ಕೊರೋನಾ ಟೆಸ್ಟ್ ಮಾಡಿಸಿ ಅಂದ್ರೆ ಜಿಕೆವಿಕೆ ಹಾಸ್ಟೆಲ್ ಕಾಂಪೌಂಡ್ ಹಾರಿ ಕಾಲುಕಿತ್ತ ವಿದ್ಯಾರ್ಥಿನಿಯರು!

ಯಾರೇ ತಮ್ಮ ಮನೆಗೆ ಹೋಗಬೇಕಾದರೆ ಟೆಸ್ಟ್ ಮಾಡಿಸಿಕೊಂಡು ಹೋಗಬೇಕು. ಅಲ್ಲದೇ, ಸ್ವ ಇಚ್ಚೆಯಿಂದ ಮನೆಗೆ ಹೋಗ್ತಿದ್ದೇವೆ ಅಂತ ಪತ್ರ ಬರೆದು ಕೊಡುವಂತೆ ವಿವಿಯಿಂದ ಆದೇಶ ಹೊರಡಿಸಲಾಗಿತ್ತು. ಸೋಂಕು ಇಲ್ಲದೆ ವಿದ್ಯಾರ್ಥಿಗಳನ್ನು ಮಾತ್ರ ವಿವಿ ಆಡಳಿತ ಮಂಡಳಿ ಹೊರಗೆ ಕಳುಹಿಸುತ್ತಿದೆ. ಅದರಂತೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರೀಕ್ಷೆಗೆ ಮುಂದಾದಾಗ ಅವರ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.

ಕಾಂಪೌಂಡ್ ಹಾರಿ ಎಸ್ಕೇಪ್ ಆದ ವಿದ್ಯಾರ್ಥಿನಿಯರು.

ಕಾಂಪೌಂಡ್ ಹಾರಿ ಎಸ್ಕೇಪ್ ಆದ ವಿದ್ಯಾರ್ಥಿನಿಯರು.

 • Share this:
  ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಕೆವಿಕೆ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕೊರೋನಾ ಪರೀಕ್ಷೆ ಮಾಡಿಸಲು ಕಾಲೇಜು ಆಡಳಿತ ಮಂಡಳಿ ಮುಂದಾಗಿತ್ತು. ಆದರೆ, ಕೊರೋನಾ ಪರೀಕ್ಷೆಗೆ ಹೆದರಿದ ವಿದ್ಯಾರ್ಥಿನಿಯರು ಹಾಸ್ಟೆಲ್ ಕಾಂಪೌಂಡ್ ಜಿಗಿದು ತಪ್ಪಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರು ಕಾಂಪೌಂಡ್ ಜಿಗಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

  ಕೊರೋನಾ ಟೆಸ್ಟ್ ಮಾಡಿಸಿ ಅಂದ್ರೆ ವಿದ್ಯಾರ್ಥಿನಿಯರು ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.  ಜಿಕೆವಿಕೆಯ 20ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಫ್ ಲೈನ್ ಕ್ಲಾಸ್ ಕ್ಲೋಸ್ ಮಾಡಲಾಗಿದೆ. ಎರಡು ದಿನಗಳಿಂದ ಆಫ್ ಲೈನ್ ತರಗತಿ ಸ್ಥಗಿತ ಮಾಡಿ ಆನ್ ಲೈನ್ ಕ್ಲಾಸ್ ಮುಂದುವರಿಸಲಾಗಿತ್ತು. ಹಾಸ್ಟೆಲ್​ನಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲು ಕೃಷಿ ವಿವಿ ಮುಂದಾಗಿತ್ತು.

  ಆದರೆ, ಕೊರೋನಾ ಟೆಸ್ಟ್ ಗೆ ಹೆದರಿದ ವಿದ್ಯಾರ್ಥಿನಿಯರು ಹಾಸ್ಟೆಲ್ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದಾರೆ. ಕೊರೋನಾ ಟೆಸ್ಟ್ ತಪ್ಪಿಸಿಕೊಳ್ಳಲು ಹೇಳದೆ ಕೇಳದೆ ಹಾಸ್ಟೆಲ್​ ಕಾಂಪೌಂಡ್ ಹಾರಿ ವಿದ್ಯಾರ್ಥಿನಿಯರು ಓಡಿಹೋಗಿದ್ದಾರೆ. ವಿದ್ಯಾರ್ಥಿನಿಯರು ಕಾಂಪೌಂಡ್ ಹಾರುತ್ತಿರುವ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

  ಕೊರೋನಾ ಸೋಂಕಿನಿಂದಾಗಿ ಕೃಷಿ ವಿವಿಯಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ.  ಯಾರೇ ತಮ್ಮ ಮನೆಗೆ ಹೋಗಬೇಕಾದರೆ ಟೆಸ್ಟ್ ಮಾಡಿಸಿಕೊಂಡು ಹೋಗಬೇಕು. ಅಲ್ಲದೇ, ಸ್ವ ಇಚ್ಚೆಯಿಂದ ಮನೆಗೆ ಹೋಗ್ತಿದ್ದೇವೆ ಅಂತ ಪತ್ರ ಬರೆದು ಕೊಡುವಂತೆ ವಿವಿಯಿಂದ ಆದೇಶ ಹೊರಡಿಸಲಾಗಿತ್ತು. ಸೋಂಕು ಇಲ್ಲದೆ ವಿದ್ಯಾರ್ಥಿಗಳನ್ನು ಮಾತ್ರ ವಿವಿ ಆಡಳಿತ ಮಂಡಳಿ ಹೊರಗೆ ಕಳುಹಿಸುತ್ತಿದೆ. ಅದರಂತೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರೀಕ್ಷೆಗೆ ಮುಂದಾದಾಗ ಅವರ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.

  ಇದನ್ನು ಓದಿ: Night Curfew - ನೈಟ್ ಕರ್ಫ್ಯೂ ಎಷ್ಟರಮಟ್ಟಿಗೆ ಸಹಾಯಕಾರಿ? ಪ್ರಬಲ ಕಾರಣ ಇದೆಯಾ?

  ದೇಶದಲ್ಲಿ ಹೆಚ್ಚಿನ ಕೊರೊನಾ ಸೋಂಕು ಪ್ರಕರಣಗಳು

  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಕಳೆದ ಭಾನುವಾರ ಮತ್ತು ಮಂಗಳವಾರ ಒಂದೇ ದಿನ ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಈಗ ಬುಧವಾರದಿಂದ ದಿನ ಒಂದರಲ್ಲಿ ಒಂದೂಕಾಲು ಲಕ್ಷಕ್ಕೂ ‌ಹೆಚ್ಚು‌ ಕೊರೋನಾ ಸೋಂಕು ಪೀಡಿತರು ಪತ್ತೆಯಾಗಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

  ಗುರುವಾರ 1,31,968 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 61,899 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,30,60,542ಕ್ಕೆ ಏರಿಕೆ ಆಗಿದೆ.‌ ಅಂದರೆ ಈವರೆಗೆ ಸುಮಾರು 1.3 ಕೋಟಿ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಗುರುವಾರ ಒಂದೇ ದಿನ ಕೊರೋನಾಗೆ 780 ಜನರು ಬಲಿ ಆಗಿದ್ದಾರೆ. ಸದ್ಯ ಮಹಾಮಾರಿ ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,67,642ಕ್ಕೆ ಏರಿಕೆ ಆಗಿದೆ.
  Published by:HR Ramesh
  First published: