ಮಧ್ಯಪ್ರದೇಶ (ಮೇ 10); ಲಾಕ್ಡೌನ್ನಿಂದಾಗಿ ರೈಲು ಸಂಚಾರ ಇಲ್ಲ ಎಂದು ಭಾವಿಸಿದ್ದ 16 ಜನ ವಲಸೆ ಕಾರ್ಮಿಕರು ರೈಲಿಗೆ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೆ 5 ಜನ ವಲಸೆ ಕಾರ್ಮಿಕರು ಮೃತಪಟ್ಟಿರುವ ಮಧ್ಯಪ್ರೇಶದಲ್ಲಿ ನಡೆದಿದೆ.
ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಳ್ಳಿಯೊಂದರಲ್ಲಿ ಪ್ರಯಾಣಿಸುತ್ತಿದ್ದ ಹಣ್ಣಿನ ಟ್ರಕ್ ಪಲ್ಟಿಯಾಗಿ ಐದು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ.
20 ಜನರ ವಲಸೆ ಕಾರ್ಮಿಕರ ಗುಂಪು ಹೈದರಾಬಾದ್ನಿಂದ ಮಾವಿನಹಣ್ಣು ಸಾಗಿಸುವ ಟ್ರಕ್ ಒಂದರಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಆದರೆ, ಟ್ರಕ್ ನರಸಿಂಗ್ಪುರದ ಗ್ರಾಮವೊಂದರಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ 5 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆನ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂಕ್ರಾಮಿಕ ರೋಗದ ಕಾರಣಕ್ಕೆ ಯಾವುದೇ ತಯಾರಿ ಇಲ್ಲದೆ ಗಂಟೆಗಳ ಅಂತರದಲ್ಲಿ ಲಾಕ್ಡೌನ್ ಘೋಷಿಸಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ ಪರಿಣಾಮ ದೇಶದಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ಸಿಕ್ಕಿಬಿದ್ದಾರೆ. ಹಣ, ಆಹಾರ, ಆಶ್ರಯವಿಲ್ಲದೆ ಲಕ್ಷಾಂತರ ಮಂದಿ ಕಾಲ್ನಡಿಗೆಯಲ್ಲೇ ಮನೆಗೆ ಹೊರಟ ಪರಿಣಾಮ ದಾರಿಯಲ್ಲಿ ಸಾವಿಗೀಡಾದವರ ಸಂಖ್ಯೆ ಹೆಚ್ಚುತ್ತಿದೆ.
ವಿಶೇಷ ರೈಲುಗಳು ಮತ್ತು ಬಸ್ಸುಗಳಲ್ಲಿ ಕಾರ್ಮಿಕರನ್ನು ಮನೆಗೆ ತಲುಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದ ಹೊರತಾಗಿಯೂ, ಅನೇಕರು ಇನ್ನೂ ಮಹಾ ನಡಿಗೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಕರುನಾಡಿಗೆ ಕಾದಿದೆಯಾ ಮಹಾಕಂಟಕ; ರ್ಯಾಪಿಡ್ ಟೆಸ್ಟ್ ಶುರುವಾದ್ರೆ ಹೆಚ್ಚಾಗಲಿದೆಯಾ ಪಾಸಿಟಿವ್ ಪ್ರಕರಣ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ