Vinay Kulkarni: ಮಾಜಿ ಸಚಿವ ವಿನಯ್​​ ಕುಲಕರ್ಣಿಗೂ ಕೊರೋನಾ ಪಾಸಿಟಿವ್​​

ದರ್ಶನ್​​ ಭೇಟಿ ಬಳಿಕ ವಿನಯ್​​ ಕುಲಕರ್ಣಿಯವರಿಗೆ ನೆಗಡಿ ಕಾಣಿಡಿಕೊಂಡಿದೆ. ಬಳಿಕ ಕೊರೋನಾ ಟೆಸ್ಟ್​​ ಮಾಡಿಸಿದ ಮಾಜಿ ಸಚಿವರ ರಿಪೋರ್ಟ್​ ಪಾಸಿಟಿವ್​​ ಬಂದಿದೆ.

ವಿನಯ್​​ ಕುಲಕರ್ಣಿ

ವಿನಯ್​​ ಕುಲಕರ್ಣಿ

  • Share this:
ಧಾರವಾಡ(ಆ.27): ಕಾಂಗ್ರೆಸ್​ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ವಿನಯ್​​ ಕುಲಕರ್ಣಿಯವರಿಗೂ ಕೊರೋನಾ ಪಾಸಿಟಿವ್​​​ ಕಾಣಿಸಿಕೊಂಡಿದೆ. ಹೀಗಾಗಿ ಧಾರವಾಡದ ತಮ್ಮ ಮನೆಯಲ್ಲೇ ವಿನಯ್​​ ಕುಲಕರ್ಣಿಯವರು ಪ್ರತ್ಯೇಕ ಕೊಠಡಿಯಲ್ಲಿ ಹೋಮ್ ಐಸುಲೇಷ‌ನ್‌ಗೆ ಒಳಗಾಗಿದ್ದಾರೆ.

ಇನ್ನು, ವಿನಯ್​​ ಕುಲಕರ್ಣಿಗೆ ಹಲವರು ಹಿರಿಯ ಕಾಂಗ್ರೆಸ್​ ನಾಯಕರು ಸೇರಿದಂತೆ ಬೆಂಬಲಿಗರು ಫೋನ್​​ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ವಿನಯ್​​ ಕುಲಕರ್ಣಿ ಜತೆಗೆ ಡಿ.ಕೆ ಶಿವಕುಮಾರ್​​ ಕೂಡ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಎರಡು ವಾರಗಳ ಹಿಂದೆಯಷ್ಟೇ ನಟ ದರ್ಶನ್​​ ಜೆತೆ ವಿನಯ ಕುಲಕರ್ಣಿ ಇದ್ದರು. ಆಗ ನಟ ದರ್ಶನ್​​​ ಅವರನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸಿದ್ದರು. ಆಗಸ್ಟ್​​ 14ನೇ ತಾರೀಕು ಇಡೀ ದಿನ ದರ್ಶನ್​​ ಜತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಕಾಲ ಕಳೆದಿದ್ದರು.

ದರ್ಶನ್​​ ಭೇಟಿ ಬಳಿಕ ವಿನಯ್​​ ಕುಲಕರ್ಣಿಯವರಿಗೆ ನೆಗಡಿ ಕಾಣಿಡಿಕೊಂಡಿದೆ. ಬಳಿಕ ಕೊರೋನಾ ಟೆಸ್ಟ್​​ ಮಾಡಿಸಿದ ಮಾಜಿ ಸಚಿವರ ರಿಪೋರ್ಟ್​ ಪಾಸಿಟಿವ್​​ ಬಂದಿದೆ.

ಇದನ್ನೂ ಓದಿ: ಕೊರೋನಾ ಸೋಂಕಿನಿಂದ ಗುಣಮುಖನಾಗಿದ್ದೇನೆ, ನಾಳೆಯಿಂದಲೇ ಸಾರ್ವಜನಿಕ ಸೇವೆಗೆ; ಸಚಿವ ಶ್ರೀರಾಮುಲು

ಇನ್ನು, ವಿನಯ್​ ಕುಲಕರ್ಣಿಯವರ ಬೆಂಬಲಿಗರು, ಕಾರ್​​ ಚಾಲಕ ಸೇರಿದಂತೆ ಮನೆಯ ಸದಸ್ಯರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗೆಯೇ ಅವರೊಂದಿಗೆ ಇತ್ತೀಚೆಗೆ ಸಂಪರ್ಕ ಹೊಂದಿದ್ದ ಎಲ್ಲರನ್ನು ಕೋವಿಡ್​​-19 ಟೆಸ್ಟ್​ಗೆ ಒಳಗಾಗುವಂತೆ ವಿನಯ್​​ ಕುಲಕರ್ಣಿ ಮನವಿ ಮಾಡಿದ್ದಾರೆ.
Published by:Ganesh Nachikethu
First published: