ಇದೀಗ ಕೆಲವು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮಲ್ಲಿ ನಿಶ್ಚಿತ ಠೇವಣಿ (ಎಫ್.ಡಿ) ಇರಿಸಿರುವ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಅದರ ಪ್ರಕಾರ, ನಿಶ್ಚಿತ ಠೇವಣಿ (ಎಫ್.ಡಿ) ಇರಿಸಿರುವ ಗ್ರಾಹಕರೇನಾದರೂ ಕೊರೋನಾ ಲಸಿಕೆ ಹಾಕಿಸಿದ್ದರೆ, ಅವರಿಗೆ ಅಧಿಕ ಬಡ್ಡಿ ಸಿಗಲಿದೆ!


ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಿಂದ ದೇಶದ ಎಲ್ಲ ವಯಸ್ಕರಿಗೂ ಉಚಿತ ಕೋವಿಡ್ ಲಸಿಕೆಗಳನ್ನು ವಿತರಿಸುವ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಅದನ್ನು ಬೆಂಬಲಿಸಿ ನಿಗದಿತ ಅವಧಿಗೆ ಈ ಆಫರ್ ಅನ್ನು ಕೋಲ್ಕತಾ ಮೂಲದ ಯುಕೋ ಬ್ಯಾಂಕ್, 30 ಅಂಕಗಳ (ಬಿಪಿಎಸ್) ಆಧಾರದಲ್ಲಿ 999 ದಿನಗಳ ನಿಶ್ಚಿತ ಠೇವಣಿಗೆ ಅಧಿಕ ಬಡ್ಡಿ ನೀಡುವ ಘೋಷಣೆ ಮಾಡಿದೆ. ಷರತ್ತು ಏನೆಂದರೆ, ಈ ಗ್ರಾಹಕರು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡಿರಬೇಕು. ಸೆಪ್ಟೆಂಬರ್ 30ರಿಂದ ಅನ್ವಯವಾಗುವ ಈ ಯೋಜನೆಗೆ UCOVAXI-999 ಎಂದು ಹೆಸರು ಇಡಲಾಗಿದೆ.



ಈ ನಡುವೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡ ಗ್ರಾಹಕರಿಗೆ 25 ಅಂಕಗಳ (ಬಿಪಿಎಸ್) ಆಧಾರದಲ್ಲಿ ನಿಶ್ಚಿತ ಠೇವಣಿಗೆ ಅಧಿಕ ಬಡ್ಡಿ ನೀಡುವ ಘೋಷಣೆ ಮಾಡಿದೆ. ನಿಶ್ಚಿತ ಠೇವಣಿಗೆ 0.50 ಶೇಕಡಾ ಅಧಿಕ ಬಡ್ಡಿ ಲಸಿಕೆ ಹಾಕಿಸಿಕೊಂಡ ಹಿರಿಯ ನಾಗರಿಕರಿಗೆ ಲಭ್ಯವಾಲಿದೆ. ಈ ಯೋಜನೆಗೆ ‘ಇಮ್ಯೂನ್ ಇಂಡಿಯಾ ಡಿಪೋಸಿಟ್ ಸ್ಕೀಮ್’ ಎಂದು ಹೆಸರು ಇಡಲಾಗಿದೆ. ಈ ಯೋಜನೆಯ ಮುಕ್ತಾಯದ ಅವಧಿಯು 1,111 ದಿನಗಳದ್ದಾಗಿದೆ.


ಪ್ರಗತಿಯಲ್ಲಿರುವ ಲಸಿಕೀಕರಣ ಪ್ರಕ್ರಿಯೆ:


ಜನವರಿ 16 ರಂದು ಕೋವಿಡ್ ಲಸಿಕೆ ವಿತರಣೆ ಆಭಿಯಾನವು ಆರಂಭವಾಗಿದ್ದು, ಮೊದಲ ಹಂತದಲ್ಲಿ ವೈದ್ಯರು, ನರ್ಸ್​ಗಳು ಸೇರಿದಂತೆ ಆರೋಗ್ಯ ಸೇವೆಯಲ್ಲಿರುವವರಿಗೆ ಲಸಿಕೆಗಳನ್ನು ನೀಡಲಾಗಿತ್ತು. ಬಳಿಕ ಮುಂಚೂಣಿಯಲ್ಲಿರುವ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಯಿತು. ಅದಾದ ಕೆಲ ವಾರಗಳ ಬಳಿಕ ಕೇಂದ್ರ ಸರಕಾರವು ನೂತನ ಮಾರ್ಗಸೂಚಿ ನೀತಿಯನ್ನು ಜಾರಿಗೆ ತಂದು 60 ವರ್ಷ ಮೀರಿದವರಿಗೆ ಹಾಗೂ 45 ವರ್ಷ ದಾಟಿದ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡುವ ಕಾರ್ಯಾಚರಣೆ ಆರಂಭಿಸಿತ್ತು.





Youtube Video

ಸದ್ಯ 18-44 ವಯೋಮಾನದವರಿಗೂ ದೇಶದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ವಿತರಿಸಲಾಗುತ್ತಿದೆ. ದೇಶದ ನಾಗರಿಕರಿಗೆ ಕೋವಿಡ್‍ ಲಸಿಕೆ ನೀಡುವ ಕಾರ್ಯಕ್ರಮ ಈಗಾಗಲೇ ಏರುಗತಿಯಲ್ಲಿದ್ದು, ಈವರೆಗೆ 23.61 ಕೋಟಿ ಡೋಸ್ ಲಸಿಕೆಗಳನ್ನು ದೇಶದ ನಾಗರಿಕರು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

Published by: Harshith AS
First published: June 9, 2021, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories