ಆಮ್ಲಜನಕ ಕೊರತೆಯಿಂದ ಸಾವು: ಲೆಕ್ಕ ಕೊಡಿ ಎಂದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ದೆಹಲಿ ಮತ್ತು ದೇಶಾದ್ಯಂತ ಇತರ ಸ್ಥಳಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಸಾವುಗಳು ಸಂಭವಿಸಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸರ್ಕಾರವನ್ನು ದೂರಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಗಳಿಗೆ ಪತ್ರ ಬರೆದು ಎರಡನೇ ಕೋವಿಡ್  ಆಮ್ಲಜನಕದ ಕೊರತೆಯಿಂದಾಗಿ ಎಷ್ಟು ಸಾವುಗಳು ಸಂಭವಿಸಿವೆ ಎಂಬ ಬಗ್ಗೆ ಮಾಹಿತಿ ಕೋರಿದೆ. ಆಗಸ್ಟ್ 13 ರಂದು ಮುಂಗಾರು ಅಧಿವೇಶನ ಮುಗಿಯುವ ಮೊದಲು ಈ ದತ್ತಾಂಶವನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

  "ಸಂಸತ್ತಿನಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಸಾವುಗಳ ಬಗ್ಗೆ  ಪದೇ ಪದೇ ಪ್ರಶ್ನೆಗಳು ಎದುರಾಗುತ್ತಿರುವ ಕಾರಣ ಈ ಮಾಹಿತಿಯನ್ನು ಕೋರಿ ರಾಜ್ಯಗಳಿಗೆ ಪತ್ರ ಬರೆದಿದ್ದೇವೆ" ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿದರು.


  ಕಳೆದ ವಾರ ರಾಜ್ಯಸಭೆಯಲ್ಲಿ ನಡೆದ ಪ್ರಶ್ನೋತ್ತರದ ವೇಳೆ, ಕೊರೋನಾ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ತೀವ್ರ ಕೊರತೆ ಎದುರಾಗಿತ್ತು, ಇದರಿಂದ ಸಾವಿರಾರು ಜನ ತಮ್ಮ ಪ್ರಾಣ ತೆತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವಾಲಯವು  "ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲ ಈ ಕುರಿತು ನಿರ್ದಿಷ್ಟವಾಗಿ ನಮ್ಮ ಬಳಿ ದಾಖಲೆಗಳಿಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಯಾವುದೇ ವರದಿಯಾಗಿಲ್ಲ" ಎಂದು ಹೇಳಿತ್ತು. ಈ ಹೇಳಿಕೆ ಇಡೀ ದೇಶದಾದ್ಯಂತ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

  ಈ ಪ್ರಶ್ನೆಗೆ ಉತ್ತರಿಸಿದ್ದ ರಾಜ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಭಾರತಿ ಪ್ರವೀಣ್ ಪವಾರ್, ಆಸ್ಪತ್ರೆಗಳು ಮತ್ತು ವೈದ್ಯಕೀಯ ಆಮ್ಲಜನಕ ಪೂರೈಕೆದಾರರ ನಡುವಿನ ಒಪ್ಪಂದದ ಮೂಲಕ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ನಿರ್ಧರಿಸಲಾಗುತ್ತದೆ. “ಆರೋಗ್ಯವು ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ವಿಷಯವಾಗಿದೆ.  ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ಉಂಟಾಗಿವೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ, ”ಎಂದು ಅವರು ಉತ್ತರಿಸಿದ್ದರು.

  ದೆಹಲಿ ಮತ್ತು ದೇಶಾದ್ಯಂತ ಇತರ ಸ್ಥಳಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಸಾವುಗಳು ಸಂಭವಿಸಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸರ್ಕಾರವನ್ನು ದೂರಿದ್ದರು.


  ಎರಡನೇ ಕೋವಿಡ್​ ಅಲೆಯ ಸಂದರ್ಭದಲ್ಲಿ ದೆಹಲಿ ಸೇರಿದಂತೆ ಅನೇಕ ರಾಜ್ಯಗಳು ಆಮ್ಲಜನಕ ಪೂರೈಕೆಗಾಗಿ ಸಾಕಷ್ಟು ಬೇಡಿಕೆ ಸಲ್ಲಿಸಿದ್ದವು. ದೆಹಲಿ ಸರ್ಕಾರ ಈ ವಿಚಾರವಾಗಿ ನ್ಯಾಯಲಯದ ಮೊರೆ ಹೋಗಿತ್ತು.


  ಕರ್ನಾಟಕ ರಾಜ್ಯದ ಚಾಮರಾಜನಗರ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆ ಆಮ್ಲಜನಕದ ಕೊರತೆಯ ಕೂಗು ಸಾಕಷ್ಟು ಸುದ್ದಿ ಮಾಡಿತ್ತು, ಅಲ್ಲದೇ ಉತ್ತರ ಪ್ರದೇಶದಲ್ಲಿ ಆಮ್ಲಜನಕ ಪೂರೈಕೆಯ ಅಣಕು ಕಾರ್ಯಾಚರಣೆ ವೇಳೆ ವ್ಯತ್ಯಯ ಉಂಟಾಗಿ 20ಕ್ಕೂ ಹೆಚ್ಚುಜನ ಸತ್ತಿದ್ದರು ಎಂದು ವರದಿಯಾಗಿತ್ತು.  ಸ್ವತಃ ಪ್ರಧಾನಿಯವರೇ ಏಪ್ರಿಲ್​ ತಿಂಗಳಿನಲ್ಲಿ ಬೇಡಿಕೆ ಆಧಾರದ ಮೇಲೆ ನಾವು ಆಮ್ಲಜನಕ ಪೂರೈಸುತ್ತೇವೆ ಎಂದು ಭರವಸೆ ನೀಡಿದ್ದರು.

  ಇದನ್ನೂ ಓದಿ: ಬ್ಯಾಂಕ್​ಗಳೇ ಸೇರಿ ನನ್ನನ್ನು ದಿವಾಳಿಯಾಗಿಸುತ್ತಿವೆ: ವ್ಯಂಗ್ಯವಾಡಿ ಟ್ವೀಟ್​ ಮಾಡಿದ ವಿಜಯ್​ ಮಲ್ಯ

  ಈ ಎಲ್ಲಾ ಘಟನೆ ನಡೆದ ಮೇಲೂ ಸರ್ಕಾರದ ವೈಫಲ್ಯತೆ ಖಂಡಿಸಿ ವಿಪಕ್ಷಗಳು ಭಾರೀ ಕೋಲಾಹಲವನ್ನೇ ಸೃಷ್ಟಿ ಮಾಡಿದ್ದವು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: