HOME » NEWS » Coronavirus-latest-news » GLOBAL CORONAVIRUS INFECTIONS SURPASS 1 LAKH AS OUTBREAK WREAKS FINANCIAL HAVOC SNVS

Corona Virus - ಒಂದು ಲಕ್ಷ ದಾಟಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ; 3,400ಕ್ಕೂ ಹೆಚ್ಚು ಜನರು ಸಾವು

ಅಮೆರಿಕ ಮೊದಲಾದ ದೇಶಗಳು ಈ ವೈರಸ್ ನಿಗ್ರಹ ಕಾರ್ಯಕ್ಕೆ ಸಾಕಷ್ಟು ಹಣ ಸುರಿಯುತ್ತಿವೆ. ಮೊನ್ನೆಯಷ್ಟೇ ಅಮೆರಿಕದ ಸಂಪುಟವು 8.3 ಬಿಲಿಯನ್ ಡಾಲರ್ (ಸುಮಾರು 61 ಸಾವಿರ ಕೊಟಿ ರೂಪಾಯಿ) ಹಣಕ್ಕೆ ಅನುಮೋದನೆ ಕೊಟ್ಟಿತ್ತು.

news18-kannada
Updated:March 7, 2020, 8:21 AM IST
Corona Virus - ಒಂದು ಲಕ್ಷ ದಾಟಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ; 3,400ಕ್ಕೂ ಹೆಚ್ಚು ಜನರು ಸಾವು
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮಾ. 07): ಕೊರೋನಾ ವೈರಸ್ ವಿಶ್ವಾದ್ಯಂತ ವೇಗವಾಗಿ ಪಸರಿಸುತ್ತಿದೆ. ಚೀನಾದಲ್ಲೇ ಹೆಚ್ಚಾಗಿ ಆರ್ಭಟಿಸುತ್ತಿದೆಯಾದರೂ ಈಗಾಗಲೇ 90ಕ್ಕೂ ಹೆಚ್ಚು ದೇಶಗಳಿಗೆ ಅಡಿ ಇಟ್ಟಿದೆ. ವೈರಸ್​ನ ಸೋಂಕಿಗೆ ಒಳಗಾದವರ ಸಂಖ್ಯೆ 1 ಲಕ್ಷ ದಾಟಿದೆ. ಸಾವನ್ನಪ್ಪಿದವರ ಸಂಖ್ಯೆ 3,400ಕ್ಕೂ ಹೆಚ್ಚು. ನಿನ್ನೆ ಶುಕ್ರವಾರ ಆರು ದೇಶಗಳಿಗೆ ಇದು ಮೊದಲ ಬಾರಿ ಪ್ರವೇಶ ಮಾಡಿದೆ. ಚೀನಾವೊಂದರಲ್ಲೇ 3 ಸಾವಿರಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ಯೂರೋಪ್ ಖಂಡದ ಇಟಲಿ ದೇಶದಲ್ಲಿ ಹೆಚ್ಚೂಕಡಿಮೆ 150 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವ ಸಿಂಗಾಪುರದಲ್ಲಿ ನಿನ್ನೆ 13 ಮಂದಿಗೆ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ.

ಚೀನಾದಲ್ಲಿ ಬಹುತೇಕ ಉದ್ಯಮ ಸ್ಥಗಿತಗೊಂಡಿದೆ. ಅನೇಕ ಫ್ಯಾಕ್ಟರಿ, ಮಾಲ್ ಇತ್ಯಾದಿಗಳು ಬಂದ್ ಆಗಿವೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಟ್ಟಿದ್ಧಾರೆ. ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿದೆ. ಕೆಲವೆಡೆ ಜನರು ಮಾಸ್ಕ್ ಹಾಕಿಕೊಳ್ಳುವುದು, ಸ್ವಚ್ಛತೆ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ಧಾರೆ. ಇನ್ನೂ ಕೆಲವೆಡೆ ಜನರಲ್ಲಿ ಜಾಗೃತಿಯ ಕೊರತೆ ಇದೆ. ಹೀಗಾಗಿ, ಬಹಳ ವೇಗವಾಗಿ ಈ ನೂತನ ವೈರಸ್ ಹರಡುವ ಸಾಧ್ಯತೆ ಇದೆ.

ಇದನ್ನೂ ಓದಿ: YES Bank Crisis: ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ

ಜಪಾನ್​ನಲ್ಲಿ ಕೆಲ ವಾರಗಳ ಹಿಂದೆ ಕ್ರೂಸ್ ಹಡಗನ್ನು ಕೊರೊನಾ ಶಂಕೆಯಲ್ಲಿ ನಡುನೀರಲ್ಲೇ ನಿಲ್ಲಿಸಿದ ಘಟನೆ ನಡೆದಿತ್ತು. ಈಗ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬಳಿ ಅಂಥದ್ದೇ ಬೆಳವಣಿಗೆಯಾಗಿದೆ. ಗ್ರ್ಯಾಂಡ್ ಪ್ರಿನ್ಸೆಸ್ ಹಡಗು ಬಂದರನ್ನು ಪ್ರವೇಶ ಮಾಡದಂತೆ ನಿಲ್ಲಿಸಲಾಗಿದೆ. ಇಲ್ಲಿ 35 ಮಂದಿಗೆ ಫ್ಲೂ ರೀತಿಯ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು. ಕೊರೋನಾ ಇರಬಹುದು ಎಂಬ ಶಂಕೆಯ ಮೇಲೆ ಹಡಗನ್ನು ಸಮುದ್ರದಲ್ಲೇ ತಡೆದು ನಿಲ್ಲಿಸಲಾಗಿದೆ. ಇಲ್ಲಿ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಅಮೆರಿಕ ಮೊದಲಾದ ದೇಶಗಳು ಈ ವೈರಸ್ ನಿಗ್ರಹ ಕಾರ್ಯಕ್ಕೆ ಸಾಕಷ್ಟು ಹಣ ಸುರಿಯುತ್ತಿವೆ. ಮೊನ್ನೆಯಷ್ಟೇ ಅಮೆರಿಕದ ಸಂಪುಟವು 8.3 ಬಿಲಿಯನ್ ಡಾಲರ್ (ಸುಮಾರು 61 ಸಾವಿರ ಕೊಟಿ ರೂಪಾಯಿ) ಹಣಕ್ಕೆ ಅನುಮೋದನೆ ಕೊಟ್ಟಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: March 7, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories