HOME » NEWS » Coronavirus-latest-news » GOOD RESPONSE FOR SUNDAY LOCKDOWN IN UTTARA KANNADA DISTRICT GNR

Sunday Lockdown: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​​ಗೆ ಉತ್ತಮ ಪ್ರತಿಕ್ರಿಯೆ

ನಗರ‌ ಮತ್ತು ಗ್ರಾಮೀಣ ಭಾಗದಲ್ಲಿ ಲಾಕ್​​ಡೌನ್ ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. ಮುಂಜಾನೆಯಿಂದ ಒಂದೇ ಒಂದು ಅಂಗಡಿ ತೆರೆದಿಲ್ಲ. ಕಳೆದ ಐದು ದಿನದಿಂದ ಆರಂಭವಾದ ಬಸ್ ಸಂಚಾರವೂ ಸ್ಥಗಿತವಾಗಿದೆ. ಆಟೋ ರಿಕ್ಷಾಗಳು ರಸ್ತೆಗೆ ಇಳಿಯದೆ ವ್ಯಾಪಕ ಬೆಂಬಲ ಸೂಚಿಸಿವೆ.

news18-kannada
Updated:May 24, 2020, 2:08 PM IST
Sunday Lockdown: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​​ಗೆ ಉತ್ತಮ ಪ್ರತಿಕ್ರಿಯೆ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಮೇ.24): ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಸೇರಿದಂತೆ ಎಲ್ಲಾ ತಾಲೂಕಿನಲ್ಲಿ ಭಾನುವಾರ ಲಾಕ್​​ಡೌನ್​​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ಎರಡು ವಾರದಿಂದ ಲಾಕ್​​ಡೌನ್ ಸಡಿಲಗೊಳಿಸಿ ಆರ್ಥಿಕ‌ ವ್ಯವಸ್ಥೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಕೆಲವೊಂದು ಚಟುವಟಿಕೆ ಅವಕಾಶ ನೀಡಲಾಗಿತ್ತು.  ಆದರೀಗ, ರಾಜ್ಯ ಸರ್ಕಾರದ ಆದೇಶದಂತೆ ಭಾನುವಾರ ಮಾತ್ರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್​​ ಮಾಡಲಾಗಿದ್ದು, ಜನ ಮನೆಯಲ್ಲೇ ಇದ್ದು ಬೀದಿಗಿಳಿಯದೇ ಸಹಕರಿಸಿದ್ಧಾರೆ.

ಸರ್ಕಾರದ ಆದೇಶದ ಮೇರೆಗೆ ಭಾನುವಾರ ಸಂಪೂರ್ಣ ಲಾಕ್​ಡೌನ್​​​​ ಮಾಡಿರುವ ಕಾರಣ ಜಿಲ್ಲೆಯಲ್ಲಿ ರಿಲ್ಯಾಕ್ಸ್ ಆಗಿದ್ದ ಎಲ್ಲಾ ಕಾರ್ಯಚಟುವಟಿಕೆಗಳು ಮತ್ತೆ ಸ್ಥಗಿತಗೊಂಡಿವೆ. ಇಂದು ಮಾತ್ರ ಆದೇಶ ಅನ್ವಯವಾಗಲಿದ್ದು, ಅನಗತ್ಯವಾಗಿ ಓಡಾಡುವ ಜನರ ವಿರುದ್ದ ಕಠಿಣ‌ಕ್ರಮ ಕೈಗೊಳ್ಳಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ನಗರ‌ ಮತ್ತು ಗ್ರಾಮೀಣ ಭಾಗದಲ್ಲಿ ಲಾಕ್​​ಡೌನ್ ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. ಮುಂಜಾನೆಯಿಂದ ಒಂದೇ ಒಂದು ಅಂಗಡಿ ತೆರೆದಿಲ್ಲ. ಕಳೆದ ಐದು ದಿನದಿಂದ ಆರಂಭವಾದ ಬಸ್ ಸಂಚಾರವೂ ಸ್ಥಗಿತವಾಗಿದೆ. ಆಟೋ ರಿಕ್ಷಾಗಳು ರಸ್ತೆಗೆ ಇಳಿಯದೆ ವ್ಯಾಪಕ ಬೆಂಬಲ ಸೂಚಿಸಿವೆ.

ಇದನ್ನೂ ಓದಿ: Sunday Lockdown: ಇಂದು ಸಂಪೂರ್ಣ ಲಾಕ್​ಡೌನ್​; ಇಡೀ ದಿನ ಕರ್ಫ್ಯೂ; ಏನಿರುತ್ತೆ? ಏನಿರಲ್ಲ?

ಇನ್ನು, ಪೋಲಿಸ್ ಇಲಾಖೆಯ ಸಿಬ್ಬಂದಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಗಸ್ತು ತಿರುಗಿ ಲಾಕ್​​ಡೌನ್ ಯಶಸ್ವಿಗೊಳಿಸಲು ಪ್ರಯತ್ನ ಪಡುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾನುವಾರದ ಲಾಕ್​​ಡೌನ್​​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
First published: May 24, 2020, 9:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories