ಐತಿಹಾಸಿಕ ಸಾಧನೆ: ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪಿಸಲು ನೆರವಾದ ಮಾಜಿ ಸಚಿವ ಎಂ.ಬಿ ಪಾಟೀಲ್

ಲಂಡನ್ ಮಾಜಿ ಮೇಯರ್ ನೀರಜ್ ಪಾಟೀಲ ಲಂಡನ್​​ನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಛಾಪಿಸಲು ಕಾರಣರಾಗಿದ್ದರು. ಈಗ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ಮಧ್ಯಪ್ರಾಚ್ಯದ ದುಬೈನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಲು ಕಾರಣರಾಗಿದ್ದಾರೆ.

news18-kannada
Updated:July 5, 2020, 4:02 PM IST
ಐತಿಹಾಸಿಕ ಸಾಧನೆ: ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪಿಸಲು ನೆರವಾದ ಮಾಜಿ ಸಚಿವ ಎಂ.ಬಿ ಪಾಟೀಲ್
ಬಸವಣ್ಣ ಪ್ರತಿಮೆ
  • Share this:
ವಿಜಯಪುರ(ಜು.05): ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿ ತಮ್ಮ ತತ್ವಾದರ್ಶಗಳ ಮೂಲಕ ಮನೆಮಾತಾದವರು ಅಣ್ಣ ಬಸವಣ್ಣ. 12ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ಬಸವಣ್ಣನವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮುಖೇನ ಕಾಯಕವೇ ಕೈಲಾಸ ಎಂದು ಸಾರಿದ ಬಸವೇಶ್ವರ ಪ್ರತಿಮೆ ಈಗ ದುಬೈನಲ್ಲಿಯೂ ಸ್ಥಾಪನೆಯಾಗಿದೆ.

ಲಂಡನ್ ಮಾಜಿ ಮೇಯರ್ ನೀರಜ ಪಾಟೀಲ ಲಂಡನ್​​ನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಬಸವಣ್ಣನನ ವಚನಗಳು, ಚಿಂತನೆಗಳು ಯುರೋಪ್​​ ರಾಷ್ಟ್ರಗಳಲ್ಲಿ ಸಾರಲು ಕಾರಣರಾಗಿದ್ದರು. ಈಗ ಇಂಥದ್ದೇ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಲು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಮುಂಚೂಣಿ ಹೋರಾಟಗಾರ ಎಂ. ಬಿ. ಪಾಟೀಲ ಕಾರಣರಾಗಿದ್ದಾರೆ.

ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಸಹಕಾರದಿಂದ ದುಬೈ ಬಸವ ಸಮಿತಿ ವತಿಯಿಂದ ದುಬೈನ ಭಾರತೀಯ ರಾಯಭಾರ ಕಚೇರಿಯಲ್ಲಿ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಕೊರೋನಾ ಸಮಸ್ಯೆಯಿಂದಾಗಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಬಸವಣ್ಣನವರು ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ದುಬೈನಲ್ಲಿರುವ ಬಸವ ಸಮಿತಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಲಂಡನ್ ಮಾಜಿ ಮೇಯರ್ ನೀರಜ್ ಪಾಟೀಲ ಲಂಡನ್​​ನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಛಾಪಿಸಲು ಕಾರಣರಾಗಿದ್ದರು. ಈಗ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ಮಧ್ಯಪ್ರಾಚ್ಯದ ದುಬೈನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಲು ಕಾರಣರಾಗಿದ್ದಾರೆ.

ಈ ಕುರಿತು ಟ್ಟೀಟ್ ಮಾಡಿರುವ ಮಾಜಿ ಸಚಿವ ಎಂ. ಬಿ. ಪಾಟೀಲ, ದುಬೈನಲ್ಲಿ ಗುರು ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗಿದೆ. ಈ ಐತಿಹಾಸಿಕ ಕಾರ್ಯದಲ್ಲಿ ನನ್ನ ಪಾತ್ರ ಅತೀ ಸಣ್ಣದು. ಇದಕ್ಕೆ ಮೂಲ ಕಾರಣರಾದ ಸರ್ವ ಬಸವ ಸಮಿತಿ ಸದಸ್ಯರು ಚಂದ್ರಶೇಖರ ಲಿಂಗದಳ್ಳಿ, ಸಮಸ್ತ ದುಬೈ ಕನ್ನಡಿಗರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಗುರು ಬಸವಣ್ಣನವರ ಚಿಂತನೆಗಳು ವಿಶ್ವದೆಲ್ಲೆಡೆ ಪಸರಿಸಲಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬಸವಣ್ಣನವರ ಪ್ರತಿನೆ ಸ್ಥಾಪನೆ ಬಳಿಕ ಮಾತನಾಡಿರುವ ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಶ್ರೇಷ್ಠ ಸಾಮಾಜಿಕ ಹೋರಾಟಗಾರ ಬಸವಣ್ಣನವರ ಪ್ರತಿಮೆಯನ್ನು ನಾವು ಇವತ್ತು ದುಬೈನಲ್ಲಿ ಸ್ಥಾಪಿಸಿದ್ದೇವೆ. ಎಲ್ಲರಿಗೂ ಸ್ಪೂರ್ತಿಯಾಗಿರುವ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕುರಿತು ನಾವು ಕಳೆದ ಕೆಲವು ತಿಂಗಳುಗಳಿಂದ ಬಸವ ಸಮಿತಿಯವರ ಜೊತೆ ಚರ್ಚೆ ನಡೆಸಿದ್ದೆವು. ಕೊರೋನಾ ಸಮಸ್ಯೆ ಹಿನ್ನೆಲೆಯಲ್ಲಿ ಈಗ ಸಣ್ಣ ಕಾರ್ಯಕ್ರಮ ಮಾಡಿ ಮೂರ್ತಿ ಪ್ರತಿಷ್ಛಾಪಿಸಿದ್ದೇವೆ ಎಂದು ಭಾರತ ರಾಯಭಾರಿ ಕಚೇರಿ ಅಧಿಕಾರಿಯೊಬ್ಬರು ಸಂತಸ ವ್ಯಕ್ತಪಡಿಸಿದ್ಧಾರೆ.
ಇದನ್ನೂ ಓದಿ: ‘ಡಿ.ಕೆ ಶಿವಕುಮಾರ್​ರನ್ನು ಮುಳುಗಿಸಲಿರುವ ಕಾಂಗ್ರೆಸ್​ ನಾಯಕರು’ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​

ಮುಂಬರುವ ದಿನಗಳಲ್ಲಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ. ಇಲ್ಲಿಗೆ ಈ ಮೂರ್ತಿ ಬರಲು ಮತ್ತು ಇದನ್ನು ಸ್ಥಾಪಿಸಲು ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಮೂರ್ತಿ ಇಲ್ಲಿರುವ ಎಲ್ಲ ಭಾರತೀಯರಿಗೆ ಬಸವಣ್ಣನವರ ತತ್ತವಾದರ್ಶಗಳನ್ನು ಸಾರಲಿದೆ. ಭಾರತೀಯ ಮಹಾನ ವ್ಯಕ್ತಿಗಳಲ್ಲೊಬ್ಬರಾದ ಬಸವಣ್ಣನವರ ಚಿಂತನೆಗಳು ಇದರಿಂದ ಎಲ್ಲರಿಗೂ ತಲುಪಲಿವೆ ಎಂದಿದ್ದಾರೆ.

ಒಟ್ಟಾರೆ ದುಬೈ ಬಸವ ಸಮಿತಿಯ ಪ್ರಯತ್ನ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಬಸವಣ್ಣನವರ ಕೀರ್ತಿ ಈಗ ವಿದೇಶದ ಮತ್ತಷ್ಟು ರಾಷ್ಟ್ರಗಳಿಗೆ ಪಸರಿಸಿರುವುದು ಬಸವಣ್ಣವರ ಅನುಯಾಯಿಗಳು ಮತ್ತು ಬಸವಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
Published by: Ganesh Nachikethu
First published: July 5, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading