ರಾಜ್ಯದಲ್ಲಿ ಕೊರೋನಾ ಭೀತಿ: ಇಂದಿನಿಂದ ಬಹುತೇಕ ಎಲ್ಲವೂ ಸ್ತಬ್ಧ; ಏನಿರತ್ತೆ? ಏನಿರಲ್ಲ?

ನಿನ್ನೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಬಿ.ಎಸ್. ಯಡಿಯೂರಪ್ಪ ಮುಂದಿನ ಒಂದು ವಾರಗಳ ಕಾಲ ಅಕ್ಷರಶಃ ಇಡೀ ರಾಜ್ಯದ ಬಹುತೇಕ ಸಾರ್ವಜನಿಕ ವಲಯವನ್ನು ಬಂದ್ ಮಾಡುವ ಮಹತ್ವದ ಆದೇಶ ಹೊರಡಿಸಿದ್ದಾರೆ.

news18-kannada
Updated:March 14, 2020, 7:25 AM IST
ರಾಜ್ಯದಲ್ಲಿ ಕೊರೋನಾ ಭೀತಿ: ಇಂದಿನಿಂದ ಬಹುತೇಕ ಎಲ್ಲವೂ ಸ್ತಬ್ಧ; ಏನಿರತ್ತೆ? ಏನಿರಲ್ಲ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾರ್ಚ್ 13); ಮಾರಣಾಂತಿಕ ಕೊರೋನಾ ವೈರಸ್​ಗೆ ರಾಜ್ಯದಲ್ಲಿ ಮೊದಲ ಬಲಿಯಾಗುತ್ತಿದ್ದಂತೆ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಹತ್ತಾರು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಅಕ್ಷರಶಃ ಕರ್ನಾಟಕವನ್ನೇ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ.

ನಿನ್ನೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಬಿ.ಎಸ್. ಯಡಿಯೂರಪ್ಪ ಮುಂದಿನ ಒಂದು ವಾರಗಳ ಕಾಲ ಅಕ್ಷರಶಃ ಇಡೀ ರಾಜ್ಯದ ಬಹುತೇಕ ಸಾರ್ವಜನಿಕ ವಲಯವನ್ನು ಬಂದ್ ಮಾಡುವ ಮಹತ್ವದ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, ಒಂದು ವಾರದ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ. ಹಾಗಾದರೆ ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ.

ಒಂದು ವಾರ ರಾಜ್ಯದಲ್ಲಿ ಏನೇನು ಇರುವುದಿಲ್ಲ? ಏನೇನು ಮಾಡುವಂತಿಲ್ಲ?

1) ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಒಂದು ವಾರಗಳ ಕಾಲ ಬಂದ್

2) ವಿದ್ಯಾರ್ಥಿಗಳು ಒಟ್ಟಿ ಸೇರುವಂತಿಲ್ಲ, ಯಾರೂ ಒಂದೆಡೆ ಗುಂಪುಗೂಡುವಂತಿಲ್ಲ.

3) ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.4) ನಾಳೆಯಿಂದ ಒಂದು ವಾರ ಕಾಲ ಮಾಲ್ , ಸಿನಿಮಾ ಥಿಯೇಟರ್, ಪಬ್ ಅಂಡ್ ನೈಟ್ ಕ್ಲಬ್​, ಜಿಮ್​ ಬಂದ್​.

5) ಉಪನ್ಯಾಸ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮ, ಮದುವೆ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮಗಳನ್ನು ಒಂದು ವಾರ ನಡೆಸುವಂತಿಲ್ಲ.

6) ದೇವರ ಜಾತ್ರೆ, ಮನೆ ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭಕಾರ್ಯಗಳಿಗೂ ನಿಷೇಧ.

6) ಐಟಿಬಿಟಿ ಕಂಪೆನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ.

7) ಅಂತಾರಾಷ್ಟ್ರೀಯ ವೀಸಾಗಳಿಗೆ ಏಪ್ರಿಲ್.15ರ ವರೆಗೆ ನಿರ್ಬಂಧ.

8) ಯಾರೂ ಗುಂಪು ಸೇರಬಾರದು, ಯಾರ ಜೊತೆಯೂ ಕೈ ಕುಲುಕಬಾರದು.

9) ಎಲ್ಲಾ ರೀತಿಯ ಸಾರ್ವಜನಿಕ ಸಭೆ ಮತ್ತು ಸಮಾರಂಭಗಳಿಗೆ ನಿಷೇಧ.

10) ಸರ್ಕಾರದ ಎಲ್ಲಾ ಕಾರ್ಯಕ್ರಮಗಳೂ ಒಂದು ವಾರಗಳ ಕಾಲ ಬಂದ್.

ಏನೇನಿರುತ್ತೆ? ಏನೇನು ಮಾಡಬಹುದು?

1) ಖಾಸಗಿ ಮತ್ತು ಸರ್ಕಾರ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

2) ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ.

3) ಬಹುಮುಖ್ಯ ಪರೀಕ್ಷೆಗಳನ್ನು ಮಾತ್ರ ಯಥಾಸ್ಥಿತಿಯಂತೆ ನಡೆಸಲಾಗುತ್ತದೆ.

4)ಕಡಿಮೆ ಸಂಖ್ಯೆಯ ಜನರನ್ನು ಆಹ್ವಾನಿಸಿ ಸರಳ ಮದುವೆಗಳಿಗೆ ಮಾತ್ರ ಅವಕಾಶ.

 
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading