HOME » NEWS » Coronavirus-latest-news » GOA RECOMMENDS IVERMECTIN TO ALL ABOVE 18 AFTER SCIENTISTS SAY ITS USE CAN END COVID KVD

ವಯಸ್ಕರೆಲ್ಲರು ಈ ಮಾತ್ರೆ ತೆಗೆದುಕೊಳ್ಳಿ ಎಂದ ಗೋವಾ ಸರ್ಕಾರ; ಕೊರೋನಾ ವಿರುದ್ಧ ಇದು ಪರಿಣಾಮಕಾರಿಯೇ?

ಸೋಂಕು ಇರಲಿ, ಇಲ್ಲದಿರಲಿ ಈ ಮಾತ್ರೆಯನ್ನು 5 ದಿನಗಳ ಕಾಲ ತೆಗೆದುಕೊಂಡರೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ತಿಳಿಸಿದ್ದಾರೆ.

Kavya V
Updated:May 10, 2021, 6:04 PM IST
ವಯಸ್ಕರೆಲ್ಲರು ಈ ಮಾತ್ರೆ ತೆಗೆದುಕೊಳ್ಳಿ ಎಂದ ಗೋವಾ ಸರ್ಕಾರ; ಕೊರೋನಾ ವಿರುದ್ಧ ಇದು ಪರಿಣಾಮಕಾರಿಯೇ?
Ivermectin ಮಾತ್ರೆ
  • Share this:
ಪಣಜಿ: ಭಾರತದಲ್ಲಿ ಮೊದಲ ಬಾರಿಗೆ ಗೋವಾ ಸರ್ಕಾರ ಕೊರೋನಾ ವಿರುದ್ಧ ಹೊಸ ಔಷಧದ ಮೊರೆ ಹೋಗಿದೆ. ಜನರನ್ನು ಸೋಂಕಿನಿಂದ ಸುರಕ್ಷಿತವಾಗಿಡಲು ಈ ಮಾತ್ರೆಗಳನ್ನು ಸೇವಿಸುವುದು ಉತ್ತಮ ಎಂದು ಗೋವಾ ಸರ್ಕಾರ ಘೋಷಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ Ivermectin ಮಾತ್ರೆಗಳನ್ನು 5 ದಿನಗಳ ಕಾಲ ತೆಗೆದುಕೊಳ್ಳಬೇಕು. ಕೊರೋನಾ ಪಾಸಿಟಿವ್​ ಇರಲಿ, ಇಲ್ಲದಿರಲಿ ಎಲ್ಲರೂ 5 ದಿನಗಳ ಕಾಲ ಈ ಮಾತ್ರೆಯನ್ನು ಸೇವಿಸಿ. ಇದು ಸೋಂಕಿನಿಂದ ವಿರುದ್ಧ ಪರಿಣಾಮಕಾರಿ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ತಿಳಿಸಿದ್ದಾರೆ.

Ivermectin 12mg ಮಾತ್ರೆಗಳು ಗೋವಾದ ಎಲ್ಲಾ ಮೆಡಿಕಲ್​ ಶಾಪ್​ಗಳು, ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ತಡ ಮಾಡದೆ ಎಲ್ಲರೂ ಈ ಮಾತ್ರೆಯನ್ನು ಸೇವಿಸಿ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಸಹ ಮನವಿ ಮಾಡಿಕೊಂಡಿದ್ದಾರೆ. ಏನಿದು ಮಾತ್ರೆ, ಇದು ಹೇಗೆ ಕೊರೋನಾ ಸೋಂಕಿನ ವಿರುದ್ಧ ಪರಿಣಾಮಕಾರಿ? ಕೇಂದ್ರ ಸರ್ಕಾರ ಹೇಳದಿದ್ದರೂ ರಾಜ್ಯ ಸರ್ಕಾರವೊಂದು ಕೊರೋನಾ ವಿಷಯದಲ್ಲಿ ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳಬಹುದೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.

ಮಾರಕ ಸಾಂಕ್ರಾಮಿಕ ಜ್ವರವನ್ನು Ivermectin ಮಾತ್ರೆ ಗುಣಪಡಿಸುತ್ತೆ. ಈ ಜ್ವರ ಕೊರೋನಾ ಸೋಂಕಿನ ಗುಂಪಿಗೆ ಸೇರಿದ್ದು. ಇದರ ವಿರುದ್ಧ ಮಾತ್ರೆ ತಗೆದುಕೊಳ್ಳುವುದು ಪರಿಣಾಮಕಾರಿ. ಸೋಂಕು ಇರಲಿ, ಇಲ್ಲದಿರಲಿ ಈ ಮಾತ್ರೆಯನ್ನು ತೆಗೆದುಕೊಂಡರೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಸಚಿವ ರಾಣೆ ವಿವರಿಸಿದ್ದಾರೆ. ಸೋಂಕನ್ನು ತಡೆಯುವ ದೃಷ್ಟಿಯಿಂದ ಇದನ್ನು ಸೇವಿಸಬೇಕು. ಕೊರೋನಾ ಪಾಸಿಟಿವ್​ ಬರುವ ಮುನ್ನವೇ ತಡೆಗಟ್ಟುವ ವೈದ್ಯಕೀಯ ವಿಧಾನ ಇದಾಗಿದೆ ಎಂದಿದ್ದಾರೆ.

ಭಾರತದಲ್ಲೇ ಗೋವಾ ಸರ್ಕಾರವೇ ಕೊರೋನಾ ವಿರುದ್ಧ ಹೊಸ ವಿಧಾನವನ್ನು ಅನುಸರಿಸುತ್ತಿದೆ. ಬ್ರಿಟನ್​, ಇಟಲಿ, ಸ್ಪೇನ್​ ಹಾಗೂ ಚೀನಾದ ತಜ್ಞರು ಈ ಮಾತ್ರೆಯಿಂದ ಸೋಂಕು ತಗ್ಗಿರುವುದನ್ನು ಸಂಶೋಧಿಸಿದ್ದಾರೆ. ಈ ದೇಶಗಳಲ್ಲಿ ಈಗಾಗಲೇ ಈ ಮಾತ್ರೆಯನ್ನು ಜನರಿಗೆ ನೀಡಲಾಗಿದೆ. 5 ದಿನಗಳ ಕಾಲ ಜನ ಮಾತ್ರೆಗಳನ್ನು ಸೇವಿಸಿದ್ದರಿಂದ ಕೊರೋನಾ ವ್ಯಾಪಕ ಮಟ್ಟದಲ್ಲಿ ಹರಡುವುದು ತಗ್ಗಿದೆ ಎನ್ನಲಾಗಿದೆ. ತಜ್ಞರಿಂದ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಂಡೇ ಗೋವಾ ಸರ್ಕಾರ Ivermectin ಮಾತ್ರೆ ಮೊರೆ ಹೋಗಿದೆ ಎಂದು ಸಚಿವ ರಾಣೆ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಖಾಸಗಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಅತ್ಯಂತ ದುಬಾರಿ.. ವಿಶ್ವದಲ್ಲೇ ಅತಿ ಹೆಚ್ಚು ದರ ನಮ್ಮಲ್ಲಿ ಏಕೆ?

ಪ್ರಪಂಚದಾದ್ಯಂತ Ivermectin ಮಾತ್ರೆಗಳು ಕೊರೋನಾ ವಿರುದ್ಧದ ಹೋರಾಟದಲ್ಲಿ ಮ್ಯಾಜಿಕ್​ ಸೃಷ್ಟಿಸಿದೆ. Ivermectin ಮಾತ್ರೆಯಿಂದ ಈ ಕೊರೋನಾ ಪ್ಯಾಂಡಮಿಕ್​ ಕೊನೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Ivermectin ಮಾತ್ರೆಯಿಂದಲೇ ಕೊರೋನಾ ಕೊನೆಯಾಗಲಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಹೀಗಾಗಿ ಗೋವಾ ಸರ್ಕಾರ ತನ್ನ ಜನರಿಗಾಗಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ವಿಧಾನವನ್ನು ಅನುಸರಿಸಲು ಮುಂದಾಗಿದೆ ಎಂದು ಗೋವಾ ಸರ್ಕಾರ ಹೇಳಿಕೊಂಡಿದೆ. ಈ Ivermectin ಮಾತ್ರೆ ಕೊರೋನಾವನ್ನು  ತಗ್ಗಿಸುವಲ್ಲಿ ಯಶಸ್ವಿಯಾದರೆ ದೇಶದ ಇತರೆ ರಾಜ್ಯಗಳು  ಗೋವಾವನ್ನೇ ಹಿಂಬಾಲಿಸಬಹುದು ಎನ್ನಲಾಗುತ್ತಿದೆ.
Published by: Kavya V
First published: May 10, 2021, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories