HOME » NEWS » Coronavirus-latest-news » FRUSTRATED BY HER PARENTS FIGHTING NINE YEAR OLD GIRL RAN AWAY FROM HER HOUSE SESR

ಉದ್ಯೋಗ ಕಸಿದುಕೊಂಡ ಕೋವಿಡ್​; ಅಪ್ಪ-ಅಮ್ಮನ ನಿತ್ಯ ಜಗಳಕ್ಕೆ ಬೇಸತ್ತು ಮನೆ ಬಿಟ್ಟುಹೋದ 9ವರ್ಷದ ಬಾಲಕಿ

ಉದ್ಯೋಗವಿಲ್ಲದೆ ದಂಪತಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ಹಿನ್ನಲೆ ದಂಪತಿಗಳಿಬ್ಬರು ಮನೆಯಲ್ಲಿ ನಿತ್ಯ ಜಗಳ ಆರಂಭಿಸಿದ್ದಾರೆ.

news18-kannada
Updated:May 13, 2021, 8:16 PM IST
ಉದ್ಯೋಗ ಕಸಿದುಕೊಂಡ ಕೋವಿಡ್​; ಅಪ್ಪ-ಅಮ್ಮನ ನಿತ್ಯ ಜಗಳಕ್ಕೆ ಬೇಸತ್ತು ಮನೆ ಬಿಟ್ಟುಹೋದ 9ವರ್ಷದ ಬಾಲಕಿ
ಪ್ರಾತಿನಿಧಿಕ ಚಿತ್ರ
  • Share this:
ಕೋವಿಡ್​ ದೇಶದ ಪ್ರತಿಯೊಬ್ಬರ ಜೀವನದ ಮೇಲೆ ಭಾರೀ ಹೊಡೆತ ನೀಡಿದೆ. ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವ ಈ ಸೋಂಕು ಅನೇಕರ ಉದ್ಯೋಗವನ್ನು ಕಸಿದುಕೊಂಡಿದೆ. ಸೋಂಕಿನ ಬಿಕ್ಕಟ್ಟಿನಿಂದ ಕೈ ತುಂಬ ಸಂಬಳ ಪಡೆಯುತ್ತಿದ್ದವರು ಇಂದು ನಿರುದ್ಯೋಗಿಗಳಾಗಿದ್ದಾರೆ. ಇದೇ ರೀತಿ ಕೆಲಸ ಔರಂಗಬಾದ್​ನ ದಂಪತಿಗಳಿಬ್ಬರು ಕೊರೋನಾದಿಂದಾಗಿ ಕಳೆದ ವರ್ಷ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದೇ  ದಂಪತಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ಹಿನ್ನಲೆ ದಂಪತಿಗಳಿಬ್ಬರು ಮನೆಯಲ್ಲಿ ನಿತ್ಯ ಜಗಳ ವಾಡುತ್ತಿದ್ದರು. ಇವರ  ಪ್ರತಿದಿನದ ಜಗಳದಿಂದ 9 ವರ್ಷದ ಮಗಳು ಬೆಸತ್ತಿದ್ದಾಳೆ. ಕಡೆಗೆ ಮನೆಯನ್ನೇ ತೊರೆಯುವ ನಿರ್ಧಾರಕ್ಕೆ ಬಂದಿದ್ದಾಳೆ.

ಕಳೆದ ನಾಲ್ಕು ದಿನಗಳ ಹಿಂದೆ ಕೂಡ ಅಪ್ಪ ಅಮ್ಮನ ಜಗಳ ಮರುಕಳಿಸಿದಾಗ ಬಟ್ಟೆ ತುಂಬಿಕೊಂಡು ಮಗಳು ಮನೆ ತೊರೆದಿದ್ದಾಳೆ. ಶನಿವಾರ ಮನೆ ತೊರೆದ ಬಾಲಕಿ ಎಲ್ಲಿ ಹೋಗಬೇಕೆಂಬುದು ತಿಳಿಯದೇ ರಸ್ತೆ ರಸ್ತೆ ಅಲೆದಿದ್ದಾಳೆ. ಜಗಳದ ಬಳಿಕ ಮಗಳು ಕಾಣೆಯಾಗಿದ್ದನ್ನು ಗಮನಿಸಿದ ಪೋಷಕರು ತಕ್ಷಣಕ್ಕೆ ಪೊಲೀಸರು ಮೊರೆ ಹೋಗಿದ್ದಾರೆ.

Youtube Video

ಇದಾದ ಎರಡು ದಿನದ ಬಳಿಕ ಅಪ್ರಾಪ್ತ ಬಾಲಕಿಯೊಬ್ಬಳ ನಗರದ ಕಲಂಬ್​ನ ಫ್ಲೈ ಓವರ್​ ಬಳಿ ಇರುವುದು ಪತ್ತೆಯಾಗಿದೆ, ತಕ್ಷಣಕ್ಕೆ ಆಕೆಯನ್ನು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಲಾಗಿದೆ. ಘಟನೆ ಕುರಿತು ಮಾತನಾಡಿರುವ ಎಸ್​ಪಿ ರಾಜ್​ ತಿಲಕ್​ ರೋಷನ್​, ಅಪ್ಪ ಅಮ್ಮನ ಜಗಳದಿಂದ ರೋಸಿ ಹೋಗಿ ಬಾಕಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಕೋವಿಡ್​ನ ನಿರ್ಬಂಧತೆ, ಶಾಲೆ ಇಲ್ಲದಿರುವುದು, ಒತ್ತಡದಿಂದಾಗಿ ಬಾಲಕಿ ಈ ರೀತಿ ನಿರ್ಧಾರಕ್ಕೆ ಬಂದಿದ್ದಾರೆ. ಕೋವಿಡ್​ ಯಾವ ರೀತಿ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್​ ದೊಡ್ಡವರಲ್ಲಿ ಮಾತ್ರವಲ್ಲದೇ ಮಕ್ಕಳ ಮಾನಸಿಕತೆ ಮೇಲೂ ಪರಿಣಾಮ ಬೀರುತ್ತಿದೆ. ಶಾಲೆಗಳಿಲ್ಲದೇ ಮಕ್ಕಳು ಸಾಮಾಜಿಕ ಜೀವನದಿಂದ ದೂರಾಗಿದ್ದಾರೆ. ಮಕ್ಕಳೊಂದಿಗೆ ಏಕಾಂಗಿಯಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವುದು. ಹೊರಗಿನ ಬದುಕಿನಿಂದ ಅಂತರ ಕಾಯ್ದುಕೊಳ್ಳುತ್ತಿರುವುದರಿಂದ ಅವರು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
Published by: Seema R
First published: May 13, 2021, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories