ವಿಜಯಪುರ(ಏ.17): ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ, ತಮ್ಮ ಆರು ತಿಂಗಳ ಪಿಂಚಣಿಯನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ವಿಜಯಪುರದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಭೇಟಿ ಮಾಡಿದ ಅಪ್ಪು ಪಟ್ಟಣಶೆಟ್ಟಿ, ತಮಗೆ ಸರಕಾರದಿಂದ ಬರುವ 6 ತಿಂಗಳ ಪಿಂಚಣಿಯನ್ನು ಸಿಎಂ ಪರಿಹಾರ ನಿಧಿಗೆ ನೀಡುತ್ತಿರುವುದಾಗಿ ತಿಳಿಸಿದರು. ಅಲ್ಲದೇ, ಈ ಕುರಿತು ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಪ್ರತಿ ತಿಂಗಳು ಸುಮಾರು 50 ಸಾವಿರ ರೂಪಾಯಿಯಂತೆ ಆರು ತಿಂಗಳ ಪಿಂಚಣಿ 3 ಲಕ್ಷ ರೂ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವ ಮೂಲಕ ಅಪ್ಪು ಪಟ್ಟಣಶೆಟ್ಟಿ ಇತರರಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ಪಾಲ್ಗೋಂಡಿದ್ದಾರೆ.
ಬಡವರಿಗೆ ನೆರವಾದ ಶಾಸಕ ನಡಹಳ್ಳಿ
ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ತಮ್ಮ ಮತಕ್ಷೇತ್ರದಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳ 20 ಸಾವಿರ ಕಡುಬಡವರಿಗೆ ಕಡುಬಡವರಿಗೆ ಅಕ್ಕಿ, ಗೋಧಿ ಹೊರತು ಪಡಿಸಿ ಇತರೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ತಮ್ಮ ಸ್ವಂತ ಹಣದಲ್ಲಿ ತಾಲೂಕಿನ 1 ತಾಲೂಕು ಆಸ್ಪತ್ರೆ, 3 ಸಮುದಾಯ ಆರೋಗ್ಯ ಕೇಂದ್ರ, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರೊಂದಿಗೆ ಬರುವ ಆರೈಕೆ ಮಾಡುವ ಸುಮಾರು 4,000 ಜನರಿಗೆ ಊಟದ ವ್ಯವಸ್ಥೆಯನ್ನೂ ನಡಹಳ್ಳಿ ಮಾಡಿದ್ದಾರೆ.
ಇದನ್ನೂ ಓದಿ :
ಗದಗದಲ್ಲಿ ಕೊರೋನಾ ಪ್ರಕರಣ ಇದ್ದರೂ ಟೆಸ್ಟಿಂಗ್ ಕಿಟ್ ಲಭ್ಯವಿಲ್ಲ: ಹೆಚ್.ಕೆ. ಪಾಟೀಲ್ ಆಕ್ರೋಶ
ಶಾಸಕ ಬಸನ ಗೌಡ ಗೌಡ ಪಾಟೀಲ್ ಯತ್ನಾಳ ಕೂಡ ತಮ್ಮ ಮೂರು ತಿಂಗಳ ಶಾಸಕರ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಜೊತೆಗೆ ಬಿಎಲ್ಡಿಇ ಸಂಸ್ಥೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ ಹಾಗೂ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ ನೀಡಿದ್ದಾರೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯವರು ಈಗಾಗಲೇ ಅಪಾರ ಪ್ರಮಾಣದ ಸಕ್ಕರೆ ಮತ್ತು ಸ್ಯಾನಿಟೈಸರ್ನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯ ನಾನಾ ಗಣ್ಯರು ಸಂಘ ಸಂಸ್ಥಗಳು ಕೂಡ ಕೊರೋನಾ ಎಮರ್ಜನ್ಸಿ ಹಾಗೂ ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಸಹಾಯ ಹಸ್ತನೀಡುವ ಮೂಲಕ ನೆರವಿಗೆ ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ