ಅಕ್ರಮ ಔಷಧ ದಾಸ್ತಾನು: ಗೌತಮ್​ ಗಂಭೀರ್​ ಫೌಂಡೇಶನ್​ ತಪ್ಪೆಸಗಿದೆ ಎಂದ ಡ್ರಗ್​ ಕಂಟ್ರೋಲರ್​​

Gautam Gambhir : ಡ್ರಗ್ಸ್​ ಅಂಡ್​ ಕಾಸ್ಮೆಟಿಕ್ಸ್​ ಕಾಯ್ದೆ 1940 ಮತ್ತು ನಿಯಮಗಳನ್ನು ಫೌಂಡೇಶನ್​ ಉಲ್ಲಂಘಿಸಿದೆ. ಇದು ಸೆಕ್ಷನ್​ 27 (ಬಿ), (iii) ಮತ್ತು 27 (ಡಿ) ಅಡಿಯಲ್ಲಿ ಕಾನೂನುಬಾಹಿರ ಕೆಲಸವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ

ಗೌತಮ್ ಗಂಭೀರ್.

ಗೌತಮ್ ಗಂಭೀರ್.

 • Share this:
  ನವದೆಹಲಿ (ಜೂ. 3):  ಕೋವಿಡ್​ ಚಿಕಿತ್ಸೆಗೆ ನೀಡುವ ಔಷಧಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೌತಮ್​ ಗಂಭೀರ್​ ಫೌಂಡೇಶನ್​ ಕಾರ್ಯ ತಪ್ಪು ಮಾಡಿದೆ ಎಂದು ಡ್ರಗ್​​ ಕಂಟ್ರೋಲರ್​  ದೆಹಲಿ ಹೈ ಕೋರ್ಟ್​ ವರದಿ ನೀಡಿದೆ. ಕೋವಿಡ್​ 19 ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲಾಗುವ ಫ್ಯಾಬಿಫ್ಲೂ ಔಷಧವನ್ನು ಗೌತಮ್​ ಗಂಭೀರ್​ ಫೌಂಡೇಶನ್​ ಅಕ್ರಮವಾಗಿ ದಾಸ್ತಾನ ಮಾಡಿದರ ಕುರಿತು ಇಂದು ದೆಹಲಿ ಹೈ ಕೋರ್ಟ್​ ಮುಂದೆ ಹೊಸ ವರದಿಯನ್ನು ಮಂಡಿಸಿತು. ಈ ಫೌಂಡೇಷಶನ್​ ಮತ್ತು ಔಷಧ ಮಾರಾಟಗಾರರರ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವೇಳೆ ಡ್ರಗ್ಸ್​ ಕಂಟ್ರಲರ್​​ ಜನರಲ್​ ಆಫ್​ ಇಂಡಿಯಾ ನ್ಯಾಯಾಲಯದ ಮುಂದೆ ತಿಳಿಸಿದೆ.

  ಡ್ರಗ್ಸ್​ ಅಂಡ್​ ಕಾಸ್ಮೆಟಿಕ್ಸ್​ ಕಾಯ್ದೆ 1940 ಮತ್ತು ನಿಯಮಗಳನ್ನು ಫೌಂಡೇಶನ್​ ಉಲ್ಲಂಘಿಸಿದೆ. ಇದು ಸೆಕ್ಷನ್​ 27 (ಬಿ), (iii) ಮತ್ತು 27 (ಡಿ) ಅಡಿಯಲ್ಲಿ ಕಾನೂನುಬಾಹಿರ ಕೆಲಸವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೇ ಗೌತಮ್​ ಗಂಭೀರ್​ ಫೌಂಡೇಶನ್​ ಪರವಾನಗಿ ಪಡೆಯದೇ ಈ ರೀತಿ ಔಷಧಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವಂತಿಲ್ಲ ಎಂದು ಕೂಡ ತಿಳಿಸಲಾಗಿದೆ

  ಔಷಧ ಕೊರತೆ ಉಂಟಾಗಿರುವ ಸಂದರ್ಭದಲ್ಲಿ ಹೇಗೆ ಗೌತಮ್​ ಗಂಭೀರ್​ ಫೌಂಡೇಶನ್​ ಅಷ್ಟು ಅಕ್ರಮವಾಗಿ ಔಷಧ ಸಂಗ್ರಹಿಸಿದೆ, ಅವರಿಗೆ ಹೇಗೆ ಇವುಗಳ ಲಭ್ಯವಾಯಿತು. ಈ ಕುರಿತು ವಿಚಾರಣೆ ನಡೆಸದೇ ಹೇಗೆ ಅವರಿಗೆ ಕ್ಲೀನ್​ಚೀಟ್​ ನೀಡಲಾಗಿದೆ ಎಂದು ಡ್ರಗ್​ ಕಂಟ್ರೂಲರ್​ ಜನರಲ್ ಅವರನ್ನು  ದೆಹಲಿ ಹೈ ಕೋರ್ಟ್ ತೀವ್ರ​ ತರಾಟೆಗೆ ತೆಗೆದುಕೊಂಡಿತು. ಅಲ್ಲದೇ ಈ ಕುರಿತು ಸರಿಯಾದ ವರದಿಯನ್ನು ನೀಡುವಂತೆ ಕೂಡ ಡ್ರಗ್​ ಕಂಟ್ರೋಲರ್​ಗೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಡ್ರಗ್​ ಕಂಟ್ರೋಲರ್​ ಇಂದು ಹೊಸ ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಿತ್ತು.

  ಇಂದಿನ ನ್ಯಾಯಾಲಯದ ಕಲಾಪದ ವೇಳೆ ಡ್ರಗ್ಸ್​ ಅಂಡ್​ ಕಾಸ್ಮೆಟಿಕ್​ ಆಕ್ಟ್​ ಅಡಿ ಎಎಪಿ ಶಾಸಕ ಪ್ರವೀಣ್​ ಕುಮಾರ್​ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿದ ಪ್ರಕರಣವನ್ನು ಕೂಡ ಇದೇ ವೇಳೆ ನ್ಯಾಯಾಲಯದಲ್ಲಿ ಉಲ್ಲೇಖಿಸಲಾಯಿತು.

  ಇದನ್ನು ಓದಿ: 5G case hearing; ಕಲಾಪದ ವೇಳೆ ಜೂಹಿ ಚಾವ್ಲಾ ಸಿನಿಮಾ ಹಾಡು ಹೇಳಿ ಅಡ್ಡಿಪಡಿಸಿದ ವ್ಯಕ್ತಿ

  ಈ ಪ್ರಕರಣ ಕುರಿತು ಕಳೆದ ಎರಡು ದಿನಗಳ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಮೂರ್ತಿ ವಿಪಿನ್​ ಸಂಘಿ ಮತ್ತು ಜಸ್ಮೀತ್​ ಸಿಂಗ್​ ಅವರನ್ನೊಳಗೊಂಡ ಪೀಠ ಡ್ರಗ್​ ಕಂಟ್ರೋಲರ್​ ಈ ಹಿಂದಿನ ವರದಿಯ ವಿರುದ್ಧ ಕಿಡಿಕಾರಿತ್ತು. ಡ್ರಗ್​ ಕಂಟ್ರೋಲರ್​ಗೆ ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಅವರನ್ನು ತೆಗೆದುಹಾಕಿ ಬೇರೋಬ್ಬರನ್ನು ನೇಮಕಮಾಡಿ ಎಂದು ತಾಕೀತು ಮಾಡಿತ್ತು. ಈ ಮೂಲಕ ಡ್ರಗ್​ ಕಂಟ್ರೋಲರ್​ ಸಲ್ಲಿಸಿದ್ದ ತನಿಖಾ ಸ್ಥಿತಿಗತಿಯ ವರದಿಯನ್ನು ಸ್ವೀಕರಿಸಲು ನಿರಾಕರಿಸಿತು. ಅಲ್ಲದೇ, ಈ ಕುರಿತು ಹೊಸ ವರದಿ ಸಲ್ಲಿಸುವಂತೆ ಸೂಚಿಸಿತ್ತು.

  ಕೋವಿಡ್​19 ನಿಂದ ಬಳಲುತ್ತಿರುವವರಿಗೆ ನೆರವಾಗಲಿ ಉಚಿತ ಮೆಡಿಕಲ್​ ಕ್ಯಾಪ್​ನ್ನು ಆಯೋಜಿಸಲಾಗಿತ್ತು. ಏಪ್ರಿಲ್​ 22 ರಿಂದ ಮೇ 7ರವರೆಗೆ ನಡೆದ ಈ ಮೆಡಿಕಲ್​ ಕ್ಯಾಂಪ್​ಗಾಗಿ ಈ ಔಷಧಗಳನ್ನು ಸಂಗ್ರಹಿಸಲಾಗಿತ್ತು. ಗಾರ್ಗಗ ಆಸ್ಪತ್ರೆಯ ಡಾ. ಮನೀಶ್​ ಮೇಲ್ವಿಚಾರಣೆಯಲ್ಲಿ ಈ ಆಯೋಜನೆ ಮಾಡಲಾಗಿತ್ತು ಎಂದು ಔಷಧ ಅಕ್ರಮ ದಾಸ್ತಾನಿನ ಕುರಿತು ತಿಳಿಸಿದ್ದ ಗೌತಮ್​ ಗಂಭೀರ್​ ಪೊಲೀಸರಿಗೆ ತಿಳಿಸಿದ್ದರು.

  ವೈದ್ಯರ ಪ್ರಿಸ್ಕ್ರಿಪ್ಷನ್​ನಂತೆ ಅಧಿಕೃತವಾಗಿ 2, 628 ಫ್ಯಾಬಿಫ್ಲೂ ಸ್ಟ್ರಿಪ್ಟ್​ಅನ್ನು ಖರೀದಿಸಲಾಗಿತ್ತು. ಇದರಲ್ಲಿ 2,343 ಸ್ಟ್ರಿಪ್ಸ್​ ನ್ನು ಹಂಚಲಾಗಿತ್ತು ಎಂದು ಗಂಭೀರ್​ ತಿಳಿಸಿದ್ದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  Published by:Seema R
  First published: