ಹಸಿದು ಅಂಗಲಾಚಿದ ಸುಡುಗಾಡು ಸಿದ್ದರಿಗೆ ಮುರುಘಾ ಶ್ರೀಗಳಿಂದ ಅನ್ನ ದಾಸೋಹ : ಹಸಿವು ನೀಗಿಸಿ ಶ್ರೀಗಳ ಮಾನವೀಯತೆ

ದಾಸೋಹ ವ್ಯವಸ್ಥೆ ಮಾಡಿರುವ ಮುರುಘಾ ಶ್ರೀಗಳು ಜಿಲ್ಲೆಯ ಮತ್ತು ಹೊರ ರಾಜ್ಯದ ನಿರಾಶ್ರಿತರಿಗಾಗಿ ನಿತ್ಯ ದಾಸೋಹ ಮಾಡುತ್ತಿದ್ದಾರೆ. ಅಲ್ಲದೆ ಜಿಲ್ಲಾಡಳಿತ ನಡೆಸುತ್ತಿರುವ ನಿರಾಶ್ರಿತರ ಕೇಂದ್ರದ ಜವಾಬ್ದಾರಿಯ ವಹಿಸಿಕೊಂಡಿದ್ದಾರೆ.

news18-kannada
Updated:April 2, 2020, 2:11 PM IST
ಹಸಿದು ಅಂಗಲಾಚಿದ ಸುಡುಗಾಡು ಸಿದ್ದರಿಗೆ ಮುರುಘಾ ಶ್ರೀಗಳಿಂದ ಅನ್ನ ದಾಸೋಹ : ಹಸಿವು ನೀಗಿಸಿ ಶ್ರೀಗಳ ಮಾನವೀಯತೆ
ಅನ್ನದಾಸೋಹ ಮಾಡುತ್ತಿರುವ ಶಿವಮೂರ್ತಿ ಮುರುಘಾ ಶರಣರು
  • Share this:
ಚಿತ್ರದುರ್ಗ (ಏ.02) :  ಕಿಲ್ಲರ್ ಮಹಾಮಾರಿ ಕೊರೋನಾ ವೈರಸ್ ಗೆ ಪ್ರಪಂಚವೇ ತಲ್ಲಣಗೊಂಡಿದೆ. ಅದರಲ್ಲೂ ಇಡೀ ಭಾರತ ಸ್ಥಬ್ಧವಾಗಿಬಿಟ್ಟಿದೆ. ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು ಅಲೆಮಾರಿ, ನಿರಾಶ್ರಿತರು, ನಿರ್ಗತಿಕರು,  ಅಕ್ಕಿಪಿಕ್ಕಿ ಸಮುದಾಯಗಳಂತ ಬಡ ಜನರ ಬದುಕು ಮೂರಾಬಟ್ಟೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ತುತ್ತು ಅನ್ನ, ಗುಟುಕು ನೀರು ಸಿಗದೆ ಪರಿತಪಿಸಿ ಅಂಗಲಾಚುತ್ತಿದ್ದ ನೂರಾರು ಕುಟುಂಬಗಳಿಗೆ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅನ್ನದಾಸೋಹ ನೀಡಿ ಮಾನವೀಯತೆ ಮೆರೆದು ಆಸರೆಯಾಗಿದ್ದಾರೆ.

ಪ್ರಪಂಚದಲ್ಲಿ ಊಹೆಗೂ ನಿಲುಕದ ಕಣ್ಣಿಗೂ ಕಾಣದ ಕೊರೋನಾ ವೈರಸ್ ಮಾನವನ ಜೀವದ ಮೇಲೆ ಭಯವನ್ನ ಹುಟ್ಟಿಸಿದೆ. ಈ ಕಿಲ್ಲರ್ ಕೊರೋನಾಗೆ ಹೆದರಿ ಕೋಟ್ಯಾಂತರ ಜನರು ಭಯದಿಂದ ಮನೆ ಸೇರಿದ್ದಾರೆ. ಆದರೆ ಬದುಕಲು ಸೂರಿಲ್ಲದೆ, ನಿಗದಿತ ಸ್ಥಳಗಳಿಲ್ಲದೆ ಅಲೆಮಾರಿಗಳಾಗಿ ಅಲೆದು ಬದುಕು ಸಾಗಿಸುತ್ತಿದ್ದ ಅದೆಷ್ಟೋ ಕುಟುಂಬಗಳು, ದೇಶದಲ್ಲಿನ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿವೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೇಟ್, ರಾಮಗಿರಿ, ಹಾಗೂ ಚಿತ್ರದುರ್ಗ ತಾಲ್ಲೂಕಿನ ಅಳಿಯೂರು ಗ್ರಾಮಗಳ ಬಳಿ ವಾಸವಿದ್ದ ಸುಡುಗಾಡು ಸಿದ್ದರು ಹನಿ ನೀರೂ ಸಿಗದೆ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಸಿಕ್ಕ ಸಿಕ್ಕವರನ್ನ ಅಂಗಲಾಚುತ್ತಿದ್ದರು. ಈ ಬಡ ಕುಟುಂಬಗಳ ಕರುಣಾ ಜನಕ ಪರಿಸ್ಥಿತಿಯ ಸುದ್ದಿಯನ್ನ ನ್ಯೂಸ್18 ಪ್ರಸಾರ ಮಾಡಿತ್ತು. ವರದಿ ನೋಡಿದ ಮಾತೃ ಹೃದಯದ ಮುರುಘಾ ಶ್ರೀಗಳು ನೂರಕ್ಕೂ ಹೆಚ್ಚು ಬಡ ಕುಟುಂಬಗಳ ಜನರ ಹಸಿವು ನೀಗಿಸಲು ಅನ್ನ ದಾಸೋಹ ಮಾಡಿದ್ದಾರೆ.

shivamurty swamiji
ಕೈ ತೊಳೆಯಲು ಸಾನಿಟೈಸರ್​ ನೀಡುತ್ತಿರುವ ಶಿವಮೂರ್ತಿ ಮುರುಘಾ ಶರಣರು


ಮುರುಘಾ ಶ್ರೀಗಳು ಅಂದ್ರೇನೆ ಹಾಗೆ, ವಿಭಿನ್ನ ಆಲೋಚನೆ, ಜನಪರ, ಜೀವಪರ ಕಾಳಜಿ ಮೂಲಕ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ದಾಸೋಹಿ. ಕೊರೋನಾದಿಂದ ಜೀವ ಭಯಕ್ಕೆ ಮನೆ ಸೇರಿರುವ ಜನರ ನಡುವೆ ಮಾನವೀಯತೆ ದೃಷ್ಟಿ ಕೋನದಿಂದ ಭಯವನ್ನ ತೊರೆದು ಈ ಬಡ ಜನರ ಹಸಿವು ನೀಗಿಸಲು‌ ಮುಂದಾಗಿದ್ದಾರೆ. ಪ್ರತಿ ನಿತ್ಯ ಇವರಿಗೆ ದಾಸೋಹ ವ್ಯವಸ್ಥೆ ಮಾಡಿರುವ ಮುರುಘಾ ಶ್ರೀಗಳು ಜಿಲ್ಲೆಯ ಮತ್ತು ಹೊರ ರಾಜ್ಯದ ನಿರಾಶ್ರಿತರಿಗಾಗಿ ನಿತ್ಯ ದಾಸೋಹ ಮಾಡುತ್ತಿದ್ದಾರೆ. ಅಲ್ಲದೆ ಜಿಲ್ಲಾಡಳಿತ ನಡೆಸುತ್ತಿರುವ ನಿರಾಶ್ರಿತರ ಕೇಂದ್ರದ ಜವಾಬ್ದಾರಿಯ ವಹಿಸಿಕೊಂಡಿದ್ದಾರೆ.

ಇನ್ನೂ ಈ ಮಹಾಮಾರಿ ರೋಗವನ್ನ ನಿಯಂತ್ರಿಸಲು ಸ್ವಚ್ಚತೆ ಕಾಪಾಡಬೇಕು. ನಮ್ಮಲ್ಲಿ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಅದು ನಮ್ಮ ಹೆಗ್ಗಳಿಕೆ, ಹಾಗಂತ ಮೂರ್ಖತನವನ್ನ ಮಾಡದೆ ಜಾಗೃತಿ ವಹಿಸಬೇಕು, ಹೀಗೆಯೇ ಡಿಸ್ಟೆನ್ಸ್ ಪಾಲಿಸಿದರೆ ಲಾಕ್ ಡೌನ್ ಕ್ಲಿಯರ್ ಆಗಬಹುದು ಎಂಬ ಆಶಯವನ್ನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :  ಕೊರೋನಾ ಬಂದ್ರೆ ಸಾಯಲ್ಲ- ಯಾರೂ ಧೈರ್ಯ ಕಳೆದುಕೊಳ್ಳಬೇಡಿ : ಸಚಿವ ಬಿ. ಶ್ರೀರಾಮುಲುಒಟ್ಟಾರೆ ಕೊರೋನಾದಿಂದ ದೇಶದ ಆರ್ಥಿಕ ಪರಿಸ್ಥಿತಿಯ ಜೊತೆಗೆ ಜನರ ಜೀವನವೂ ಅಲ್ಲೋಲ ಕಲ್ಲೋಲವಾಗಿದೆ. ಬದುಕಿನ ಬವಣೆ ನೀಗಿಸಲಾಗದೆ ಸೋತು ಬಿದ್ದ ಕೈಗಳಿಗೆ ಶಕ್ತಿ ತುಂಬಲು ಅನ್ನ ದಾಸೋಹದ ಮೂಲಕ ಮುರುಘಾ ಶ್ರೀಗಳು ಹಸಿದವರ ಹಸಿವು ನೀಗಿಸಿ ಆಸರೆಯಾಗಿದ್ದಾರೆ. ಇವರ ಜೀವ ಪರತೆಯ ಕಾಳಜಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ : ವಿನಾಯಕ ತೋಡರನಾಳ್)
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading