ESIC Scheme: 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಕೇಂದ್ರದಿಂದ ಸಿಹಿಸುದ್ದಿ

ಇಎಸ್ಐ ಯೋಜನೆಯು ಮಾಸಿಕ ಆದಾಯವು 21 ಸಾವಿರ ಗಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಪ್ರಯೋಜನ ನೀಡುತ್ತದೆ. ಅವರು ಕನಿಷ್ಠ 10 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯಲ್ಲಿ ಕೆಲಸ ಮಾಡುವವರಿರಬೇಕು.

news18-kannada
Updated:June 11, 2020, 7:26 PM IST
ESIC Scheme: 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಕೇಂದ್ರದಿಂದ ಸಿಹಿಸುದ್ದಿ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಜೂ.11): ಮಾರಕ ಕೋವಿಡ್​​-19 ವೈರಸ್​​ಗೆ ಇಡೀ ದೇಶ ತತ್ತರಿಸಿದೆ. ಇದನ್ನು ತಹಬದಿಗೆ ತರಲು ಕೇಂದ್ರ ಸರ್ಕಾರವೂ  ರಾಷ್ಟ್ರವ್ಯಾಪಿ ಲಾಕ್​​ಡೌನ್​​ ಮಾಡಿ ಇತ್ತೀಚೆಗೆ ಸಡಿಲಗೊಳಿಸಿದೆ. ಹೀಗಿರುವಾಗ ಸದ್ಯ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಾ ಖಾಸಗಿ ಕಂಪನಿಗಳಲ್ಲಿ 21 ಸಾವಿರಕ್ಕಿಂತ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿರುವ ನೌಕರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಇವರಿಗಾಗಿ ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಅನೇಕ ಕ್ರಮಗಳನ್ನು ಕೈಗೊಂಡಿದೆ.

ಖಾಸಗಿ ಕಂಪನಿಗಳಲ್ಲಿ 21 ಸಾವಿರಕ್ಕಿಂತ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೌಕರರ ರಾಜ್ಯ ವಿಮಾ ನಿಗಮ(ಇಎಸ್‌ಐ) ಯೋಜನೆಯಡಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವೈದ್ಯಕೀಯ ಸೇವೆ ಒದಗಿಸಲು ಮುಂದಾಗಿದೆ. ಯಾವ ಕಂಪನಿ ತನ್ನ ನೌಕರರಿಗೆ ವಾರ್ಷಿಕ ಕೊಡುಗೆ ನೀಡಲು ಸಾಧ್ಯವಿಲ್ಲವೋ ಅಂತಹ ಕಾರ್ಮಿಕರಿಗೆ ಈ ಉಚಿತ ವೈದ್ಯಕೀಯ ಸೇವೆ ಸಿಗಲಿದೆ.

ಕಡಿಮೆ ಸಂಬಳ ತೆಗೆದುಕೊಳ್ಳುವ ಕಾರ್ಮಿಕರಿಗೆ ಕೋವಿಡ್​​-19 ಸೋಂಕು ತಗುಲಿದರೇ ಇದಕ್ಕೆ ಬೇಕಾದ ಹಣದ ಖರ್ಚು ಭರಿಸಲು ಸರ್ಕಾರ ಸಿದ್ದವಿದೆ. 10ಕ್ಕಿಂತ ಹೆಚ್ಚು ನೌಕಕರು ಕೆಲಸ ಮಾಡುವ ಎಲ್ಲಾ ಕಂಪನಿಗಳಿಗೂ ಈ ಸೇವೆ ಲಭ್ಯವಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್​​-19​: 24 ಗಂಟೆಯಲ್ಲಿ 204 ಕೇಸ್​, 3 ಬಲಿ; ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆ

ಇಎಸ್ಐ ಯೋಜನೆಯು ಮಾಸಿಕ ಆದಾಯವು 21 ಸಾವಿರ ಗಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಪ್ರಯೋಜನ ನೀಡುತ್ತದೆ. ಅವರು ಕನಿಷ್ಠ 10 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯಲ್ಲಿ ಕೆಲಸ ಮಾಡುವವರಿರಬೇಕು.

ಈ ಹಿಂದೆ ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರ ಸಂಬಳ ಹೆಚ್ಚು ಮಾಡಿ ಮೋದಿ ಸರ್ಕಾರ ಆದೇಶಿತ್ತು. ನೌಕರರ ರಾಜ್ಯ ವಿಮಾ ನಿಗಮ(ಇಎಸ್‌ಐ) ಯೋಜನೆಯಡಿ ನೌಕರರ ಕೊಡುಗೆಯನ್ನು ಸರ್ಕಾರ ಕಡಿಮೆ ಮಾಡಿದ್ದು, ಈ ನಿರ್ಧಾರವು ಜುಲೈ 1ರಿಂದಲೇ ಜಾರಿಗೆ ಬಂದಿದೆ.
First published: June 11, 2020, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading