Coronavirus Tips: ಕೊರೋನಾ ವೈರಸ್ ನಿಯಂತ್ರಣಕ್ಕೆ ಗೂಗಲ್ ಡೂಡಲ್​ ಮೂಲಕ ವಿಶೇಷ ಟಿಪ್ಸ್!

Google Doodle | Covid-19 Tips: ಬ್ರೌಸರ್​ನಲ್ಲಿ ಹೋಮ್​ ಪೇಜ್​ ಓಪನ್​ ಮಾಡಿದ ವೇಳೆ ವಿಭಿನ್ನ ಗೂಗಲ್​ ಡೂಡಲ್​ ಕಾಣ ಸಿಗುತ್ತದೆ. ಇದು ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಡಿರುವ ಡೂಡಲ್​.

ಗೂಗಲ್​ ಡೂಡಲ್​

ಗೂಗಲ್​ ಡೂಡಲ್​

  • Share this:
    ಕೊರೋನಾ ವೈರಸ್​ ವಿಶ್ವಾದ್ಯಂತ ಪೆಡಂಭೂತದಂತೆ ಕಾಡುತ್ತಿದೆ. ಈವರೆಗೆ ವಿಶ್ವಾದ್ಯಂತ 53,190 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ ಸುಮಾರು 10 ಲಕ್ಷ ದಾಟಿದೆ. ಈ ಮಧ್ಯೆ ಸರ್ಕಾರ ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದೆ. ಈಗ ಗೂಗಲ್​ ವಿಶೇಷ ಡೂಡಲ್​ ರಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.

    ಬ್ರೌಸರ್​ನಲ್ಲಿ ಹೋಮ್​ ಪೇಜ್​ ಓಪನ್​ ಮಾಡಿದ ವೇಳೆ ವಿಭಿನ್ನ ಗೂಗಲ್​ ಡೂಡಲ್​ ಕಾಣ ಸಿಗುತ್ತದೆ. ಇದು ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಡಿರುವ ಡೂಡಲ್​.

    ಡೂಡಲ್​ ಮೇಲೆ ಕ್ಲಿಕ್​ ಮಾಡಿದ ನಂತರ ನಿಮಗೆ ವಿವಿಧ ರೀತಿಯ ಟಿಪ್ಸ್​ಗಳು ಕಾಣ ಸಿಗುತ್ತವೆ. ಆರಂಭದಲ್ಲಿ ಮನೆಯಲ್ಲೇ ಇರಿ ಮತ್ತು ಪ್ರಾಣ ಉಳಿಸಿ ಎನ್ನುವ ಲೈನ್​ ಬರೆಯಲಾಗಿದೆ. ನೀವು ಮೊದಲು ಮಾಡಬೇಕಾದ ಕೆಲಸ ಏನೆಂದರೆ ಮನೆಯಲ್ಲೇ ಇರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಆಗಾಗ ಕೈ ತೊಳೆದುಕೊಳ್ಳುತ್ತಿರಿ. ಮೂಗು ಬಾಯಿಯನ್ನು ಮುಚ್ಚಿಕೊಳ್ಳಿ. ಅನಾರೋಗ್ಯ ಕಾಡಿದರೆ ಹೆಲ್ಪ್​ಲೈನ್​ ಸಂಖ್ಯೆಗೆ ಕರೆ ಮಾಡಿ ಎಂದು ಗೂಗಲ್​ ಡೂಡಲ್​ನಲ್ಲಿ ಕೋರಲಾಗಿದೆ.

    ಇದನ್ನೂ ಓದಿ: ಕೊರೋನಾ ಅಟ್ಟಹಾಸ; ದೇಶದಲ್ಲಿ ಇದುವರೆಗೂ 2069 ಸೋಂಕಿತ ಪ್ರಕರಣಗಳು ಪತ್ತೆ; ಸಾವಿನ ಸಂಖ್ಯೆ 56ಕ್ಕೇರಿಕೆ

    ದೇಶದಲ್ಲಿ ಕೊರೋನಾ ವೈರಸ್​​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಾರಕ ರೋಗ ನಿಯಂತ್ರಣಕ್ಕಾಗಿ ಇಡೀ ದೇಶ ಲಾಕ್​ಡೌನ್​​ ಮಾಡಿದರೂ ಸೋಂಕಿತ ಪ್ರಕರಣಗಳೇನೂ ಕಡಿಮೆಯಾಗುತ್ತಿಲ್ಲ. ಇದುವರೆಗೂ ಭಾರತದಲ್ಲಿ 2301 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 157 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಜತೆಗೆ ಕೊರೋನಾದಿಂದ ಸಾವನ್ನಪ್ಪಿದರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

    First published: