ಕೋವಿಡ್-19ಗೆ ಲಸಿಕೆ ಹಾಕಿಸಿಕೊಳ್ಳುವ ಅಮೆರಿಕನ್ನರಿಗೆ ಉಚಿತ ಬಿಯರ್ ನೀಡಲಾಗುತ್ತಿದೆ. ಅಮೆರಿಕದ ಹೆಚ್ಚಿನ ನಾಗರಿಕರು ಜುಲೈ 4ರ ಒಳಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದು, ಇದಕ್ಕಾಗಿ ಒಂದು ತಿಂಗಳ ವಿಶೇಷ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಶ್ವೇತ ಭವನದಲ್ಲಿ ಮಾತನಾಡಿದ ಜೋ ಬಿಡೆನ್, ಅಮೆರಿಕದ ಸಂಪೂರ್ಣ ನಾಗರಿಕರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ದೇಶದ ಶೇ.70ರಷ್ಟು ವಯಸ್ಕರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎನ್ನುವ ಗುರಿ ಹೊಂದಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ಕೆಲವು ಕಂಪನಿಗಳು ಲಸಿಕೆ ಹಾಕಿಸಿಕೊಂಡವರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಆನ್‌ಹ್ಯೂಸರ್-ಬುಶ್ ತಯಾರಿಸಿರುವ ಲಸಿಕೆಯನ್ನು ಅಮೆರಿಕದ ಯಾವ ನಾಗರಿಕ ಹಾಕಿಸಿಕೊಳ್ಳುತ್ತಾನೆಯೋ ಆತನಿಗೆ ನಗದು ರೂಪದಲ್ಲಿ ಕೊಡುಗೆಗಳು, ಕ್ರೀಡಾ ಪಂದ್ಯಗಳ ಟಿಕೆಟ್ ಅಥವಾ ಉದ್ಯೋಗದ ವೇಳೆ ಪಾವತಿಸಿದ ರಜೆ ಮುಂತಾದ ಪ್ರೋತ್ಸಾಹಕ ಕೊಡುಗೆಗಳನ್ನು ನೀಡುತ್ತಿರುವುದು ವಿಶೇಷ.
ಅಮೆರಿಕನ್ನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ಅಧ್ಯಕ್ಷ ಜೋ ಬೈಡನ್ ಅವರು ತಿಂಗಳ ಕ್ರಮವನ್ನು ಘೋಷಣೆ ಮಾಡಿದ್ದಾರೆ. ವ್ಯವಹಾರ, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಕಾಲೇಜುಗಳು, ಸೆಲೆಬ್ರಿಟಿಗಳು ಮತ್ತು ಸಮುದಾಯ ಸಂಸ್ಥೆಗಳ ಸಹಾಯದಿಂದ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶ್ವೇತ ಭವನ ತಿಳಿಸಿದೆ.
ಇಲ್ಲಿಯವರೆಗೆ, ಅಮೆರಿಕದಲ್ಲಿ ಈವರೆಗೆ ಶೇ. 62.8 ರಷ್ಟು ಜನರು COVID-19 ಲಸಿಕೆಯ ಒಂದು ಡೋಸ್ ಪಡೆದುಕೊಂಡಿದ್ದಾರೆ. ಅಮೆರಿಕದ ಜನಸಂಖ್ಯೆಯಲ್ಲಿ 133.6 ಮಿಲಿಯನ್ ಜನರು ಸಂಪೂರ್ಣವಾಗಿ ಎರಡು ಬಾರಿ ಲಸಿಕೆ ಪಡೆದಿದ್ದಾರೆ.
ಹೊಸ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರ ಪ್ರಮಾಣವು ದಿನಕ್ಕೆ ಸರಾಸರಿ 600,000 ಕ್ಕಿಂತ ಕಡಿಮೆಯಾಗಿದೆ. ಲಾಟರಿಗಳಂತಹ ಆಫರ್ ಘೋಷಣೆಯಾದಾಗಲೂ ದಿನಕ್ಕೆ 800,000 ಕ್ಕಿಂತಲೂ ಕಡಿಮೆಯಾಗಿದೆ ಮತ್ತು ಏಪ್ರಿಲ್ ಆರಂಭದಲ್ಲಿ ಲಸಿಕೆಗಳ ಬೇಡಿಕೆ ಹೆಚ್ಚು ಇದ್ದಾಗ ದಿನಕ್ಕೆ ಸುಮಾರು 2 ಮಿಲಿಯನ್ ಗರಿಷ್ಠ ಮಟ್ಟಕ್ಕೆ ಇಳಿದಿದೆ. ಆದರೆ ಅಮೆರಿಕ ಸರ್ಕಾರದ ವಿಶೇಷ ಕ್ರಮ ಹಾಗೂ ಪ್ರೋತ್ಸಾಹದ ನಡುವೆಯೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಇಳಿಕೆಯಾಗುತ್ತಲೇ ಇದೆ.
ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಜೋ ಬೈಡನ್ ಆಡಳಿತ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಯಾರೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಾರೆಯೋ ಅಂತಹ ವ್ಯಕ್ತಿಗಳಿಗೆ, 21 ವರ್ಷ ವಯಸ್ಸು ದಾಟಿದ ವಯಸ್ಕರಿಗೆಲ್ಲಾ ಉಚಿತವಾಗಿ ಬಿಯರ್ನ್ನು ನೀಡಲಾಗುತ್ತದೆ ಎಂದು ಆನ್‌ಹ್ಯೂಸರ್-ಬುಶ್ ಬುಧವಾರ ಘೋಷಣೆ ಮಾಡಿದೆ.
ಇದಲ್ಲದೆ ಮೊದಲು ಲಸಿಕೆ ಹಾಕಿಸಿಕೊಂಡ 200,000 ಜನರಿಗೆ 5 ಡಾಲರ್ ಅನ್ನು ಪ್ರೋತ್ಸಾಹದ ರೂಪದಲ್ಲಿ ನೀಡಲಾಗುತ್ತದೆ. ಇಂತಹ ಹಲವು ಕೊಡುಗೆಗಳ ಮೂಲಕವೇ ಜನರನ್ನು ಸೆಳೆಯುತ್ತಿರುವುದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ