ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ; ಡಿಸ್ಟಿಲರಿಸ್​ಗೆ ದ್ರಾಕ್ಷಿ ಬಳಕೆಗೆ ಗಂಭೀರ ಚಿಂತನೆ

ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಡಿಸ್ಟಿಲರಿಸ್‍ಗೆ ಬಳಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗೇನಾದರೂ ಬ್ಲೂ ದ್ರಾಕ್ಷಿಯನ್ನು ಡಿಸ್ಟಿಲರಿಸ್​ಗೆ ಬಳಸಿದ್ದೆ ಆದಲ್ಲಿ ರೈತರು ಸ್ವಲ್ಪ ಮಟ್ಟಿಗೆ ನಿರಾಳರಾಗಲಿದ್ದಾರೆ.

news18-kannada
Updated:April 15, 2020, 8:49 PM IST
ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ; ಡಿಸ್ಟಿಲರಿಸ್​ಗೆ ದ್ರಾಕ್ಷಿ ಬಳಕೆಗೆ ಗಂಭೀರ ಚಿಂತನೆ
ಅಬಕಾರಿ ಸಚಿವ ನಾಗೇಶ್ ಅವರೊಂದಿಗೆ ಸಭೆ ನಡೆಸಿದ ತೋಟಗಾರಿಕೆ ಸಚಿವ ನಾರಾಯಣಗೌಡ.
  • Share this:
ಬೆಂಗಳೂರು: ಬ್ಲೂ ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 

ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 662 ಹೆಕ್ಟೇರ್ ಪ್ರದೇಶದಲ್ಲಿದಲ್ಲಿ 15 ಸಾವಿರ ಟನ್ ನಷ್ಟು ಬ್ಲೂ ದ್ರಾಕ್ಷಿ ಬೆಳೆಯಲಾಗಿದೆ. ಲಾಕ್​ಡೌನ್​ನಿಂದಾಗಿ ದ್ರಾಕ್ಷಿ ಮಾರಲಾಗದೆ ರೈತರು ಕಂಗಾಲಾಗಿದ್ದರು.

ಈಗ ಈ ದ್ರಾಕ್ಷಿಯನ್ನು ಡಿಸ್ಟಿಲರಿಸ್‍ಗೆ ಬಳಸಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಅಬಕಾರಿ ಸಚಿವ ಎಚ್.ನಾಗೇಶ್ ಅವರೊಂದಿಗೆ ನಾರಾಯಣಗೌಡ ಅವರು ಮಾತುಕತೆ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಅಬಕಾರಿ ಸಚಿವರೊಂದಿಗೆ ಸಭೆ ನಡೆಸಿದ ತೋಟಗಾರಿಕೆ ಸಚಿವರು, ಬ್ಲೂ ದ್ರಾಕ್ಷಿಯನ್ನು ಡಿಸ್ಟಿಲರಿಸ್​ಗೆ ಬಳಸುವಂತೆ, ಡಿಸ್ಟಿಲರಿಸ್ ಕಂಪೆನಿ ಪುನಾರಂಭಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅಬಕಾರಿ ಸಚಿವ ನಾಗೇಶ್ ಅವರು,  ತತ್‍ಕ್ಷಣವೇ ಡಿಸ್ಟಿಲರಿಸ್ ಕಂಪೆನಿ ಆರಂಭಿಸುವ ಬಗ್ಗೆ ಸಭೆ ನಾಳೆಯೇ ಅಧಿಕಾರಿಗಳ ಜೊತೆ ಸಭೆ ನಡೆಸುವ ಭರವಸೆ ನೀಡಿದರು. ಜೊತೆಗೆ ಡಿಸ್ಟಿಲರಿಸ್ ಕಂಪೆನಿಗಳ ಮುಖ್ಯಸ್ಥರೊಂದಿಗೂ ಮಾತುಕತೆ ಮಾಡುವುದಾಗಿ ತಿಳಿಸಿದರು.

ಇದನ್ನು ಓದಿ: ಎರಡನೇ ಹಂತದ ಲಾಕ್​ಡೌನ್ ರೂಪುರೇಷೆ ತಯಾರಾಗಿದ್ದು ಹೇಗೆ ಗೊತ್ತಾ?

ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಡಿಸ್ಟಿಲರಿಸ್‍ಗೆ ಬಳಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗೇನಾದರೂ ಬ್ಲೂ ದ್ರಾಕ್ಷಿಯನ್ನು ಡಿಸ್ಟಿಲರಿಸ್​ಗೆ ಬಳಸಿದ್ದೆ ಆದಲ್ಲಿ ರೈತರು ಸ್ವಲ್ಪ ಮಟ್ಟಿಗೆ ನಿರಾಳರಾಗಲಿದ್ದಾರೆ.
First published: April 15, 2020, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading