ಏಪ್ರಿಲ್​​ 30ರವರೆಗೂ ಬಡವರಿಗೆ ಉಚಿತ ಹಾಲು ವಿತರಣೆ - ರಾಜ್ಯ ಸರ್ಕಾರ

ಕೆಎಂಎಫ್​ನ ಹೆಚ್ಚುವರಿ ಹಾಲನ್ನು ಖರೀದಿಸಿ ಬಡವರಿಗೆ ವಿಸ್ತರಿಸುವ ಯೋಜನೆ ಇದಾಗಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಸಚಿವರ ತಂಡ ರಾಜ್ಯದ ಹಲವೆಡೆ ಮನೆ ಮನೆಗೂ ತೆರಳಿ ಹಾಲು ವಿತರಿಸುವ ಮೂಲಕ ಈ ಯೋಜನೆ ಮುಂದುವರಿಸಲಾಗುತ್ತಿದೆ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

 • Share this:
  ಬೆಂಗಳೂರು(ಏ.21): ಕೊರೋನಾ ಲಾಕ್​​ಡೌನ್​​ನಿಂದಾಗಿ ಸಂಕಷ್ಟದಲ್ಲಿರುವ ಬಡವರಿಗೆ ಉಚಿತ ಹಾಲು ವಿತರಿಸುವ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಸ್ತರಿಸಿ ಆದೇಶಿಸಿದ್ಧಾರೆ. ಕೊಳಗೇರಿ, ನಿರಾಶ್ರಿತರ ಶಿಬಿರ ಮುಂತಾದೆಡೆ ಉಚಿತ ಹಾಲು ನೀಡುವಿಕೆ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್​​​ 30ರವರೆಗೂ ಬಡವರಿಗೆ ಉಚಿತ ಹಾಲು ವಿತರಣೆ ಮಾಡಲಾಗುವುದು ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.

  ಬಡವರಿಗೆ ಪೌಷ್ಟಿಕಾಂಶ ಆಹಾರದ ಅವಶ್ಯಕತೆ ಇದೆ. ಅಲ್ಲದೇ ವಿವಿಧ ಹಾಲು ಒಕ್ಕೂಟಗಳಿಂದ ಪ್ರತಿದಿನ 7.75 ಲಕ್ಷ ಲೀಟರ್ ಹಾಲು ದಂಡವಾಗುತ್ತಿದೆ. ಹಾಗಾಗಿ ಇದನ್ನೇ ಸದುಪಯೋಗ ಮಾಡಿಕೊಳ್ಳಲು ಈ ಆದೇಶ ಹೊರಡಿಸಲಾಗಿದೆ. ಹಾಗಾಗಿಯೇ ಉಚಿತ ಹಾಲು ಯೋಜನೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶದ ಸುತ್ತೋಲೆ ಹೊರಡಿಸಿದೆ.

  ಕೆಎಂಎಫ್​ನ ಹೆಚ್ಚುವರಿ ಹಾಲನ್ನು ಖರೀದಿಸಿ ಬಡವರಿಗೆ ವಿಸ್ತರಿಸುವ ಯೋಜನೆ ಇದಾಗಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಸಚಿವರ ತಂಡ ರಾಜ್ಯದ ಹಲವೆಡೆ ಮನೆ ಮನೆಗೂ ತೆರಳಿ ಹಾಲು ವಿತರಿಸುವ ಮೂಲಕ ಈ ಯೋಜನೆ ಮುಂದುವರಿಸಲಾಗುತ್ತಿದೆ.

  ಇದನ್ನೂ ಓದಿ: ‘ಪಾದರಾಯನಪುರ ಲೇಡಿ ಡಾನ್​​ ಫರ್ಜುವಾ ಹೆಂಗಸು, ನಮ್ಮ ಸಮುದಾಯವಲ್ಲ‘: ಸತ್ಯ ಬಯಲು ಮಾಡೋಕೆ ನಾವು ರೆಡಿ ಎಂದ ಮಂಗಳಮುಖಿಯರು

  ಕೊರೋನಾ ಸೋಂಕು ನಿರ್ಮೂಲನೆಗಾಗಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ರೈತರಿಂದ ಅಬಾಧಿತವಾಗಿ ಹಾಲು ಖರೀದಿಸಲು ಕೆಎಂಎಫ್ ಗೆ ಸೂಚಿಸಲಾಗಿತ್ತು‌. ಹಾಗೆ ರೈತರಿಂದ ಖರೀದಿಸಲಾಗುತ್ತಿರುವ ಹಾಲಿನ ಪೈಕಿ ಸುಮಾರು 7.5 ಲಕ್ಷ ಲೀಟರ್ ಹಾಲನ್ನು ಬಡವರಿಗೆ ಉಚಿತವಾಗಿ ಹಂಚಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು. ಅದರಂತೆ ಬಡವರಿಗೆ ಉಚಿತವಾಗಿ ಹಾಲು ವಿತರಿಸುತ್ತಿದ್ದೇವೆ ಎಂದು ಈ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.
  First published: