Manmohan Singh: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆರೋಗ್ಯ ಚೇತರಿಕೆ: ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಸಾಧ್ಯತೆ

Dr. Manmohan Singh Health Updates: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್​ಗೆ ಎದೆನೋವು ಕಾಣಿಸಿಕೊಂಡದ್ದು ಭಾನುವಾರ ರಾತ್ರಿ 8:45ರ ವೇಳೆಗೆ. ಈ ಕೂಡಲೇ ಚಿಕಿತ್ಸೆಗಾಗಿ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಮನಮೋಹನ್​​ ಸಿಂಗ್​​ಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯ್ತು. ಡಾ ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿದು ಬಂದಿತ್ತು.

news18-kannada
Updated:May 11, 2020, 11:54 AM IST
Manmohan Singh: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆರೋಗ್ಯ ಚೇತರಿಕೆ: ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಸಾಧ್ಯತೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್
  • Share this:
ನವದೆಹಲಿ(ಮೇ.11): ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆರೋಗ್ಯ ಚೇತರಿಸಿಕೊಂಡಿದೆ ಎಂದು ಏಮ್ಸ್​ ಆಸ್ಪತ್ರೆ ಮೂಲಗಳು ತಿಳಿಸಿವೆ. ನಿನ್ನೆ ಸಂಜೆ ಎದೆನೋವು ಕಾಣಿಸಿಕೊಂಡ ಕಾರಣ ಸಿಂಗ್​ರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಇವರಿಗೆ ವಿಶೇಷ ವಾರ್ಡ್​​ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಸಿಂಗ್​​ ಆರೋಗ್ಯ ಸುಧಾರಣೆ ಕಂಡಿದೆ ಹೇಳಿದ್ಧಾರೆ.


ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್​ಗೆ ಎದೆನೋವು ಕಾಣಿಸಿಕೊಂಡದ್ದು ಭಾನುವಾರ ರಾತ್ರಿ 8:45ರ ವೇಳೆಗೆ. ಈ ಕೂಡಲೇ ಚಿಕಿತ್ಸೆಗಾಗಿ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಮನಮೋಹನ್​​ ಸಿಂಗ್​​ಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯ್ತು. ಡಾ ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿದು ಬಂದಿತ್ತು.

ವಿಪಕ್ಷ ಕಾಂಗ್ರೆಸ್​ನ ನಾಯಕ ಡಾ. ಮನಮೋಹನ್​​ ಸಿಂಗ್ ಈ ಹಿಂದೆ ಮೊದಲಿಗೆ​​ ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಡಾ. ಸಿಂಗ್​​ಗೆ ಏಮ್ಸ್​​ನಲ್ಲೇ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು.

ಇದನ್ನೂ ಓದಿ: Manmohan Singh: ಮಾಜಿ ಪ್ರಧಾನಿ ಡಾ. ಮನಮೋಹನ್​​​ ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲು

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಲವು ಕಾಂಗ್ರೆಸ್​ ನಾಯಕರು, ಮನಹೋಹನ್​​​ ಸಿಂಗ್​​​​ ಅನಾರೋಗ್ಯದಿಂದ ಏಮ್ಸ್​​ಗೆ ದಾಖಲಾಗಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತಿವೆ. ಹಾಗಾಗಿ ಅವರ ಶೀಘ್ರ ಚೇತರಿಕೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದಾಗಿ ಟ್ವೀಟ್​ ಮಾಡಿದ್ದರು.
First published: May 11, 2020, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading