Shahid Afridi: ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​​ ಶಾಹಿದ್ ಆಫ್ರಿದಿಗೆ ಅಂಟಿದ ಕೊರೋನಾ ವೈರಸ್

ಈ ಬಗ್ಗೆ ಸ್ವತಃ ಅಫ್ರಿದಿ ಅವರೇ ಟ್ವೀಟ್ ಮಾಡಿ ತಿಳಿದಿದ್ದಾರೆ. ನನಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ ಎಂದಿರುವ ಅಫ್ರಿದಿ ನಿಮ್ಮೆಲ್ಲರ ಪ್ರಾರ್ಥನೆ ನನ್ನ‌ ಮೇಲಿರಲಿ ಎಂದು ಹೇಳಿದ್ದಾರೆ.

news18-kannada
Updated:June 13, 2020, 3:09 PM IST
Shahid Afridi: ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​​ ಶಾಹಿದ್ ಆಫ್ರಿದಿಗೆ ಅಂಟಿದ ಕೊರೋನಾ ವೈರಸ್
Shahid Afridi
  • Share this:
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಲ್​ರೌಂಡರ್ ಶಾಹಿದ್ ಅಫ್ರಿದಿ ಅವರಿಗೆ ಕೊರೋನಾ ವೈರಸ್ ತಗುಲಿದೆ. ಗುರುವಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅಫ್ರಿದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಪರೀಕ್ಷೆ ವೇಳೆ ಕೊರೋನಾ ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ಅಫ್ರಿದಿ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ನನಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ ಎಂದಿರುವ ಅಫ್ರಿದಿ, ನಿಮ್ಮೆಲ್ಲರ ಪ್ರಾರ್ಥನೆ ನನ್ನ‌ ಮೇಲಿರಲಿ ಎಂದು ಹೇಳಿದ್ದಾರೆ.

ಅಬ್ಬಾ..! ಬ್ಯಾಟಿಂಗ್​ ಅಂದರೆ ಇದು; ಕಾರ್ಕಳ ಯುವತಿಯ ಕವರ್​ ಡ್ರೈವ್​ ವಿಡಿಯೋ ಭಾರೀ ವೈರಲ್​​

 


40 ವರ್ಷ ಪ್ರಾಯದ ಅಫ್ರಿದಿ ಇತ್ತೀಚೆಗಷ್ಟೆ ತಮಗೆ ಐದನೇ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಪಾಕಿಸ್ತಾನದಲ್ಲ ಕೊರೋನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡಿದೆ. ಹೀಗಾಗಿ ತೀವ್ರ ಮೇಲ್ವಿಚಾರಣೆಯಲ್ಲಿ ಪೂರ್ವ ಸಿದ್ಧತೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದ ಕ್ರಿಕೆಟ್ ಶಿಬಿರ ಕೂಡ ರದ್ದಾಗಿದೆ. ವಾರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಕೋವಿಡ್ 19 ಪ್ರಕರಣ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬೀದಿಯಲ್ಲಿ ಹಸಿದ ಗೋವುಗಳಿಗೆ ಆಹಾರ ಉಣಿಸಿದ ಶಿಖರ್ ಧವನ್; ಹ್ಯಾಟ್ಸ್​ ಆಫ್ ಹೇಳಲೇ ಬೇಕು

ಪಾಕಿಸ್ತಾನದಲ್ಲಿ ಸ್ಯದ್ಯ ಕೊರೋನಾ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿ ಮುನ್ನುಗ್ಗುತ್ತಿದೆ. 1000ಕ್ಕೂ ಅಧಿಕ ಮಂದಿ ಕೊರೋನಾ ವೈರಸ್‌ನಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ಅಲ್ಲಿನ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿರುವುದಾಗಿ ಆಸ್ಪತ್ರೆಗಳು ಎಚ್ಚರಿಕೆಯನ್ನು ನೀಡುತ್ತಿವೆ.
First published: June 13, 2020, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading