ವೈದ್ಯಲೋಕಕ್ಕೇ ಸವಾಲಾದ ಕೊರೊನಾ ವೈರಸ್​​ಗೆ ಔಷಧಿ ಕಂಡುಹಿಡಿದ ಹಿಂದೂ ಮಹಾಸಭಾ ಅಧ್ಯಕ್ಷ

'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಿ ಸೋಂಕು ತಗುಲಿರುವ ವ್ಯಕ್ತಿಯ ದೇಹದ ಮೇಲೆ ಗೋವಿನ ಸಗಣಿ ಹಚ್ಚಿದರೆ ಆತನನ್ನು ಕಾಪಾಡಬಹುದಾಗಿದೆ. ಈ ಮಾರಾಣಾಂತಿಕ ಕೊರೊನಾ ವೈರಸ್​​ನ್ನು ನಾಶ ಮಾಡಲು ಶೀಘ್ರದಲ್ಲೇ ವಿಶೇಷ ಯಜ್ಞವನ್ನು ನಡೆಸಲಾಗುತ್ತದೆ ಎಂದರು.

ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​

ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​

 • Share this:
  ನವದೆಹಲಿ(ಫೆ.02): ಮಾರಣಾಂತಿಕ ಕೊರೋನಾ ವೈರಸ್​​ಗೆ ಚೀನಾದಲ್ಲಿ ಈವರೆಗೆ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಡೀ ವಿಶ್ವಾದ್ಯಂತ ಹರಡುತ್ತಿರುವ ಕೊರಾನಾ ವೈರಸ್​​ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಇಂತಹ ಮಾರಣಾಂತಿಕ ರೋಗಕ್ಕೆ ಔಷಧಿ ಕಂಡು ಹಿಡಿಯಲು ವಿಶ್ವದ ಪರಿಣಿತ ವೈದ್ಯರು ಹರಸಾಹಸ ಪಡುತ್ತಿದ್ದಾರೆ. ವೈದ್ಯಲೋಕಕ್ಕೆ ಸವಾಲೆನಿಸಿರುವ ಈ ಕೊರೊನಾ ವೈರಸ್​​​ಗೆ ಹಿಂದೂ ಮಹಾಸಭಾದ ಅಧ್ಯಕ್ಷರು  ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. 

  ಭಾರತದಲ್ಲಿ ದೇವರೆಂದು ಪೂಜಿಸಲ್ಪಡುವ ಗೋಮಾತೆಯ ಮೂತ್ರ ಮತ್ತು ಸಗಣಿ ಕೊರೊನಾ ವೈರಸ್​​ನಿಂದ ಬಳಲುತ್ತಿರುವವರಿಗೆ ಸೂಕ್ತ ಔಷಧಿಯಾಗಿದೆ ಎಂದು ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೊರೊನಾ ವೈರಸ್​​ನ್ನು ಕೊಲ್ಲಲು ವಿಶೇಷ ಯಜ್ಞವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

  ಹಸುವಿನ ಮೂತ್ರ ಮತ್ತು ಸಗಣಿಯನ್ನು ಸೇವಿಸಿದರೆ ಕೊರೊನಾ ಸೋಂಕಿನಿಂದ ಉಂಟಾಗುವ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ. 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಿ ಸೋಂಕು ತಗುಲಿರುವ ವ್ಯಕ್ತಿಯ ದೇಹದ ಮೇಲೆ ಗೋವಿನ ಸಗಣಿ ಹಚ್ಚಿದರೆ ಆತನನ್ನು ಕಾಪಾಡಬಹುದಾಗಿದೆ. ಈ ಮಾರಾಣಾಂತಿಕ ಕೊರೊನಾ ವೈರಸ್​​ನ್ನು ನಾಶ ಮಾಡಲು ಶೀಘ್ರದಲ್ಲೇ ವಿಶೇಷ ಯಜ್ಞವನ್ನು ನಡೆಸಲಾಗುತ್ತದೆ ಎಂದರು.

  Video: ಸಾಯುವುದಾದರೆ ಚೀನಾದಲ್ಲೇ ಸಾಯಿರಿ; ಕೊರೋನಾ ಭೀತಿಯಲ್ಲಿರುವ ಪಾಕ್​ ವಿದ್ಯಾರ್ಥಿಗಳಿಗೆ ಸರ್ಕಾರದ ಸಂದೇಶ!

  ಕೊರೊನಾ ವೈರಸ್​​ ಗುಣಪಡಿಸಲು ಮಹಾರಾಜ್​ ನೀಡಿರುವ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್​ ಆಗುತ್ತಿದೆ. ಹಿಂದೂ ಮಹಾಸಭಾದ ಅಧ್ಯಕ್ಷ ಈಗ ನೆಟ್ಟಿಗರ ಆಹಾರವಾಗಿದ್ದಾರೆ. ಗೋ ಮೂತ್ರದಿಂದ ಕೊರೊನಾ ವೈರಸ್​​ ಹೇಗೆ ವಾಸಿಯಾಗುತ್ತದೆ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.

  ಚೀನಾದಲ್ಲಿ ಈವರೆಗೆ 304 ಮಂದಿ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ. ಸುಮಾರು 9,692 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹುಬೈ ಪ್ರಾಂತ್ಯ ಒಂದರಲ್ಲೇ 5,806 ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ವೈರಸ್​​ ಭೀತಿ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.

  ಭಾರತ, ಬ್ರಿಟನ್​, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್​ ಮತ್ತು ಫ್ರಾನ್ಸ್​​ ಸೇರಿದಂತೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್​​​ ಪ್ರಕರಣಗಳು ಪತ್ತೆಯಾಗಿರುವುದು ದೃಢಪಟ್ಟಿದೆ. ನಿನ್ನೆ ಚೀನಾದಿಂದ 324 ಭಾರತೀಯರನ್ನು ಏರ್​ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಮತ್ತಷ್ಟು ಭಾರತೀಯರನ್ನು ವುಹಾನ್​ನಿಂದ ದೆಹಲಿಗೆ ಕರೆತರಲಾಗುತ್ತದೆ.

  ಕೊರೊನಾ ವೈರಸ್​​ ಭೀತಿ: ವಿಮಾನದ ಮೂಲಕ ಚೀನಾದಿಂದ 324 ಭಾರತೀಯರ ಸ್ಥಳಾಂತರ
  First published: