ರಾಜ್ಯದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ: ಕಲಬುರಗಿಯ ಮೃತ ವೃದ್ಧನ ಕುಟುಂಬದ ಮತ್ತೊಬ್ಬರಿಗೆ ಸೋಂಕು

ಭಾರತದಲ್ಲಿ ಒಟ್ಟಾರೆ ಇದುವರೆಗೂ 107 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಓರ್ವ ಮೃತಪಟ್ಟಿದ್ದು, 7 ಸೋಂಕಿತ ಪ್ರಕರಣ ಪತ್ತೆಯಾಗಿವೆ. ದೆಹಲಿಯಲ್ಲಿ ಒಬ್ಬರು, ಕಲಬುರ್ಗಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 107 ಪ್ರಕರಣಗಳಲ್ಲಿ 10 ಜನರು ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ.

ಕೊರೊನಾ ವೈರಸ್ ಪೀಡಿತರಿಗೆ ವೈದ್ಯರ ಚಿಕಿತ್ಸೆ

ಕೊರೊನಾ ವೈರಸ್ ಪೀಡಿತರಿಗೆ ವೈದ್ಯರ ಚಿಕಿತ್ಸೆ

 • Share this:
  ಬೆಂಗಳೂರು(ಮಾ.15): ರಾಜ್ಯದಲ್ಲಿ ಮತ್ತೊಂದು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಕಲಬುರಗಿಯಲ್ಲಿ ಮೃತ ವೃದ್ಧನ ಕುಟುಂಬದ ಮತ್ತೊಬ್ಬರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇವರ ಥ್ರೋಟ್ ಸ್ಯಾಂಪಲ್ ವರದಿಯಲ್ಲಿ ಪಾಸಿಟಿವ್ ಕೇಸ್​ ಎಂದು ವರದಿಯಾಗಿರುವುದಾಗಿ ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬಿ ಮಾಹಿತಿ ನೀಡಿದ್ದಾರೆ.

  ಇನ್ನು, ಈ ಸಂಬಂಧ ಟ್ವೀಟ್​​ ಮಾಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಕಲಬುರಗಿಯ ನಾಲ್ವರು ಮಂದಿ ಕೊರೋನಾ ಶಂಕಿತರ ಪೈಕಿ 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿತ್ತು. ಇದೀಗ ನಾಲ್ಕನೇ ವ್ಯಕ್ತಿಯ ಕೊರೋನಾ ಪರೀಕ್ಷೆ ವರದಿಯೂ ಪಾಸಿಟಿವ್ ಎಂದು ಬಂದಿದೆ. ಇವರಿಗೆ ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

  ಇನ್ನು, ಭಾರತದಲ್ಲಿ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್​ನಿಂದಾಗಿ ಮಾಲ್, ಥಿಯೇಟರ್, ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್​ಗಳು ಬಹುತೇಕ ಬಂದ್ ಆಗಿವೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು, ಸೋಂಕಿನ ಪ್ರಕರಣ ಇನ್ನಷ್ಟು ಹೆಚ್ಚಾಗುವ ಆತಂಕ ಮೂಡಿದೆ. ದೇಶದಲ್ಲಿ ಕೊರೋನಾಗೆ ಮೊದಲ ಬಲಿಯಾಗಿರುವುದು ಕರ್ನಾಟಕದಲ್ಲಿ. ಹೀಗಾಗಿ, ರಾಜ್ಯದೆಲ್ಲೆಡೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ.

  ಇದನ್ನೂ ಓದಿ: ‘ನಾನು, ಸುಧಾಕರ್​​​ ಜತೆಜತೆಗೆ ಕೊರೋನಾ ತಡೆಗೆ ಕೆಲಸ ಮಾಡುತ್ತಿದ್ದೇವೆ‘: ಎಚ್​​ಡಿಕೆಗೆ ಶ್ರೀರಾಮುಲು ತಿರುಗೇಟು

  ಭಾರತದಲ್ಲಿ ಒಟ್ಟಾರೆ ಇದುವರೆಗೂ 107 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಓರ್ವ ಮೃತಪಟ್ಟಿದ್ದು, 7 ಸೋಂಕಿತ ಪ್ರಕರಣ ಪತ್ತೆಯಾಗಿವೆ. ದೆಹಲಿಯಲ್ಲಿ ಒಬ್ಬರು, ಕಲಬುರ್ಗಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 107 ಪ್ರಕರಣಗಳಲ್ಲಿ 10 ಜನರು ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ.

  ಕೊರೋನಾ ವೈರಸ್‍ನಿಂದ 63 ಸಾವಿರ ಜನ ಗುಣಮುಖರಾಗಿದ್ದಾರೆ. ಈ ವೈರಾಣು ಹರಡದಂತೆ ತಡೆಗಟ್ಟಲು ಆರೋಗ್ಯ ಇಲಾಖೆ ಎಲ್ಲಾ ಕ್ರಮಕೈಗೊಂಡಿದೆ. ರಾಜ್ಯದ ಜನ ಭಯ ಪಡುವ ಅಗತ್ಯವಿಲ್ಲ ಎಂದು ಈಗಾಗಲೇ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಕಲಬುರಗಿ ಜೇಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತಾಡುವ ವೇಳೆ ಹೀಗೆ ಹೇಳಿಕೆ ನೀಡಿದ್ದರು.
  First published: