HOME » NEWS » Coronavirus-latest-news » GIRISH MATTANNAVAR SEND REQUEST LETTER TO CM BEHALF OF CORONA WARRIORS HTV KVD

ದಯವಿಟ್ಟು ಅದೊಂದು ಕೆಲಸ ಮಾಡಿ.. ಸಿಎಂಗೆ ಪತ್ರದ ಮೂಲಕ ಗಿರೀಶ್ ಮಟ್ಟಣ್ಣವರ್ ಮನವಿ!

ಚಿಕಿತ್ಸೆ ಹಾಗೂ ಲಸಿಕೆ ವಿಷಯದಲ್ಲಿ ಕೊರೋನಾ ವಾರಿಯರ್ಸ್​​ಗೆ ಆದ್ಯತೆ ನೀಡಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಗಿರೀಶ್​ ಮಟ್ಟಣ್ಣವರ್​ ಮನವಿ ಮಾಡಿಕೊಂಡಿದ್ದಾರೆ.

news18-kannada
Updated:May 13, 2021, 8:46 PM IST
ದಯವಿಟ್ಟು ಅದೊಂದು ಕೆಲಸ ಮಾಡಿ.. ಸಿಎಂಗೆ ಪತ್ರದ ಮೂಲಕ ಗಿರೀಶ್ ಮಟ್ಟಣ್ಣವರ್ ಮನವಿ!
ಗಿರೀಶ್ ಮಟ್ಟಣ್ಣವರ್
  • Share this:
ಬೆಂಗಳೂರು: ಕೊರೋನಾ ಎರಡನೇ ಅಲೆಯ ತೀವ್ರತೆಗೆ ಇಡೀ ಭಾರತ ತತ್ತರಿಸಿದೆ. ರಾಜ್ಯದಲ್ಲೂ ಮಹಾಮಾರಿ ಸೋಂಕಿನ ಅಟ್ಟಹಾಸ ಮಿತಿಮೀರಿದೆ. ಪ್ರತಿದಿನ ಸಾವಿರಾರು ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು, ನೂರಾರು ಸಾವುಗಳು ಜನ ಸಾಮಾನ್ಯರಷ್ಟೇ ಅಲ್ಲ ಖುದ್ದು ಕೊರೋನಾ ವಾರಿಯರ್‌ಗಳ ಧೈರ್ಯವನ್ನೂ ಕಸಿದುಕೊಂಡಿದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಬೆಡ್ ಸಿಗದೇ, ಸರಿಯಾದ ಚಿಕಿತ್ಸೆ ದೊರೆಯದೇ ಹಲವಾರು ಮಂದಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಕೊರೊನಾ ವಾರಿಯರ್‌ಗಳೂ ಮಾರಕ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿಯೇ ಕೋವಿಡ್ ನಾಗರಿಕ ಸೇವಾ ಕೇಂದ್ರದ ನಿರ್ದೇಶಕ ಗಿರೀಶ್ ಮಟ್ಟಣ್ಣವರ್, ಚಿಕಿತ್ಸೆ ಹಾಗೂ ಲಸಿಕೆ ವಿಷಯದಲ್ಲಿ ಕೊರೋನಾ ವಾರಿಯರಸ್ಗೆ ಆದ್ಯತೆ ನೀಡಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.

ದೇಶದಾದ್ಯಂತ ಹಲವೆಡೆ ಕೋವಿಡ್ ಎರಡನೇ ಅಲೆಯಿಂದಾಗಿ ಮುಂಚೂಣಿಯಲ್ಲಿರುವ ಕೋವಿಡ್ ವಾರಿಯರ್ಸ್ ಕೂಡ ಹೆಚ್ಚಾಗಿ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ರೋಗಿಗಳ ಜೊತೆಗೆ ನೇರವಾಗಿ ಸಂಪರ್ಕದಲ್ಲಿರುವ ವೈದ್ಯರು, ನರ್ಸ್ಗಳು ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು, ಕೋವಿಡ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಹಾಗೂ ಸರ್ಕಾರೇತರ ಸಿಬ್ಬಂದಿ, ಸಿಟಿಜನ್ ಹೆಲ್ಪ್ ಡೆಸ್ಕ್, ಆರೋಗ್ಯ ಮಿತ್ರ ಸಿಬ್ಬಂದಿ, ಮಾಧ್ಯಮದ ಸಿಬ್ಬಂದಿ ಹೀಗೆ ಹಲವರು ಕೋವಿಡ್‌ಗೆ ತುತ್ತಾಗಿರುವ ಪ್ರಕರಣಗಳು ಹೆಚ್ಚಾಗಿವೆ. ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಹಾಸಿಗೆ ಅಭಾವ ಇರುವುದರಿಂದ, ಕೊರೊನಾ ಪರಿಸ್ಥಿತಿಯಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ವಾರಿಯರ್ಸ್ಗೆ ಆರೋಗ್ಯದ ಅಭದ್ರತೆ ಸಹ ಕಾಡುತ್ತಿದೆ. ಹೀಗಾಗಿಯೇ ಮುಂದೆ ಏನು ಅನ್ನೋ ಪ್ರಶ್ನೆ ಅವರನ್ನು ಕಾಡಲಾರಂಭಿಸಿದೆ. `

ಇದನ್ನೂ ಓದಿ: ಡ್ರಗ್ ಕೇಸ್ ನಂತರ ನಟಿ ಸಂಜನಾ ಗಲ್ರಾನಿ ವಿರುದ್ಧ ಮತ್ತೊಂದು FIR.. ಮತ್ತೆ ಅರೆಸ್ಟ್ ಆಗ್ತಾರಾ?

ಕೊರೊನಾ ವಾರಿಯರ್‌ಗಳು ತಮಗೇ ಹಾಸಿಗೆ ಸಿಗಲಿಲ್ಲ ಅಂದರೆ ನಾವು ಯಾವ ರೀತಿ ಕೆಲಸ ಮಾಡಬೇಕು ಎಂಬ ಅಭದ್ರತೆಯಲ್ಲಿದ್ದಾರೆ. ಹೀಗಾಗಿಯೇ ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕೊರೊನಾ ವಾರಿಯರ್ಸ್ಗೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಮೀಸಲಿಡಬೇಕಿದೆ. ಹಾಗಾದಲ್ಲಿ ಮಾತ್ರ ಕೊರೊನಾ ವಾರಿಯರ್ಸ್ಗೆ ಧೈರ್ಯ ಬರುತ್ತದೆ. ನಾವು ಕೆಲಸ ಮಾಡುವಾಗ ಏನಾದರೂ ನಮಗೆ ಪಾಸಿಟಿವ್ ಬಂದಾಗ ಆಸ್ಪತ್ರೆಗಳಲ್ಲಿ ನಮಗೆ ಬೆಡ್ ಸಿಗುತ್ತೆ, ಚಿಕಿತ್ಸೆಯೂ ಸಿಗುತ್ತೆ ಎಂಬ ಧೈರ್ಯ ಬರುತ್ತದೆ ಎನ್ನುತ್ತಾರೆ ಕೊವಿಡ್ ನಾಗರಿಕ ಸೇವಾ ಕೇಂದ್ರದ ನಿರ್ದೇಶಕ ಗಿರೀಶ್ ಮಟ್ಟಣ್ಣವರ್.

ಹಾಗೇ ಲಸಿಕೆ ಜನಸಾಮಾನ್ಯರಿಗೆ ಮಾತ್ರವಲ್ಲ ಕೊರೊನಾ ವಾರಿಯರ್ಸ್ಗೂ ಸಹ ಸಿಗುತ್ತಿಲ್ಲ. ಹೀಗಾಗಿಯೇ ಲಸಿಕೆಯ ವಿಷಯದಲ್ಲೂ ಕೊರೊನಾ ವಾರಿಯರ್ಸ್ಗೆ ಆದ್ಯತೆ ನೀಡಬೇಕು ಎಂದು ಗಿರೀಶ್ ಮಟ್ಟಣ್ಣವರ್ ಸಿಎಂ ಬಿಎಸ್‌ವೈ ಅವರಿಗೆ ಮನವಿ ಮಾಡಿ ಈಮೇಲ್ ಮೂಲಕ ಪತ್ರ ಬರೆದಿದ್ದಾರೆ. ನನಗೆ ಸಿಎಂ ಯಡಿಯೂರಪ್ಪನವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಯಾಕೆ ಅಂದರೆ ಕಳೆದ ಬಾರಿಯೂ ಸಹ ಕರ್ನಾಟಕ ಕೋವಿಡ್ ಸೋಂಕಿನಿಂದ ಹೊರಬರುವ ವಿಷಯದಲ್ಲಿ ಮುಂಚೂಣಿಯಲ್ಲಿತ್ತು. ಅದಕ್ಕೆ ಕಾರಣ ಸಿಎಂ ಯಡಿಯೂರಪ್ಪನವರ ದಕ್ಷತೆ ಹಾಗೂ ಸಮಯೋಚಿತ ನಿರ್ಧಾರಗಳು. ಈ ಬಾರಿಯೂ ಎರಡು ಬಾರಿ ಕೊರೋನಾ ಸೋಂಕು ತಗುಲಿದ್ದರೂ ಸಹ ನಿರಂತರವಾಗಿ ಅವರು ಅತ್ಯಂತ ತುರ್ತಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Youtube Video

ಕೊರೊನಾ ವಾರಿಯರ್‌ಗಳಿಗೆ ಆದ್ಯತೆ ನೀಡುವ ಸಲುವಾಗಿ ಪ್ರತ್ಯೇಕ ಶಾಖೆ ಮಾಡಬೇಕು, ಅಧಿಕಾರಿಗಳನ್ನು ನಿಯೋಜಿಸಬೇಕು ಹಾಗೂ ಆದಷ್ಟು ಬೇಗ ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಮಟ್ಟಣ್ಣವರ ಮನವಿ ಮಾಡಿದ್ದಾರೆ.
Published by: Kavya V
First published: May 13, 2021, 8:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories