news18-kannada Updated:May 10, 2020, 8:01 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಮೇ 10); ರಾಜಧಾನಿ ಬೆಂಗಳೂರಿನಲ್ಲಿರುವ ಉತ್ತರ ಭಾರತದ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸುವ ಸಲುವಾಗಿ ಇಂದೂ ಸಹ ನಾಲ್ಕು ಶ್ರಮಿಕ್ ರೈಲನ್ನು ಹೊರಡಿಸಲಾಗಿದೆ. ಈ ರೈಲಿನಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಜಮ್ಮ ಕಾಶ್ಮೀರದ ಸುಮಾರು 4,800 ಜನ ಪ್ರಯಾಣಿಸಲಿದ್ದಾರೆ ಎನ್ನಲಾಗುತ್ತಿದೆ.
ಬೆಳಗ್ಗೆ 11 ಗಂಟೆ, ಮಧ್ಯಾಹ್ನ 1 ಗಂಟೆ, ಸಂಜೆ 4 ಹಾಗೂ 6 ಗಂಟೆಗೆ ರೈಲು ಹೊರಡಲಿದೆ. ಬೆಂಗಳೂರಿನ ಚಿಕ್ಕಬಾಣಾವಾರದಿಂದ ಉತ್ತರ ಪ್ರದೇಶದ ಲಕ್ನೋಗೆ ಹಾಗೂ ಬೈಯ್ಯಪ್ಪನ ಹಳ್ಳಿಯಿಂದ ಕಾಶ್ಮೀರಕ್ಕೆ ಬೆಳಗ್ಗೆ 11 ಗಂಟೆಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಒಂದು ರೈಲಿಗೆ 1,200 ಜನರಂತೆ ಒಟ್ಟು 4,800 ಜನ ಇಂದು ಉತ್ತರ ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಶ್ಮೀರದಿಂದ ಅಪಾರ ಸಂಖ್ಯೆಯ ಜನ ಇಲ್ಲಿಗೆ ಓದಲು ಆಗಮಿಸಿದ್ದಾರೆ. ಅವರನ್ನೂ ಸಹ ತವರಿಗೆ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನೋಂದಾಯಿತರನ್ನು ಮಾತ್ರ ಪ್ರಯಾಣಕ್ಕೆ ಅನುಮತಿಸಲಾಗಿದ್ದು, ಎಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿದ ನಂತರವೇ ಅವರನ್ನು ರೈಲು ನಿಲ್ದಾಣಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಹೀಗಾಗಿ ವಲಸಿಗರು ಪ್ರಯಾಣಿಸುವ ಎಲ್ಲಾ ನಿಲ್ದಾಣದಲ್ಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ತೀವ್ರಗೊಂಡ ಕೊರೋನಾ: ಯಾವ ಏರಿಯಾದಲ್ಲಿ ಎಷ್ಟು ಮಂದಿಗೆ ಸೋಂಕು?
First published:
May 10, 2020, 8:01 AM IST