HOME » NEWS » Coronavirus-latest-news » FORMER MINISTER RAMALINGA REDDY SERVING FREE FOOD TO 12 THOUSAND MEMBERS DAILY GNR

ಪ್ರತಿನಿತ್ಯ 12 ಸಾವಿರ ಬಡವರ ಹೊಟ್ಟೆ ತುಂಬಿಸಿ ಮಾನವೀಯತೆ ಮೆರೆಯುತ್ತಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಡಿ

ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಹಲವು ರಾಜಕಾರಣಿಗಳಿಗೆ ರಾಮಲಿಂಗಾ ರೆಡ್ಡಿಯವರು ಮಾದರಿಯಾಗಿದ್ದಾರೆ. ಹೀಗೆ ಮಾನವೀಯತೆ ಮೆರೆದ ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

news18-kannada
Updated:April 12, 2020, 6:20 PM IST
ಪ್ರತಿನಿತ್ಯ 12 ಸಾವಿರ ಬಡವರ ಹೊಟ್ಟೆ ತುಂಬಿಸಿ ಮಾನವೀಯತೆ ಮೆರೆಯುತ್ತಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಡಿ
ಮಾಜಿ ಸಚಿವ ರಾಮಲಿಂಗಾ ರೆಡ್ಡಿ
  • Share this:
ಬೆಂಗಳೂರು(ಏ.12): ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಸದಾ ಗಿಜಿಗಿಜಿಗುಡುವ ಬೆಂಗಳೂರು ಜನ ಮತ್ತು ವಾಹನ ಸಂಚಾರ ಹೊರತುಪಡಿಸಿ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್​ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಇಂದಿರಾ ಕ್ಯಾಂಟೀನ್​ಗಳೂ ಮುಚ್ಚಿವೆ. ರಸ್ತೆಬದಿ ಹೋಟೆಲ್​ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮುಂದಾಗಿದ್ದಾರೆ.

ಹೌದು, ಕಾಂಗ್ರೆಸ್​​ ಶಾಸಕ ರಾಮಲಿಂಗಾ ರೆಡ್ಡಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಸಾಮಗ್ರಿ ವಿತರಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಬಿಟಿಎಂ ಲೇ ಔಟ್ ಕ್ಷೇತ್ರದಲ್ಲಿ ಬಡಜನತೆಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಗುತ್ತಿದೆ.ರಾಜ್ಯ ಸರ್ಕಾರದ ಸಹಕಾರದೊಂದಿಗೆ ದಾನಿಗಳ ಜೊತೆಗೂಡಿ ಆಹಾರ ತಯಾರಿ ಮಾಡುತ್ತಿದ್ದಾರೆ. ಮಾರ್ಚ್​ 30ರಿಂದ ಬಿಟಿಎಂ ಲೇಔಟ್​​ನ ಕಲ್ಯಾಣ ಮಂಟಪವೊಂದರಲ್ಲಿ ಆಹಾರ ತಯಾರಿಸಿ 12 ಸಾವಿರ ಊಟದ ಪಾಕೆಟ್​​ಗಳನ್ನು ಬರವರಿಗೆ ವಿತರಿಸಲಾಗುತ್ತಿದೆ.

ಇದನ್ನೂ ಓದಿ: COVID-19: ಕೊರೋನಾ ಭೀತಿ ಲೆಕ್ಕಿಸದೇ ಒಂದು ತಿಂಗಳ ಮಗು ಜತೆ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ

ಕೊರೋನಾದಿಂದ ಬೀದಿಗೆ ಬಂದ ಜನರಿಗೆ ಉಚಿತ ಆಹಾರ ನೀಡಲಾಗುತ್ತಿದೆ. ಇದಕ್ಕೆ ಸ್ಥಳೀಯ ನಾಯಕರ ಮತ್ತು ಸರ್ಕಾರದ ಸಹಾಕರವಿದೆ. ಲಾಕ್​​ಡೌನ್​​ ಮುಗಿದ ಮೇಲೂ ಒಂದಷ್ಟು ದಿನ ಈ ಕಾರ್ಯ ಮುಂದುವರಿಯಲಿದೆ ಎಂದರು ರಾಮಲಿಂಗಾ ರೆಡ್ಡಿ.

ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಹಲವು ರಾಜಕಾರಣಿಗಳಿಗೆ ರಾಮಲಿಂಗಾ ರೆಡ್ಡಿಯವರು ಮಾದರಿಯಾಗಿದ್ದಾರೆ. ಹೀಗೆ ಮಾನವೀಯತೆ ಮೆರೆದ ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Youtube Video
First published: April 12, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories