ನಾಳೆಯಿಂದ 1 ಸಾವಿರ ಬಿಎಂಟಿಸಿ ಬಸ್ ಸಂಚಾರ; ನಿತ್ಯಬಳಕೆ ವಸ್ತು, ತುರ್ತು ಆರೋಗ್ಯ ಸೇವೆಗೆ ಬಳಕೆ

ಸಾರ್ವಜನಿಕರು ಅನಗತ್ಯ ವಾಗಿ ಬಸ್ ಗಳನ್ನು ಬಳಸುವಂತಿಲ್ಲ. ಪೊಲೀಸ್ ಇಲಾಖೆಯಿಂದ ಪಾಸ್ ನೀಡಲಾಗಿರುವವರಿಗೆ ಮಾತ್ರ ಬಸ್ ಗಳಲ್ಲಿ ಸಂಚರಿಸಲು ಅವಕಾಶ ಅವಕಾಶ ನೀಡಲಾಗಿದೆ.

ಬಿಎಂಟಿಸಿ ಬಸ್

ಬಿಎಂಟಿಸಿ ಬಸ್

  • Share this:
    ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಹೀಗಾಗಿ ರೈಲು, ಬಸ್ಸು ಸಂಚಾರ ಸೇರಿ ಎಲ್ಲ ವಾಹನಗಳ ಓಡಾಟವನ್ನು ರದ್ದು ಮಾಡಲಾಗಿದೆ. ಆದರೆ, ನಿತ್ಯ ಬಳಕೆಯ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

    ನಾಳೆಯಿಂದ ಬೆಂಗಳೂರಿನಾದ್ಯಂತ 1 ಸಾವಿರ ಬಸ್​ಗಳ‌ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಬಳಕೆ ವಸ್ತುಗಳ ಪೂರೈಕೆ ಮತ್ತು ತುರ್ತು ಆರೋಗ್ಯ ಸೇವೆಗಳಿಗೆ ಮಾತ್ರ ಬಸ್ ಬಳಕೆ ಸೀಮಿತಗೊಳಿಸಲಾಗಿದೆ. ಸಾರ್ವಜನಿಕರು ಅನಗತ್ಯ ವಾಗಿ ಬಸ್ ಗಳನ್ನು ಬಳಸುವಂತಿಲ್ಲ. ಪೊಲೀಸ್ ಇಲಾಖೆಯಿಂದ ಪಾಸ್ ನೀಡಲಾಗಿರುವವರಿಗೆ ಮಾತ್ರ ಬಸ್ ಗಳಲ್ಲಿ ಸಂಚರಿಸಲು ಅವಕಾಶ ಅವಕಾಶ ನೀಡಲಾಗಿದೆ.

    ಇದನ್ನು ಓದಿ: ಕೊರೋನಾ ಎಫೆಕ್ಟ್​​​: ದೇಶಾದ್ಯಂತ ಏ.14ರವರೆಗೂ ರೈಲು ಸಂಚಾರ ಸ್ತಬ್ಧ; ರೈಲ್ವೆ ಇಲಾಖೆ ಅಧಿಕೃತ ಆದೇಶ
    First published: