HOME » NEWS » Coronavirus-latest-news » FROM TOMORROW PRIVATE CLINIC WILL OPENED SAYS MINISTER S SURESH KUMAR RH

ನಾಳೆಯಿಂದ ಖಾಸಗಿ ಕ್ಲಿನಿಕ್​ ತೆರೆಯಲು ಅನುಮತಿ, 7.5 ಲಕ್ಷ ಕುಟುಂಬಗಳಿಗೆ ಅರ್ಧ ಲೀ. ಹಾಲು; ಸುರೇಶ್ ಕುಮಾರ್

ಕಿಸಾನ್​ ಸಮ್ಮಾನ್ ಯೋಜನೆಯಡಿ ರಾಜ್ಯದ ಎಲ್ಲಾ ರೈತರ ಖಾತೆಗೆ ಏಪ್ರಿಲ್ 10ರೊಳಗೆ ತಲಾ 2000ರೂ ಜಮಾ ಮಾಡಲಾಗುವುದು. ಉಜ್ವಲ ಯೋಜನೆಯಡಿಯಲ್ಲಿ 15 ಲಕ್ಷ ಜನರ ಖಾತೆಗೆ ಗ್ಯಾಸ್ ಸಿಲಿಂಡರ್ ವೆಚ್ಚವನ್ನು ಜಮಾ ಮಾಡಲಾಗುವುದು ಎಂದು ತಿಳಿಸಿದರು.

news18-kannada
Updated:April 4, 2020, 7:00 PM IST
ನಾಳೆಯಿಂದ ಖಾಸಗಿ ಕ್ಲಿನಿಕ್​ ತೆರೆಯಲು ಅನುಮತಿ, 7.5 ಲಕ್ಷ ಕುಟುಂಬಗಳಿಗೆ ಅರ್ಧ ಲೀ. ಹಾಲು; ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್.
  • Share this:
ಬೆಂಗಳೂರು: ನಾಳೆಯಿಂದ ಸ್ಲಮ್​ಗಳಲ್ಲಿ ವಾಸವಾಗಿರುವ 7.5 ಲಕ್ಷ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಮುಂದಿನ ಎರಡು ತಿಂಗಳ ಪಿಂಚಣಿಯನ್ನು ಏಪ್ರಿಲ್ 10 ರೊಳಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸೋಂಕಿಯರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. 4 ಜನ ಮೃತಪಟ್ಟಿದ್ದಾರೆ. 11 ಜನ ಚೇತರಿಸಿಕೊಂಡು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 16 ಹೊಸ ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆ 75 ವರ್ಷದ ಮೃತ ವೃದ್ಧ ರೋಗಲಕ್ಷಣ ಕಂಡ ಕೂಡಲೇ ಮೊದಲು ಹೋಗಿದ್ದು ಆಯುರ್ವೇದ ಆಸ್ಪತ್ರೆಗೆ. ನಂತರ ಸುಮಾರು ನಾಲ್ಕು ದಿನಗಳವರೆಗೆ ಅವರು ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಿದ್ದಾರೆ. ಮೊದಲೇ ಅವರಿಗೆ ಕಾರ್ಡಿಯಾಕ್ ಸ್ಟಂಟ್ ಹಾಕಲಾಗಿತ್ತು. ಹೈ ಡಯಾಬಿಟಿಸ್, ಹೈಪರ್ ಟೆನ್ಶನ್ ಇತ್ತು. ಆಸ್ಪತ್ರೆಗೆ ಬರುವಾಗ ಆಗಲೇ ಒಂದು ಕಿಡ್ನಿ ಕೂಡ ಹಾನಿಯಾಗಿತ್ತು. ಈ ಎಲ್ಲ ಸಮಸ್ಯೆಗಳು ಇದ್ದುದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ನಾಳೆಯಿಂದ ರಾಜ್ಯದ ಎಲ್ಲಾ ಖಾಸಗಿ ಕ್ಲಿನಿಕ್​ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಕೊರೋನಾ ಮಾತ್ರವಲ್ಲದೇ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಖಾಸಗಿ ಕ್ಲಿನಿಕ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.  ಕರ್ನಾಟಕದಲ್ಲಿ 18.33 ಲಕ್ಷ ಎನ್​ 95  ಮಾಸ್ಕ್​ಗಳನ್ನು ಕೊಳ್ಳಲು ಕಾರ್ಯಾದೇಶ ಹೊರಡಿಸಲಾಗಿದೆ. 4.13 ಲಕ್ಷ ಮಾಸ್ಕ್ ಗಳನ್ನು ಈಗಾಗಲೇ ಪಡೆಯಲಾಗಿದೆ. ಕಿಸಾನ್​ ಸಮ್ಮಾನ್ ಯೋಜನೆಯಡಿ ರಾಜ್ಯದ ಎಲ್ಲಾ ರೈತರ ಖಾತೆಗೆ ಏಪ್ರಿಲ್ 10ರೊಳಗೆ ತಲಾ 2000ರೂ ಜಮಾ ಮಾಡಲಾಗುವುದು. ಉಜ್ವಲ ಯೋಜನೆಯಡಿಯಲ್ಲಿ 15 ಲಕ್ಷ ಜನರ ಖಾತೆಗೆ ಗ್ಯಾಸ್ ಸಿಲಿಂಡರ್ ವೆಚ್ಚವನ್ನು ಜಮಾ ಮಾಡಲಾಗುವುದು ಎಂದು ತಿಳಿಸಿದರು.

ಏಪ್ರಿಲ್ 14ರ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಲಾಕ್ ಡೌನ್ ಅನ್ನು ಹಂತಹಂತವಾಗಿ ತೆಗೆದುಹಾಕಲು ನಿರ್ಧಾರ ಮಾಡಲಾಗಿದೆ. ಇದುವರೆಗೆ ಯಾವುದೇ ಕ್ವಾರಂಟೈನ್ ವ್ಯಕ್ತಿಯನ್ನು ಹೋಟೆಲ್​ಗಳಿಗೆ ಶಿಫ್ಟ್ ಮಾಡಿಲ್ಲ. ಅನೇಕ ಜನ ಮನೆಗಳಿಂದ ಸೆಲ್ಫಿ ಕಳಿಸುತ್ತಿಲ್ಲ. ಆದರೆ ಅವರ ಬಗ್ಗೆ ಆರೋಗ್ಯ ಇಲಾಖೆಯ ತಂಡವೇ ನಿಗಾ ವಹಿಸುತ್ತಿದೆ.  ಹಾಗಾಗಿ ಅವರನ್ನು ಹೋಟೆಲುಗಳಿಗೆ ಶಿಫ್ಟ್ ಮಾಡುವ ಪ್ರಮೇಯವೇ ಬಂದಿಲ್ಲ ಎಂದರು.

ಇಂದಿನವರೆಗೆ ಕೋವಿದ್ 19 ವಿರುದ್ಧ ಹೋರಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ  106 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಇಂದು ಒಂದೇ ದಿನ 19,04,76,000 ರೂ ಹಣ ಸಂದಾಯವಾಗಿದೆ. ಕೆಪಿಟಿಸಿಎಲ್ ನೌಕರರು ಎರಡು ದಿನದ ಸಂಬಳ 18 ಕೋಟಿ ರೂ. ನೀಡಿದ್ದಾರೆ. ಇದುವರಗೆ ರಾಜ್ಯದಾದ್ಯಂತ ಸುಮಾರು 100 ವೈದ್ಯರು ಸ್ವಯಂ ಆಸಕ್ತಿಯಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ: ಕೊರೋನಾ ನಿಯಂತ್ರಣ ಸಂಬಂಧ ಬೆಂಗಳೂರು ಜನಪ್ರತಿನಿಧಿಗಳೊಂದಿಗೆ ಸಿಎಂ ನಡೆಸಿದ ಸಭೆಯ ಪ್ರಮುಖಾಂಶಗಳುಇದುವರೆಗೆ ತಬ್ಲಿಘಿ ಜಮಾತ್​ನಲ್ಲಿ ಭಾಗವಹಿಸಿದವರಲ್ಲಿ ರಾಜ್ಯದ 16 ಮಂದಿ ಸೋಂಕಿತರಾಗಿದ್ದಾರೆ. ಯಾವ ವಿದೇಶಿಯರಿಗೂ ಸೋಂಕು ತಗುಲಿಲ್ಲ. ತಬ್ಲಿಘಿ ಜಮಾತ್​ಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 308 ಜನರನ್ನು ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು.
First published: April 4, 2020, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories