Sushma ChakreSushma Chakre
|
news18-kannada Updated:March 30, 2020, 9:25 AM IST
ಸಾಂದರ್ಭಿಕ ಚಿತ್ರ
ತಿರುವನಂತಪುರಂ (ಮಾ. 30): ಕೊರೋನಾ ವೈರಸ್ ತೀವ್ರತೆ ಹೆಚ್ಚಾಗುತ್ತಿರುವುದರಿಂದ ದೇಶಾದ್ಯಂತ ಪ್ರತಿದಿನ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ಮುಟ್ಟಿದೆ. ದೇಶದಲ್ಲಿ ಏ. 14ರವರೆಗೆ ಲಾಕ್ಡೌನ್ ಘೋಷಿಸಿರುವುದರಿಂದ ಎಷ್ಟೋ ಜನರು ತಿನ್ನಲು ಊಟವೂ ಇಲ್ಲದೆ, ದುಡಿಯಲು ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಆದರೆ, ಕೇರಳದಲ್ಲಿ ಕುಡಿಯಲು ಆಲ್ಕೋಹಾಲ್ ಸಿಗುತ್ತಿಲ್ಲ ಎಂಬ ಅಸಹಾಯಕತೆಯಿಂದ ನೊಂದು, 9 ಜನರು ಸಾವನ್ನಪ್ಪಿದ್ದಾರೆ!
ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಲಾಕ್ಡೌನ್ ಘೋಷಿಸಿ 6 ದಿನಗಳು ಕಳೆದಿವೆ. ಇನ್ನೂ 15 ದಿನಗಳು ಮನೆಯಿಂದ ಹೊರಗೆ ಬರುವಂತಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಜಿಗುಪ್ಸೆಗೊಂಡ ಕೆಲವು ಕೇರಳಿಗರು ಕುಡಿಯಲು ಆಲ್ಕೋಹಾಲ್ ಸಿಗುತ್ತದಾ? ಎಂದು ಎಲ್ಲೆಡೆ ಹುಡುಕಾಡಿದರು. ಆದರೆ, ದಿನನಿತ್ಯದ ವಸ್ತುಗಳು, ವೈದ್ಯಕೀಯ ಸೇವೆಗಳು, ಮೆಡಿಕಲ್ ಶಾಪ್ಗಳು ಮಾತ್ರ ತೆರೆದಿರುವುದರಿಂದ ಎಲ್ಲೂ ಆಲ್ಕೋಹಾಲ್ ಸಿಗಲಿಲ್ಲ. ಇದರಿಂದಾಗಿ ಏಳು ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಇನ್ನೊಬ್ಬರು ಶೇವಿಂಗ್ ಆದ ನಂತರ ಹಚ್ಚುವ ಲೋಷನ್ ಇಂದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 1 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ; 27 ಮಂದಿ ಸಾವು
ಕೇರಳದಲ್ಲಿ ಈಗಾಗಲೇ 200 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ, ಓರ್ವ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಆದರೆ, ಬಾರ್, ಪಬ್, ಸಾರಾಯಿ ಅಂಗಡಿಗಳು ಇಲ್ಲದ್ದರಿಂದ ಜಿಗುಪ್ಸೆಗೊಂಡು ಸಾವನ್ನಪ್ಪಿದವರ ಸಂಖ್ಯೆ 9. ಈ ರೀತಿಯ ಮೊದಲ ಪ್ರಕರಣ ಶುಕ್ರವಾರ ನಡೆದಿತ್ತು. ತ್ರಿಶೂರ್ನ ಸನೋಜ್ ಮತ್ತು ಕೊಚ್ಚಿಯ ಮುರಳಿ ಎಂಬುವವರು ಸಾರಾಯಿ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ನಂತರ ಶನಿವಾರ ಕಣ್ಣೂರಿನ ವಿಜಿಲ್, ಕೊಲ್ಲಂನ ಬಿಜು ಮತ್ತು ಸುರೇಶ್, ಕೊಚ್ಚಿಯ ವಾಸು ಶನಿವಾರ ಮೃತಪಟ್ಟಿದ್ದರು. ಭಾನುವಾರ ತಿರುವನಂತಪುರದ ಕೃಷ್ಣನ್ ಕುಟ್ಟಿ ಆಲ್ಕೋಆಲ್ ಸಿಗದ ಕಾರಣ ಸಾವನ್ನಪ್ಪಿದ್ದ. ಭಾನುವಾರ 46 ವರ್ಷದ ಕೃಷ್ಣನ್ ಕುಟ್ಟಿ ಎಂಬಾತ ಆಲ್ಕೋಹಾಲ್ ಸಿಗದೆ ಸರ್ಕಾರಿ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಕಯಂಕುಳಂನ ನೌಶಾದ್ ಶನಿವಾರ ಶೇವಿಂಗ್ ಲೋಷನ್ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಕೊಲ್ಲಂನ ಮುರಳೀಧರನ್ ಆಚಾರಿಗೆ ಆಲ್ಕೋಹಾಲ್ ಸಿಗದೆ, ಒತ್ತಡದಲ್ಲಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ.
ಇದನ್ನೂ ಓದಿ: ಉತ್ತರ ಪ್ರದೇಶದ ಈ ಊರಲ್ಲಿ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲುಕೊಟ್ಟ ಮುಸ್ಲಿಮರು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಸಿಎಂ ಪಿಣರಾಯಿ ವಿಜಯನ್, ಯಾರಿಗೆಲ್ಲ ಆಲ್ಕೋಹಾಲ್ ಇಲ್ಲದೆ ಇರುವುದು ಕಷ್ಟವೋ ಅಂಥವರಿಗೆ ನಿಯಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ದೊರೆಯುವಂತೆ ಮಾಡಲಾಗುವುದು. ಅಬಕಾರಿ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿ, ಸರ್ಕಾರದಿಂದಲೇ ನಿಯಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸಿಗುವಂತೆ ಮಾಡಲಾಗುವುದು. ತಜ್ಞ ವೈದ್ಯರ ಸಲಹೆ ಪಡೆದು, ಅವರ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ಅಗತ್ಯವಿದೆ ಎಂಬುದನ್ನು ಆಧರಸಿಇ, ಮದ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.ಆದರೆ, ಇದಕ್ಕೆ ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ ವಿರೋಧ ವ್ಯಕ್ತಪಡಿಸಿದೆ. ಮದ್ಯಸೇವನೆಯಿಲ್ಲದೆ ಬದುಕಲಾಗದು ಎನ್ನುವವರಿಗೆ ಆಲ್ಕೋಹಾಲ್ ನೀಡುವುದು ಸರಿಯಲ್ಲ. ಇದು ಅವೈಜ್ಞಾನಿಕ ನಿರ್ಧಾರ ಎಂದು ವೈದ್ಯರು ಟೀಕಿಸಿದ್ದಾರೆ.
ಇದನ್ನೂ ಓದಿ: Mann ki Baat: 21 ದಿನಗಳ ಲಾಕ್ಡೌನ್ ಘೋಷಿಸಿದ್ದಕ್ಕೆ ಜನರಲ್ಲಿ ಕ್ಷಮೆ ಕೇಳಿದ ಪ್ರಧಾನಿ ಮೋದಿ
First published:
March 30, 2020, 8:24 AM IST