ಕೊರೋನಾ ಸಂದರ್ಭದಲ್ಲಿ ಕಣ್ಮರೆಯಾದ ಸಿ.ಪಿ.ಯೋಗೇಶ್ವರ್ ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ
ಸತತ 19 ವರ್ಷಗಳ ಕಾಲ ಚನ್ನಪಟ್ಟಣ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಅವರು ಒಂದು ಬಾರಿ ಸೋತ ಮೇಲೆ ಇಷ್ಟೊಂದು ಬೇಸರ ಯಾಕೆ ಎನ್ನುವ ಪ್ರಶ್ನೆಯನ್ನ ಜೆಡಿಎಸ್ ಬೆಂಬಲಿಗರು ಕೇಳುತ್ತಿದ್ದಾರೆ
news18-kannada Updated:June 23, 2020, 7:24 AM IST

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
- News18 Kannada
- Last Updated: June 23, 2020, 7:24 AM IST
ರಾಮನಗರ(ಜೂ. 23): ವಿಶ್ವದಲ್ಲೇ ಕೊರೋನಾ ಅಟ್ಟಹಾಸಕ್ಕೆ ಜನರೆಲ್ಲ ಕಂಗಾಲಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಇಷ್ಟುದಿನಗಳ ಕಾಲ ಕೊರೋನಾ ಕೇಸ್ ಗಳಿಲ್ಲದೆ ಗ್ರೀನ್ ಜೋನ್ ನಲ್ಲಿತ್ತು. ಆದರೆ, ಲಾಕ್ ಡೌನ್ ತೆರವು ಮಾಡಿದ ಪರಿಣಾಮ ಈಗ ರೇಷ್ಮೆನಗರಿಯಲ್ಲೂ ಶತಕದತ್ತ ಕೊರೋನಾ ಕೇಸ್ ಗಳು ಪತ್ತೆಯಾಗುತ್ತಿವೆ. ಆದರೆ ಈ ನಡುವೆ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಮಾತ್ರ ಕಣ್ಮರೆಯಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಯೋಗೇಶ್ವರ್ ಅಲ್ಲಲ್ಲಿ ಬೆಂಬಲಿಗರ ಮದುವೆ ಸಂದರ್ಭ ಹಾಗೇ ತೀರಾ ಹತ್ತಿರದವರು ಸತ್ತಾಗ ಮಾತ್ರ ಕ್ಷೇತ್ರಕ್ಕೆ ಬರುತ್ತಿದ್ದರು. ಆದರೆ ಕೊರೋನಾ ಅಬ್ಬರ ಶುರುವಾದಾಗಿನಿಂದ ಇಲ್ಲಿಯವರೆಗೆ ಯೋಗೇಶ್ವರ್ ಚನ್ನಪಟ್ಟಣದ ಕಡೆಗೆ ಹೆಚ್ಚು ಗಮನಹರಿಸಿಲ್ಲ. ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಸೋತಿರಲಿ, ಗೆದ್ದಿರಲಿ ಅವರ ಜವಾಬ್ದಾರಿಯನ್ನ ಮರೆತಿಲ್ಲ. ಆದರೆ ಯೋಗೇಶ್ವರ್ ಯಾಕೆ ಮರೆತರು ಅನ್ನೋದೆ ಉತ್ತರ ಸಿಗದ ಪ್ರಶ್ನೆ. ಸಾಮಾಜಿಕ ಜಾಲತಾಣಗಳಲ್ಲಿ ಯೋಗೇಶ್ವರ್ ಬಗ್ಗೆ ಚರ್ಚೆ
ಈ ಬಗ್ಗೆ ಚನ್ನಪಟ್ಟಣದ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಫೇಸ್ ಬುಕ್ ಪೇಜ್ ಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಸತತ 19 ವರ್ಷಗಳ ಕಾಲ ಚನ್ನಪಟ್ಟಣ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಅವರು ಒಂದು ಬಾರಿ ಸೋತ ಮೇಲೆ ಇಷ್ಟೊಂದು ಬೇಸರ ಯಾಕೆ ಎನ್ನುವ ಪ್ರಶ್ನೆಯನ್ನ ಜೆಡಿಎಸ್ ಬೆಂಬಲಿಗರು ಕೇಳುತ್ತಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ಸೋತಿರುವವರಿಗೆ ಯಾಕೆ ಪ್ರಶ್ನೆ ಮಾಡ್ತೀರಾ, ಗೆದ್ದಿರುವ ಶಾಸಕರನ್ನ ಕೇಳಿ ಎಂದು ಮಾಜಿ ಸಿಎಂ ಹಾಗೂ ಕ್ಷೇತ್ರದ ಹಾಲಿ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಕಡೆಗೆ ಬೆರಳು ತೋರುತ್ತಿದ್ದಾರೆ.

ಇನ್ನು ಕೊರೋನಾ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ಚನ್ನಪಟ್ಟಣ ಶಾಸಕರಾಗಿರುವ ಹೆಚ್.ಡಿ.ಕುಮಾರಸ್ವಾಮಿ ರಾಮನಗರ - ಚನ್ನಪಟ್ಟಣ ಕ್ಷೇತ್ರದಲ್ಲಿ ವಾಸವಿದ್ದ ಕೂಲಿ ಕೆಲಸಗಾರರು, ನಿರ್ಗತಿಕರು ಸೇರಿ ಅಸಹಾಯಕರನ್ನ ಗುರುತಿಸಿ ಒಂದು ತಿಂಗಳುಗಳ ಕಾಲ ಬೆಳಗ್ಗೆ ತಿಂಡಿ ಮತ್ತು ರಾತ್ರಿ ಊಟಕ್ಕೆ 5 ಸಾವಿರಕ್ಕೂ ಹೆಚ್ಚು ಪ್ಯಾಕೇಟ್ ಕೊಟ್ಟಿರುವುದು ವಾಸ್ತವ. ಜೊತೆಗೆ 5.50 ಕೋಟಿ ವೆಚ್ಚದಲ್ಲಿ ರಾಮನಗರ - ಚನ್ನಪಟ್ಟಣದ 1.20 ಲಕ್ಷ ಕುಟುಂಬಗಳಿಗೆ ಉಚಿತ ಅಕ್ಕಿ, ಬೇಳೆ, ಸಕ್ಕರೆ ಪ್ಯಾಕೇಟ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕೊರೋನಾ ವಾರಿಯರ್ಸ್ ಮೃತಪಟ್ಟರೆ 30 ಲಕ್ಷ ರೂ ವಿಮೆ : ರಾಜ್ಯ ಸರ್ಕಾರ ಆದೇಶಆದರೆ ಯೋಗೇಶ್ವರ್ ಮಾತ್ರ ಈ ಸಂದರ್ಭದಲ್ಲಿ ಯಾಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.
ಒಟ್ಟಾರೆ ಕೊರೋನಾ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಡೆಗೆ ಸಿ.ಪಿ.ಯೋಗೇಶ್ವರ್ ಮುಖ ಮಾಡದಿರುವುದು ಈಗ ದೊಡ್ಡ ಮಟ್ಟದ ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ಆದರೆ ಅವರು ಯಾಕೆ ಕ್ಷೇತ್ರದ ಕಡೆ ಬರುತ್ತಿಲ್ಲ ಎನ್ನುವ ಪ್ರಶ್ನೆಗೆ ಸ್ವತಃ ಯೋಗೇಶ್ವರ್ ರವರೇ ಉತ್ತರಿಸಬೇಕಿದೆ.
ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಯೋಗೇಶ್ವರ್ ಅಲ್ಲಲ್ಲಿ ಬೆಂಬಲಿಗರ ಮದುವೆ ಸಂದರ್ಭ ಹಾಗೇ ತೀರಾ ಹತ್ತಿರದವರು ಸತ್ತಾಗ ಮಾತ್ರ ಕ್ಷೇತ್ರಕ್ಕೆ ಬರುತ್ತಿದ್ದರು. ಆದರೆ ಕೊರೋನಾ ಅಬ್ಬರ ಶುರುವಾದಾಗಿನಿಂದ ಇಲ್ಲಿಯವರೆಗೆ ಯೋಗೇಶ್ವರ್ ಚನ್ನಪಟ್ಟಣದ ಕಡೆಗೆ ಹೆಚ್ಚು ಗಮನಹರಿಸಿಲ್ಲ. ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಸೋತಿರಲಿ, ಗೆದ್ದಿರಲಿ ಅವರ ಜವಾಬ್ದಾರಿಯನ್ನ ಮರೆತಿಲ್ಲ. ಆದರೆ ಯೋಗೇಶ್ವರ್ ಯಾಕೆ ಮರೆತರು ಅನ್ನೋದೆ ಉತ್ತರ ಸಿಗದ ಪ್ರಶ್ನೆ.