ಹೃದಯ ವೈಶಾಲ್ಯತೆ ಮೆರೆದು ಗಂಭೀರ್ ದಿಲ್ ಕದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು

ಗಂಭೀರ್ ಅವರ ಈ ಮಹತ್ವದ ಕಾರ್ಯದ ಕುರಿತು ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಸದ್ಯ ಗಂಭೀರ್ ಆರ್​ಸಿಬಿ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗೌತಮ್ ಗಂಭೀರ್ ಹಾಗೂ ಆರ್​ಸಿಬಿ ಲೋಗೋ.

ಗೌತಮ್ ಗಂಭೀರ್ ಹಾಗೂ ಆರ್​ಸಿಬಿ ಲೋಗೋ.

 • Share this:
  ಬೆಂಗಳೂರು (ಏ. 04): ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕಿನ ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಲಾಕ್​ಡೌನ್​​ಗೆ ಕರೆನೀಡಿದ್ದರೂ ಸೋಂಕಿತ ಪ್ರಕರಣಗಳೇನೂ ಕಡಿಮೆಯಾಗುತ್ತಿಲ್ಲ. ಭಾರತದಲ್ಲಿ ಸುಮಾರು 2547 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಸಾವಿನ ಸಂಖ್ಯೆ 62 ಏರಿಕೆಯಾಗಿದೆ.

  ಈಗಾಗಲೇ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯ ನೀಡಲು ಸಿನಿ ತಾರೆಯರು, ಕ್ರೀಡಾಪಟುಗಳು, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಮುಂದಾಗಿದ್ದಾರೆ. ಹೆಚ್ಚಿನವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

  ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

  ಮೊನ್ನೆಯಷ್ಟೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ ಸಂಸದನಾಗಿ ಲಭಿಸಲಿರುವ ಎರಡು ವರ್ಷಗಳ ಸಂಬಳವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದರು.

  ಗಂಭೀರ್ ಅವರ ಈ ಮಹತ್ವದ ಕಾರ್ಯದ ಕುರಿತು ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಸದ್ಯ ಗಂಭೀರ್ ಆರ್​ಸಿಬಿ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದು, 'ನಿಮ್ಮೆದರು ಸೋಲುವುದನ್ನು ನಾನು ಇಷ್ಟಪಡುವುದಿಲ್ಲ, ಆದರೆ ಇಂದು ನೀವು ಅದ್ಭುತ ಪ್ರಶಂಸೆಯ ಮೂಲಕ ನನ್ನನ್ನು ಗೆದ್ದಿದ್ದೀರಿ..! ಧನ್ಯವಾದಗಳು' ಎಂದು ಹೇಳಿದ್ದಾರೆ.

     ಮಾರಣಾಂತಿಕ ಕೊರೋನಾ ವೈರಸ್​ಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಭಾರತದಲ್ಲಿ ನಿನ್ನೆ ತಡರಾತ್ರಿ ಬಾಗಲಕೋಟೆಯಲ್ಲಿ 75 ವರ್ಷದ ವೃದ್ಧ ಕೊರೋನಾ ವೈರಸ್​​ನಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ 4ನೇ ಬಲಿಯಾಗಿದೆ.

  South Africa Cricket: ಭಾರತದಿಂದ ಮರಳಿದ ಆಫ್ರಿಕಾ ಕ್ರಿಕೆಟಿಗರಿಗೆ ಕೊರೋನಾ ಸೋಂಕಿಲ್ಲ

  ಇನ್ನೂ ಭಾರತದಲ್ಲಿ ಸುಮಾರು 2547 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಸಾವಿನ ಸಂಖ್ಯೆ 62 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 393ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 316, ಕೇರಳದಲ್ಲಿ 315, ದೆಹಲಿ 231, ರಾಜಸ್ಥಾನ 170, ತೆಲಂಗಾಣ 116 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 18 ಹೊಸ ಕೇಸ್​ಗಳು ವರದಿಯಾಗಿವೆ.
  First published: