ಟಿಕೆಟ್ ಬುಕಿಂಗ್ ಆರಂಭಿಸಿದ 'ಗೋ ಏರ್'; ಏಪ್ರಿಲ್.15ರ ನಂತರ ಹಾರಾಟ ನಡೆಸಲಿವೆ ವಿಮಾನಗಳು

ಚೀನಾದ ವುಹಾನ್ ಪ್ರಾಂತ್ಯದಿಂದ ಆರಂಭವಾಗಿದ್ದ ಕೊರೋನಾ ವೈರಸ್‌ ಹಾವಳಿ ನಂತರ ಇಡೀ ವಿಶ್ವದಾದ್ಯಂತ ಹಬ್ಬಿತ್ತು. ಅಂತಾರಾಷ್ಟ್ರೀಯ ವಿಮಾನಯಾನದಿಂದಲೇ ಈ ವೈರಸ್‌ ಎಲ್ಲೆಡೆ ಹರಡಿದೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಎಲ್ಲಾ ರಾಷ್ಟ್ರದಲ್ಲೂ ವಿಮಾನ ಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಗೋಏರ್​ ವಿಮಾನ

ಗೋಏರ್​ ವಿಮಾನ

  • Share this:
ಮುಂಬೈ (ಏಪ್ರಿಲ್ 06); ಕೊರೋನಾ ಸೋಂಕಿನಿಂದ ಸ್ಥಗಿತವಾಗಿದ್ದ ವಿಮಾನ ಯಾನ ಪ್ರಯಾಣಗಳು ಏಪ್ರಿಲ್.15 ರ ನಂತರ ಆರಂಭವಾಗುವುದು ಖಚಿತವಾಗಿದ್ದು, "ಗೋ ಏರ್‌" ವಿಮಾನಯಾನ ಸಂಸ್ಥೆ ಈಗಾಗಲೇ ಬುಕಿಂಗ್ ಆರಂಭಿಸಿದೆ.

ಚೀನಾದ ವುಹಾನ್ ಪ್ರಾಂತ್ಯದಿಂದ ಆರಂಭವಾಗಿದ್ದ ಕೊರೋನಾ ವೈರಸ್‌ ಹಾವಳಿ ನಂತರ ಇಡೀ ವಿಶ್ವದಾದ್ಯಂತ ಹಬ್ಬಿತ್ತು. ಅಂತಾರಾಷ್ಟ್ರೀಯ ವಿಮಾನಯಾನದಿಂದಲೇ ಈ ವೈರಸ್‌ ಎಲ್ಲೆಡೆ ಹರಡಿದೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಎಲ್ಲಾ ರಾಷ್ಟ್ರದಲ್ಲೂ ವಿಮಾನ ಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಭಾರತದಲ್ಲೂ ಸಹ ಅಂತಾರಾಷ್ಟ್ರೀಯ ವಿಮಾನ ಯಾನದ ಜೊತೆಗೆ ದೇಶೀಯ ವಿಮಾನ ಪ್ರಯಾಣವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಏಪ್ರಿಲ್.14ರ ವರೆಗೆ ಲಾಕ್‌ಡೌನ್‌ ಘೋಷಿಸುವ ಮೂಲಕ ಅಂತಾರಾಜ್ಯ ಗಡಿಯನ್ನೂ ಬಂದ್‌ ಮಾಡುವ ಮೂಲಕ ರಸ್ತೆ ಸಂಚಾರವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಆದರೆ, ಏಪ್ರಿಲ್ 14ಕ್ಕೆ ಪ್ರಧಾನಿ ನರೇಂದ್ರ ಮೋದ ಘೋಷಿಸಿದ್ದ ಲಾಕ್‌ಡೌನ್‌ ಅವಧಿ ಮುಗಿಯಲಿದೆ. ಹೀಗಾಗಿ ಭಾರತದ ಮುಂಚೂಣಿ ವಿಮಾನಯಾನ ಸಂಸ್ಥೆಯಾದ "ಗೋ ಏರ್‌" ಏಪ್ರಿಲ್.15 ರಿಂದ ವಿಮಾನ ಪ್ರಯಾಣ ಆರಂಭಿಸಲು ಅಣಿಯಾಗಿದ್ದು, ಈಗಾಗಲೇ ಬುಕಿಂಗ್ ಆರಂಭಿಸಿದೆ. ಅಲ್ಲದೆ, ಮೇ.01 ರಿಂದ ಅಂತಾರಾಷ್ಟ್ರೀಯ ವಿಮಾನ ಯಾನಕ್ಕೂ ಟಿಕೆಟ್‌ ಬುಕಿಂಗ್ ಈಗಾಗಲೇ ಆರಂಭವಾಗಿದೆ.

ಇದನ್ನೂ ಓದಿ : ಧಾರವಾಡದಲ್ಲಿ ಕೊರೋನಾ ಪ್ರಕರಣ ಜೀರೋ ಹಂತಕ್ಕೆ ಬಂದಿದೆ; ಸಚಿವ ಜಗದೀಶ್‌ ಶೆಟ್ಟರ್ ಸಂತಸ
First published: