Coronavirus Tips: ಮನೆಯಲ್ಲೇ ಸುರಕ್ಷಿತವಾಗಿರಿ; ವಿಶೇಷ ಡೂಡಲ್​ ಮೂಲಕ ಕೊರೋನಾ ಟಿಪ್ಸ್​ ನೀಡಿದ ಗೂಗಲ್

Coronavirus Tips Google Doodle: ಕೊರೋನಾ ವೈರಸ್​ ಅನ್ನು ಯಾವ ರೀತಿ ತಡೆಗಟ್ಟಬಹುದು ಮತ್ತು ಅದಕ್ಕೆ ನಾವು ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕಾ ಕ್ರಮಗಳು ಯಾವುವು ಎಂಬ ಬಗ್ಗೆ ಗೂಗಲ್ ಡೂಡಲ್​ ಮಾಹಿತಿ ನೀಡಿದೆ.

ಗೂಗಲ್ ಡೂಡಲ್

ಗೂಗಲ್ ಡೂಡಲ್

  • Share this:
ಬೆಂಗಳೂರು (ಏ. 23): ಕೊರೋನಾ ವೈರಸ್​ ದಾಳಿಯಿಂದ ಜಗತ್ತು ಕಂಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್​ ಕೂಡ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಕೆಲವು ಸಲಹೆಗಳನ್ನು ನೀಡಿರುವ ಗೂಗಲ್ ಮನೆಯಲ್ಲೇ ಸುರಕ್ಷಿತವಾಗಿರುವ ಮೂಲಕ ಬೇರೆಯವರ ಜೀವವನ್ನೂ ಉಳಿಸಿ ಎಂದು ಮನವಿ ಮಾಡಿದೆ. ಇದಕ್ಕಾಗಿ ವಿಶೇಷವಾದ ಡೂಡಲ್​ ಅನ್ನು ವಿನ್ಯಾಸಗೊಳಿಸಿದೆ.

ಕೊರೋನಾ ವೈರಸ್​ ಅನ್ನು ಯಾವ ರೀತಿ ತಡೆಗಟ್ಟಬಹುದು ಮತ್ತು ಅದಕ್ಕೆ ನಾವು ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕಾ ಕ್ರಮಗಳು ಯಾವುವು ಎಂಬ ಬಗ್ಗೆ ಗೂಗಲ್ ಡೂಡಲ್​ ಮಾಹಿತಿ ನೀಡಿದೆ. ಇದಕ್ಕಾಗಿ ಅನಿಮೇಟೆಡ್​ ವಿನ್ಯಾಸವನ್ನು ಡೂಡಲ್​ನಲ್ಲಿ ಬಳಸಲಾಗಿದೆ. ಓದುವುದು, ಸಂಗೀತವನ್ನು ಕೇಳುವುದು, ಮನೆಯೊಳಗೇ ವ್ಯಾಯಾಮ ಮಾಡುವುದು, ಮೊಬೈಲ್​ ಫೋನ್ ಮೂಲಕ ಪ್ರೀತಿ ಪಾತ್ರರ ಜೊತೆ ಸಂಪರ್ಕದಲ್ಲಿ ಇರುವ ಸಲಹೆಯನ್ನು ಗೂಗಲ್ ಡೂಡಲ್ ಮೂಲಕ ನೀಡಲಾಗಿದೆ.

ಇದನ್ನೂ ಓದಿ: ಕೊರೋನಾ ಇಂದು- ನಾಳೆ ಹೋಗುವ ವೈರಸ್​ ಅಲ್ಲ, ತುಂಬ ಸಮಯ ನಮ್ಮೊಂದಿಗೆ ಇರಲಿದೆ; WHO ಎಚ್ಚರಿಕೆ

ಇದರ ಜೊತೆಗೆ ಕೊರೋನಾ ನಿಯಂತ್ರಣಕ್ಕೆ ಟಿಪ್ಸ್​ಗಳನ್ನು ಕೂಡ ನೀಡಲಾಗಿದ್ದು, ಮನೆಯಲ್ಲೇ ಇರುವ ಮೂಕಲ ನಿಮ್ಮ ಪ್ರೀತಿಪಾತ್ರರನ್ನು ಕೂಡ ಕೊರೋನಾದಿಂದ ರಕ್ಷಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯಬೇಡಿ. ಕೈಗಳನ್ನು ಆಗಾಗ ತೊಳೆದುಕೊಳ್ಳುತ್ತಿರಿ. ಕೆಮ್ಮುವಾಗ ಕೈಗಳನ್ನು ಅಡ್ಡ ಹಿಡಿದುಕೊಳ್ಳಿ. ಅನಾರೋಗ್ಯ ಉಂಟಾದರೆ ಹೆಲ್ಪ್​ಲೈನ್​ಗೆ ಫೋನ್ ಮಾಡಿ ಎಂಬ ಟಿಪ್ಸ್​ಗಳನ್ನು ಕೂಡ ನೀಡಲಾಗಿದೆ.
First published: