ಗ್ರಾಮ ಪಂಚಾಯತ್​ ಚುನಾವಣೆ ನಡೆಸುವಂತೆ ಚುನಾವಣಾ ಆಯುಕ್ತರಿಗೆ ಪತ್ರ ಬರೆದ ಹೆಚ್ ಕೆ ಪಾಟೀಲ

ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಇದು ಸರಿಯಲ್ಲ.

ಮಾಜಿ ಸಚಿವ ಹೆಚ್ ಕೆ ಪಾಟೀಲ​​​

ಮಾಜಿ ಸಚಿವ ಹೆಚ್ ಕೆ ಪಾಟೀಲ​​​

  • Share this:
ಬೆಂಗಳೂರು(ಮೇ. 19): ಗ್ರಾಮ ಪಂಚಾಯತ್​ ಚುನಾವಣೆ ನಡೆಸುವಂತೆ ಮಾಜಿ ಸಚಿವ ಹೆಚ್.ಕೆ. ಪಾಟೀಲ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಈಗ ವಿಶ್ವದಲ್ಲಿ ಕೊರೋನಾ ವೈರಸ್​ ಹಾವಳಿಯಿದೆ. ವೈರಸ್ ನಿಂದ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ ಚುನಾವಣೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಇದು ಸರಿಯಲ್ಲ. ಸರ್ಕಾರ ಚುನಾವಣೆ ಮುಂದೂಡಿಕೆಗೆ ಪ್ರಯತ್ನ ನಡೆಸಿದೆ ಜೊತೆಗೆ ಡಿಸಿಗಳ ಮೂಲಕ ನಾಮನಿರ್ದೇಶನಕ್ಕೆ ಕೈಹಾಕಿದೆ. ಆದರೆ, ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ ಪ್ರಕಾರ ಸಾಧ್ಯವಿಲ್ಲ. ಅಲ್ಲದೇ ರಾಜಕೀಯವಾಗಿ ಗ್ರಾಮ ಪಂಚಾಯತ್​ಗಳನ್ನು ದುರ್ಬಳಕೆ ಆಗಬಾರದು ಹಾಗಾಗಿ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಚುನಾವಣೆ ನಡೆಸದೆ ಹೋದರೆ ಕಾನೂನಿಗೆ ವಿರುದ್ಧವಾಗುತ್ತದೆ. ಕೇವಲ ಕೋವಿಡ್ ನೆಪವಾಗಿಟ್ಟುಕೊಂಡು ಸರ್ಕಾರ ಈ ಚಿಂತನೆ ನಡೆಸಿದರೇ ತಪ್ಪು. ಇಲ್ಲಿ ಸರ್ಕಾರ ಅಧಿಕಾರ ಬಳಸಿಕೊಂಡು ತಮ್ಮ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವುದಕ್ಕೆ ಹೊರಟಿದೆ ಎಂದು ಹೆಚ್ ಕೆ ಪಾಟೀಲ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಎಲ್ಲೆಡೆ ಬಸ್​ಗೆ ಜನ ಮುಗಿಬಿದ್ದರೆ, ರಾಯಚೂರಿನಲ್ಲಿ ಬಸ್ ಹತ್ತುವವರಿಲ್ಲ

ಇನ್ಮು ಚುನಾವಣಾ ಆಯೋಗ ಸಂವಿಧಾನ ಬದ್ಧವಾಗಿಯೇ ನಡೆದುಕೊಂಡು ಗ್ರಾಮ ಪಂಚಾಯತ್​ ಚುನಾವಣೆಯನ್ನ ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್.ಕೆ.ಪಾಟೀಲ್ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.
First published: