ಕೊರೋನಾ ಸಂಕಷ್ಟದಲ್ಲೂ ಭರ್ಜರಿ ಬೆಳವಣಿಗೆ ಸಾಧಿಸುತ್ತಿವೆ ಈ 4 ವಲಯಗಳು

ಕೊರೋನಾ ಬಿಕ್ಕಟ್ಟು ಕೆಲ ವಲಯಗಳಿಗೆ ಅನುಕೂಲ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ. ಅಂಥ ನಾಲ್ಕು ಪ್ರಮುಖ ವಲಯಗಳು ಇಲ್ಲಿವೆ. ಕೊರೋನಾ ಸಂಕಷ್ಟ ಮುಗಿದ ನಂತರ ಇನ್ನಷ್ಟು ವೇಗವಾಗಿ ಬೆಳೆಯಬಲ್ಲಂಥ ವಲಯಗಳು ಇವು.

ಎಫ್​ಎಂಸಿಜಿ ವಲಯ

ಎಫ್​ಎಂಸಿಜಿ ವಲಯ

 • Share this:
  ಬೆಂಗಳೂರು: ಕೊರೋನಾ ವೈರಸ್ ಬಿಕ್ಕಟ್ಟು ದೇಶಕ್ಕೆ ಆರ್ಥಿಕವಾಗಿ ಮರ್ಮಾಘಾತ ಕೊಡುವುದರ ಜೊತೆಗೆ ಜನಜೀವನವನ್ನು ತಲ್ಲಣಗೊಳಿಸಿದೆ. ಮಾರ್ಚ್​ನಿಂದ 2 ತಿಂಗಳ ಲಾಕ್ ಡೌನ್​ನಿಂದಾಗಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ತೀವ್ರ ಹಿನ್ನಡೆಯಾಗಿದೆ. ದೇಶದ ಜಿಡಿಪಿ ಐತಿಹಾಸಿಕ ಕುಸಿತ ಕಾಣುತ್ತಿದೆ. ಈ ಹೊತ್ತಿನಲ್ಲೂ ಕೊರೋನಾ ಬಿಕ್ಕಟ್ಟು ಕೆಲ ವಲಯಗಳಿಗೆ ಅನುಕೂಲ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ. ಅಂಥ ನಾಲ್ಕು ಪ್ರಮುಖ ವಲಯಗಳು ಇಲ್ಲಿವೆ. ಕೊರೋನಾ ಸಂಕಷ್ಟ ಮುಗಿದ ನಂತರ ಇನ್ನಷ್ಟು ವೇಗವಾಗಿ ಬೆಳೆಯಬಲ್ಲಂಥ ವಲಯಗಳು ಇವು.

  ಡಿಜಿಟಲ್, ಇಂಟರ್ನೆಟ್:

  ಲಾಕ್​ಡೌನ್​ನಲ್ಲಿ ಹೆಚ್ಚೆಚ್ಚು ಜನರು ತಮ್ಮ ಕೆಲಸ ಕಾರ್ಯ, ಅಗತ್ಯಗಳಿಗೆ ಡಿಜಿಟಲ್ ಹಾದಿ ಹಿಡಿಯುವುದು ಅನಿವಾರ್ಯವಾಯಿತು. ಕಚೇರಿಯಲ್ಲಿ ಕೆಲಸ ಮಾಡುವವರು ವರ್ಕ್ ಫ್ರಂ ಹೋಮ್ ಮಾಡಬೇಕಾಯಿತು. ಕಚೇರಿ ಮೀಟಿಂಗ್​ಗಳು ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲೇ ನಡೆದವು. ಈಗಲೂ ಈ ಟ್ರೆಂಡ್ ಮುಂದುವರಿಯುತ್ತಿದೆ. ಶಿಕ್ಷಣ ಸಂಸ್ಥೆಗಳು ಆನ್​ಲೈನ್ ತರಗತಿ ನಡೆಸುತ್ತಿವೆ. ಚಿತ್ರಮಂದಿರಗಳು ತೆರೆಯದ ಕಾರಣ ಅನೇಕ ಸಿನಿಮಾಗಳು ಡಿಜಿಟಲ್ ಆಗಿ ರಿಲೀಸ್ ಆಗುವಂತಾಗಿದೆ. ಕೋವಿಡ್ ಸಂಕಷ್ಟ ಮುಗಿದರೂ ಈ ಟ್ರೆಂಡ್ ಬಹುತೇಕ ಮುಂದುವರಿಯುವ ಸಾಧ್ಯತೆ ಇದೆ. ಈ ವಲಯಕ್ಕೆ ಒಳ್ಳೆಯ ಪ್ರಗತಿ ಹಾದಿ ಮುಂದಿದೆ.

  ಇದನ್ನೂ ಓದಿ: ಕೇರಳದ ಇಡುಕ್ಕಿಯಲ್ಲಿ ಭೂ ಕುಸಿತದಿಂದ 15 ಮಂದಿ ಸಾವು; 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

  ಎಫ್​ಎಂಸಿಜಿ ಮತ್ತು ರೀಟೇಲ್:

  ಮನುಷ್ಯನಿಗೆ ಏನೇ ಕಷ್ಟಬಂದರೂ ಹೊಟ್ಟೆಪಾಡು ನಡೆಯುವುದು ಅನಿವಾರ್ಯ. ಮನುಷ್ಯನ ಹೊಟ್ಟೆಪಾಡಿಗೆ ಅಗತ್ಯವಿರುವ ಎಫ್​​ಎಂಸಿಜಿ (ನಿತ್ಯೋಪಯೋಗಿ ವಸ್ತು) ವಸ್ತುಗಳು ಕೊರೋನಾ ಸಂಕಷ್ಟ ಕಾಲದಲ್ಲೂ ಬೇಡಿಕೆ ಉಳಿಸಿಕೊಂಡಿವೆ. ಮಹಾಮಾರಿ ಹಿನ್ನೆಲೆಯಲ್ಲಿ ಆರೋಗ್ಯಯುತ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಹಾರ ಉತ್ಪಾದನಾ ಕಂಪನಿಗಳು ಇದೀಗ ಸಾರ್ವಜನಿಕ ಬೇಡಿಕೆಗೆ ತಕ್ಕಂತೆ ತಮ್ಮ ರಣತಂತ್ರ ರೂಪಿಸುತ್ತಿವೆ. ಆರೋಗ್ಯಕ್ಕೆ ಇಂಬು ನೀಡುವ ಉತ್ಪನ್ನಗಳನ್ನ ಹೆಚ್ಚಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಡಾಬರ್, ಪತಂಜಲಿ, ಜಂಡು ಮೊದಲಾದ ಕಂಪನಿಗಳು ಆರೋಗ್ಯಕರ ಆಹಾರ ಉತ್ಪನ್ನಗಳನ್ನ ಹೆಚ್ಚೆಚ್ಚು ಬಿಡುಗಡೆ ಮಾಡುತ್ತಿವೆ. ಕೊರೋನಾ ಸಂಕಷ್ಟ ಕಳೆದರೂ ಜನರು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಈ ವಲಯ ಹೆಚ್ಚು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.

  ವಿಶೇಷ ರಾಸಾಯನಿಕಗಳು:

  ಕೊರೋನಾ ವೈರಸ್ ಬಿಕ್ಕಟ್ಟಿನಲ್ಲಿ ಜನರಿಗೆ ಅತ್ಯಗತ್ಯ ಇರುವ ವಸ್ತುಗಳಲ್ಲಿ ಸ್ಯಾನಿಟೈಸರ್ ಕೂಡ ಒಂದು. ದೈಹಿಕ ಸ್ವಚ್ಛತೆ ಜೊತೆಗೆ ಮನೆಯ ಶುಚಿಯೂ ಅಗತ್ಯ. ಹ್ಯಾಂಡ್ ಸ್ಯಾನಿಟೈಸರ್, ಸೋಂಕು ನಿವಾರಕ ರಾಸಾಯನಿಕಗಳು, ನೆಲ ಸ್ವಚ್ಛಗೊಳಿಸುವ ರಾಸಾಯನಿಕಗಳಿಗೆ ಬೇಡಿಕೆ ಹೆಚ್ಚಿದೆ. ಹಲವು ಎಫ್​ಎಂಸಿಜಿ ಕಂಪನಿಗಳು ಈ ಅಗತ್ಯತೆಗಳಿಗೆ ಸ್ಪಂದಿಸಿ ಇಂಥ ಬಹಳಷ್ಟು ಉತ್ಪನ್ನಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಈ ಉತ್ಪನ್ನಗಳಿಗೆ ಬೇಕಾಗಿರುವ ರಾಸಾಯನಿಕಗಳನ್ನ ಉತ್ಪಾದಿಸುವ ಕಂಪನಿಗಳಿಗೆ ಒಳ್ಳೆಯ ಬ್ಯುಸಿನೆಸ್ ಆಗುತ್ತಿದೆ.

  ಇದನ್ನೂ ಓದಿ: ಕೋಯಿಕ್ಕೋಡ್ ವಿಮಾನ ದುರಂತ: ನೂರಾರು ಜನರ ಜೀವ ಉಳಿಸಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಪೈಲಟ್?

  ಆರೋಗ್ಯಸೇವೆ ವಲಯ:

  ಕಟ್ಟುನಿಟ್ಟಿನ ಲಾಕ್​ಡೌನ್ ಸಂದರ್ಭದಲ್ಲಿ ಹೆಚ್ಚು ಸಂಕಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಆರೋಗ್ಯ ವಲಯವೂ ಒಂದು. ಕೊರೋನಾಗಷ್ಟೇ ಉಪಚಾರ ಸಿಕ್ಕು ಉಳಿದ ರೋಗಿಗಳಿಗೆ ಹೆಚ್ಚೂಕಡಿಮೆ ಬಾಗಿಲು ಬಂದ್ ಆಗುವಂತಾಗಿತ್ತು. ಈಗ ಎಲ್ಲರ ಚಿತ್ತ ಈಗ ಆರೋಗ್ಯವಲಯದತ್ತ ನೆಡುತ್ತಿದೆ. ಆರೋಗ್ಯ ಸೇವೆ, ಆರೋಗ್ಯ ಪರಿಕರ ಇತ್ಯಾದಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆಕ್ಸಿಮೀಟರ್, ಪಿಪಿಇ ಕಿಟ್, ವಿಶೇಷ ಮಾಸ್ಕ್ ಇತ್ಯಾದಿಗಳು ಜನರಿಗೆ ಅಗತ್ಯವಾಗುತ್ತಿವೆ. ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸಲಿದ್ದಾರೆ. ಈ ಹೆಲ್ತ್​ಕೇರ್ ವಲಯ ಮುಂದಿನ ದಿನಗಳಲ್ಲಿ ಗಮನಾರ್ಹ ಪ್ರಗತಿ ಕಾಣುವ ಸಾಧ್ಯತೆ ಇದೆ.
  Published by:Vijayasarthy SN
  First published: