ನೀವು ಕೊರೋನಾ ವ್ಯಾಕ್ಸಿನ್​ ಪಡೆದಿದ್ದೀರಾ? ಹಾಗಾದರೆ ವಾಟ್ಸಪ್​ ಮೂಲಕವೂ ಪಡೆಯಬಹುದು ಪ್ರಮಾಣ ಪತ್ರ

18-44 ವರ್ಷ ವಯಸ್ಸಿನವರಿಗೆ ಶನಿವಾರದಂದು, 27,55,447  ಮೊದಲ ಡೋಸ್‌ಗಳನ್ನು ಮತ್ತು 5,08,616 ಜನರಿಗೆ ಎರಡನೆ ಹಂತದ ಡೋಸ್​ ನೀಡಲಾಯಿತು ಎಂದು ಸಚಿವಾಲಯ ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೇಂದ್ರ ಸರ್ಕಾರವು ಹೊಸ ರೀತಿಯ ವೈಶಿಷ್ಟ್ಯತೆಯಿಂದ ಕೂಡಿದ ತಂತ್ರಜ್ಞಾನವನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ನಾಗರಿಕರು ತಮ್ಮ ಫೋನ್‌ಗೆ ಕೋವಿಡ್​ ಲಸಿಕೆ ಪಡೆದ ಪ್ರಮಾಣಪತ್ರಗಳನ್ನು ನೇರವಾಗಿ ವಾಟ್ಸಾಪ್‌ ಮೂಲಕ ಸರಳವಾದ ವಿಧಾನದಲ್ಲಿ ಪಡೆಯಬಹುದು ಎಂದು ಹೇಳಲಾಗಿದೆ.

  ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಬಯಸುವ ಯಾರಾದರೂ ವಾಟ್ಸಾಪ್ ಸಂದೇಶವನ್ನು ನಿರ್ದಿರ್ಷ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು ಮತ್ತು ಪ್ರಮಾಣಪತ್ರವನ್ನು ಒಂದೇ ಬಾರಿಗೆ ಪಡೆಯಬಹುದು ಎಂದು ಆರೋಗ್ಯ ಸಚಿವಾಲಯ ಭಾನುವಾರ ಹೊರಡಿಸಿರುವ ಪ್ರಕಟಣೆ ಮೂಲಕ ತಿಳಿಸಿದೆ.

  ಹೊಸ ವೈಶಿಷ್ಟ್ಯದ ಅಡಿಯಲ್ಲಿ, ಸರ್ಕಾರದ ಅಧಿಕೃತ 'ಕರೋನಾ ಹೆಲ್ಪ್‌ಡೆಸ್ಕ್' - +91 90131 51515- ಗೆ  'ಕೋವಿಡ್ ಪ್ರಮಾಣಪತ್ರ' ಎಂದು ಟೈಪ್ ಮಾಡಿ ಮತ್ತು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪಡೆಯಲು ಎಂಬುದನ್ನು ನಮೂದಿಸಿ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಬೇಕು, ಆಗ ಒಂದು OTP ಯನ್ನು ಕಳಿಸಲಾಗುತ್ತದೆ. ಆ ಓಟಿಪಿಯನ್ನು 30 ಸೆಕೆಂಡುಗಳ ಒಳಗೆ ಟೈಪ್​ ಮಾಡಿದರೆ ಸಾಕು ಲಸಿಕೆ ಪಡೆದ ಪ್ರಮಾಣ ಪತ್ರ ವಾಟ್ಸಪ್​ ಮೂಲಕ ನಿಮ್ಮ ಮೊಬೈಲ್​ ಒಳಗೆ ಸೇರುತ್ತದೆ.


  "ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾನ್ಯ ಮನುಷ್ಯನ ಜೀವನದಲ್ಲಿ ಕ್ರಾಂತಿಕಾರಿ ಅಲೆ! ಈಗ 3 ಸುಲಭ ಹಂತಗಳಲ್ಲಿ MyGov ಕರೋನಾ ಸಹಾಯವಾಣಿ ಕೇಂದ್ರದ ಮೂಲಕ #COVID19 ಲಸಿಕೆ ಪ್ರಮಾಣಪತ್ರವನ್ನು ಪಡೆಯಿರಿ. ಸಂಪರ್ಕ ಸಂಖ್ಯೆ : +91 9013151515 ಮೂಲಕ WhatsApp ನಲ್ಲಿ 'ಕೋವಿಡ್ ಪ್ರಮಾಣಪತ್ರ' ಎಂದು ಟೈಪ್ ಮಾಡಿ ಮತ್ತು ಕಳುಹಿಸಿ. OTP ನಮೂದಿಸಿ. ನಿಮ್ಮ ಪ್ರಮಾಣಪತ್ರವನ್ನು ಸೆಕೆಂಡುಗಳಲ್ಲಿ ಪಡೆಯಿರಿ, ”ಎಂದು ಆರೋಗ್ಯ ಸಚಿವರ ಕಚೇರಿ ಟ್ವೀಟ್ ಮಾಡಿದೆ.


  ಭಾರತದಲ್ಲಿ ನಡೆಸಲಾದ ಕೋವಿಡ್ ಲಸಿಕೆ ಅಭಿಯಾನದ ಅಡಿಯಲ್ಲಿ, ಜನರು ತಮ್ಮ ಮೊದಲ ಮತ್ತು ಎರಡನೇ ಡೋಸ್​ ಪಡೆದ ನಂತರ ಪ್ರಮಾಣಪತ್ರಗಳನ್ನು ಪುರಾವೆಯಾಗಿ ಪಡೆಯುತ್ತಾರೆ.


  ಇದುವರೆಗು ಭಾರತ ದೇಶದಲ್ಲಿ ನೀಡಲಾಗಿರುವ ಕೋವಿಡ್ -19 ಲಸಿಕೆ ಪ್ರಮಾಣಗಳು 50.62 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.


  18-44 ವರ್ಷ ವಯಸ್ಸಿನವರಲ್ಲಿ ಶನಿವಾರದಂದು, 27,55,447  ಮೊದಲ ಡೋಸ್‌ಗಳನ್ನು ಮತ್ತು 5,08,616 ಅನ್ನು ಎರಡನೆ ಹಂತದ ಡೋಸ್​ ನೀಡಲಾಯಿತು ಎಂದು ಸಚಿವಾಲಯ ಹೇಳಿದೆ.

  ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳು ಒಂದೇ ವಯಸ್ಸಿನ ಗುಂಪಿನ ಅಡಿಯಲ್ಲಿ ಬರುವ ಎಲ್ಲಾ ರೀತಿಯ ವಯಸ್ಕರಿಗೆ ಒಂದು ಕೋಟಿಗು ಅಧಿಕ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.


  ಇದನ್ನೂ ಓದಿ: ಕೆಂಪು ಕೋಟೆ ಸ್ವಾತಂತ್ರ್ಯ ದಿನಾಚರಣೆ: ಭಾಗವಹಿಸದಿದ್ದರೆ ಕಠಿಣ ಕ್ರಮ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಕ್ಯಾಬಿನೆಟ್ ಕಾರ್ಯದರ್ಶಿ

  ಅಲ್ಲದೆ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಘಡ, ದೆಹಲಿ, ಹರಿಯಾಣ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ 18-44 ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: