ಹಸಿವಿನಿಂದ ಕಂಗೆಟ್ಟವರಿಗೆ ಇನ್ನೂ ದೊರಕದ ಸರ್ಕಾರದ ನೆರವು - ನಿರ್ಗತಿಕರಿಗೆ ಹಸಿವು ನೀಗಿಸಿ ಮಾನವೀಯತೆ ಮೆರೆಯುತ್ತಿರುವ ವ್ಯಕ್ತಿ

ಶ್ರೀಧರ್ ಪಟ್ಟಣದ ರಸ್ತೆಯಲ್ಲಿ ಓಡಾಡುವ ಭಿಕ್ಷುಕರಿಗೆ, ನಿರ್ಗತಿಗರಿಗೆ ತನ್ನ ಕೈಯಿಂದ ಹಣ ಖರ್ಚು ಮಾಡಿ ಬಡಜೀವಕ್ಕೆ ಹಸಿವು ನಿಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ನಿರ್ಗತಿಕರಿಗೆ ಹಸಿವು ನೀಗಿಸುವ ಶ್ರೀಧರ್

ನಿರ್ಗತಿಕರಿಗೆ ಹಸಿವು ನೀಗಿಸುವ ಶ್ರೀಧರ್

 • Share this:
  ಕಾರವಾರ(ಏ.01) : ಕೊರೋನಾ ವೈರಸ್ ನಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿ‌ ಒಂದು ವಾರ ಕಳೆದರೂ, ಅದೆಷ್ಟೋ ಜನ ರಸ್ತೆ, ಬೀದಿಯಲ್ಲಿ ಹಸಿವಿನಿಂದ ಬಳಲುತ್ತಿದ್ದಾರೆ. ಸರಕಾರ ಇವರ ನೆರವಿಗೆ ಮುಂದಾಗಲು ಚಿಂತನೆ ನಡೆಸಿದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವ್ಯಕ್ತಿ ಹಸಿದ ಬಡವರಿಗೆ, ಭಿಕ್ಷುಕರಿಗೆ ಕಳೆದ ಒಂದು ವಾರದಿಂದ ಉಚಿತವಾಗಿ ಊಟ, ತಿಂಡಿ ನೀಡುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.

  ಉತ್ತರಕನ್ನಡ ಜಿಲ್ಲೆಯ ಕುಮಟ ಪಟ್ಟಣದ ಶ್ರೀಧರ್ ಕುಮಟಾಕರ ಎಂಬ ವ್ಯಕ್ತಿ ಹಸಿದ ಬಡವರಿಗೆ ಕಳೆದ ಒಂದು ವಾರದಿಂದ ತನ್ನ ಮನೆಯಲ್ಲೇ ಅಡುಗೆ ತಯಾರಿಸಿಕೊಂಡು ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಪಟ್ಟಣದಲ್ಲಿ ಅಲೆದಾಡುತ್ತಿರುವ ಸರಿ ಸುಮಾರು 15ರಿಂದ 20 ಭಿಕ್ಷುಕರಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದಾರೆ.  ಭಾರತ ಲಾಕ್ ಡೌನ್ ಆಗಿರುವ ಕಾರಣಕ್ಕೆ ಎಲ್ಲಾ ಕಡೆಯಲ್ಲಿಯೂ ಜನರಿಗೆ ಬೇಕಾಗಿರುವ ದಿನ ನಿತ್ಯದ ಮೂಲ ವಸ್ತುಗಳು ಸಿಗುವುದು ಕಷ್ಟವಾಗಿದೆ. ಇವೇಲ್ಲದರ ನಡುವೆ ಶ್ರೀಧರ್ ಪಟ್ಟಣದ ರಸ್ತೆಯಲ್ಲಿ ಓಡಾಡುವ ಭಿಕ್ಷುಕರಿಗೆ, ನಿರ್ಗತಿಗರಿಗೆ ತನ್ನ ಕೈಯಿಂದ ಹಣ ಖರ್ಚು ಮಾಡಿ ಬಡಜೀವಕ್ಕೆ ಹಸಿವು ನಿಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ ಕೆಲ ವರ್ಷದಿಂದಲೂ ಈತ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ನಿರ್ಗತಿಕರ ಸೇವೆಯಲ್ಲಿ ತೊಡಗಿಕೊಂಡಿರುವ ಸಾಕಷ್ಟು ಉದಾಹರಣೆ ಇವೆ.ಸದಾ ಒಂದಲ್ಲೊಂದು ಸಮಾಜ ಸೇವೆಯಲ್ಲೆ ಇರುವ ಈತ ಪ್ರಚಾರದ ಗೀಳಿಗೆ ಹೋಗಿಲ್ಲ.

  ಶ್ರೀಧರ್​ ಕಾರ್ಯಕ್ಕೆ ಬೆನ್ನೆಲುಬಾದ ಅಧಿಕಾರಿಗಳು

  ಜಿಲ್ಲಾಡಳಿತ ಅಗತ್ಯ ವಸ್ತುಗಳ ಪೂರೈಕೆಗೆ ಪ್ರಯತ್ನ ಮಾಡುತ್ತಿದ್ದರೂ ಬೀದಿಯಲ್ಲಿರುವ ಅನಾಥರು, ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿಲ್ಲ ಇವರೆಲ್ಲ ಊಟಕ್ಕಾಗಿ ಪರದಾಡುತ್ತಿದ್ದಾರೆ. ಕುಮಟಾ ಪಟ್ಟಣದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶ್ರೀಧರ್ ರವರು ಲಾಕ್ ಡೌನ್ ಘೋಷಿಸಿದ ನಂತರ ಮನೆಯಲ್ಲಿದ್ದರು. ಆದರೆ, ರಸ್ತೆ ಬದಿ ಊಟವಿಲ್ಲದೇ ಹಸುವಿನಿಂದ ಬಳಲಿ ಬೆಂಡಾಗಿದ್ದ ನಿರ್ಗತಿಕಕರಿಗೆ ತಮ್ಮ ಮನೆಯಲ್ಲಿಯೇ ಪ್ರತಿ ದಿನ ಊಟ, ತಿಂಡಿಯನ್ನು ತಯಾರಿಸಿ ನೀಡುತ್ತಿದ್ದಾರೆ. ಶ್ರೀಧರ್ ಮಾಡುತ್ತಿರುವ ಈ‌ಕಾರ್ಯವನ್ನ ನೋಡಿ ಇಲ್ಲಿನ‌ ಅಧಿಕಾರಿ ವರ್ಗ ಮತ್ತು ಶ್ರೀಧರ ಸ್ನೇಹಿತರು ಕೂಡಾ ಸಹಾಯಹಸ್ತ ಚಾಚಿದ್ದಾರೆ.

  ಇದನ್ನೂ ಓದಿ : ಕೊರೋನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಸ್ವಾಮೀಜಿ - ಮನೆ ಮನೆಗೆ ತೆರಳಿ ಮಾಸ್ಕ್​​​​​ ವಿತರಣೆ

  ಎಲ್ಲರೂ ಮನೆಯಲ್ಲಿ ಕುಳಿತು ಕೊರೋನಾ ವೈರಸ್ ನಿಂದ ಪಾರಾಗಲು ಪ್ರಯತ್ನಿಸುತ್ತಿದ್ದರೇ ಈ ವ್ಯಕ್ತಿ ಹಸಿದವರ ಹೊಟ್ಟೆಗೆ ಅನ್ನ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ಆದಷ್ಟು ಶ್ರೀಘ್ರದಲ್ಲಿ ಸರಕಾರ ಈ ಎಲ್ಲಾ ನಿರ್ಗತಿಕರನ್ನ, ತಮ್ಮ ವಶಕ್ಕೆ ಪಡೆದು ಅವರಿಗೆ ಸರಕಾರದಿಂದಲೇ ಊಟ ತಿಂಡಿ ನೀಡುವಂತಾಗಬೇಕಾಗಿದೆ.

   (ವರದಿ: ದರ್ಶನ್​​​ ನಾಯ್ಕ)
  First published: