ಕೊರೋನಾ ವೈರಸ್​ಗೆ ಔಷಧಿ ಕಂಡು ಹಿಡಿಯಲು ತನ್ನ ದೇಹ ಬಳಕೆಗೆ ಪ್ರಧಾನಿಗೆ ಪತ್ರ ಬರೆದ ಯುವಕ

ಕೊರೋನಾ ವೈರಸ್​ಗೆ ಔಷಧಿ ಕಂಡು ಹಿಡಿಯುವಾಗ ದೇಹದ ಅವಶ್ಯಕತೆ ಇದ್ರೆ ನನ್ನ ದೇಹವನ್ನು ಬಳಸಿಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

ವಿರೇಶ ಕುರವತ್ತಿ

ವಿರೇಶ ಕುರವತ್ತಿ

  • Share this:
ಗದಗ(ಮೇ.25): ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಲೇ ಇದೆ. ಈ ಮಹಾಮಾರಿ ಕೊರೋನಾಗೆ ಇಡೀ ಪ್ರಪಂಚದಾದ್ಯಂತ ಔಷಧಿ ಕಂಡು ಹಿಡಿಯಲು ಹಗಲಿರುಳೆನ್ನದೇ ವೈದ್ಯರು, ವಿಜ್ಞಾನಿಗಳು ಹರಸಾಹಸವನ್ನೇ ಪಡುತ್ತಿದ್ದಾರೆ. ಈ ಮಧ್ಯೆ ಕಿಲ್ಲರ್ ಕೊರೋನಾ ವೈರಸ್ ಗೆ ಔಷಧಿ ಪ್ರಯೋಗಕ್ಕೆ ತನ್ನ ದೇಹವನ್ನು ಬಳಸಿಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಯುವಕ ಪತ್ರ ಬರೆದಿದ್ದಾನೆ.

ವಿರೇಶ ಕುರವತ್ತಿ ಎನ್ನುವ ಯುವಕ ತನ್ನ ದೇಹ ದಾನಕ್ಕೆ ಮುಂದಾಗಿದ್ದಾನೆ. ಪ್ರಯೋಗಕ್ಕೆ ತನ್ನ ದೇಹವನ್ನು ಬಳಸಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾನೆ. ಪ್ರಧಾನ ಮಂತ್ರಿ ಕಚೇರಿ ಮನವಿ ಪತ್ರವನ್ನು ಕಳುಹಿಸಿದ ಯುವಕ ಕೊರೋನಾ ವೈರಸ್​ಗೆ ಔಷಧಿ ಕಂಡು ಹಿಡಿಯುವಾಗ ದೇಹದ ಅವಶ್ಯಕತೆ ಇದ್ರೆ ಬಳಸಿಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾನೆ. ಯಾವುದೇ ಕ್ಷಣದಲ್ಲಿ ತನ್ನ ದೇಹವನ್ನು ಪ್ರಯೋಗಕ್ಕೆ ಉಪಯೋಗಿಸಿಕೊಳ್ಳುವಂತೆ ಯುವಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.

latter
ಪ್ರಧಾನಿಗಳಿಗೆ ಬರೆದ ಪತ್ರ


ನಾವು ಕಣ್ಣು ದಾನ, ಕಿಡ್ನಿದಾನ ಮತ್ತು ಸತ್ತ ಮೇಲೆ ದೇಹದಾನ ಮಾಡಿದವರ ಬಗ್ಗೆ ಕೇಳಿದ್ದೇವೆ. ಆದರೆ, ಮುದ್ರಣ ಕಾಶಿ ಗದಗ ಜಿಲ್ಲೆಯ ಯುವಕ ಓರ್ವ ಕೊರೋನಾ ಔಷಧವನ್ನ ಪ್ರಯೋಗಿಸಲು ತನ್ನ ದೇಹವನ್ನೇ ಪಡೆದುಕೊಳ್ಳುವಂತೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ. ಈ ಯುವಕನ ಆತ್ಮ ಸ್ಥೈರ್ಯ ಮಾತ್ರ ದೊಡ್ಡದಾಗಿದೆ.

ಇದನ್ನೂ ಓದಿ : ಆಧಾರ್​ನಿಂದ ಬಂತು, ಮೊಬೈಲ್​ನಿಂದ ಹರಡಿತು; ಮಂಗಳೂರಿನಲ್ಲಿ ಒಂದು ಕೊರೋನಾ ಕೇಸ್ ಕತೆ

ಈಗಿನ ಯುವಕರಲ್ಲಿ ವಿರೇಶ್ ಅವರ ತೆರನಾದ ದೇಶ ಪ್ರೇಮದ ಜೊತೆಗೆ ಮಣ್ಣಿನ ಋಣ ತಿರಸಲು ಮುಂದಾಗಬೇಕಿದೆ ಎನ್ನುವುದು ಪ್ರಜ್ಞಾವಂತರ ಬಯಕೆಯಾಗಿದೆ. ಕೊರೋನಾ ವಿರುದ್ಧದ ಲಸಿಕೆ ತಯಾರಿಸುವ ಮುನ್ನ ಮನುಷ್ಯರ ಮೇಲೆ ಅದರ ಪ್ರಯೋಗ ಕಡ್ಡಾಯವಾಗಿರುತ್ತದೆ. ಈ ಹಂತದಲ್ಲಿ ಸ್ವಇಚ್ಛೆಯಿಂದ ತಮ್ಮ ದೇಹವನ್ನು ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಜನರ ಅಗತ್ಯ ಇರುತ್ತದೆ.
First published: