HOME » NEWS » Coronavirus-latest-news » FORMER HEAD OF RBI RAGHURAM RAJAN ADVISE FIRST FIGHT FOR CORONA VIRUS SESR

ಆರ್ಥಿಕ ಪ್ಯಾಕೇಜ್​ಗಿಂತ ಮೊದಲು ಕೊರೊನಾ ವೈರಸ್ ವಿರುದ್ಧ ಹೋರಾಡಿ: ಸರ್ಕಾರಕ್ಕೆ ರಾಜನ್ ಸಲಹೆ

ಆರ್​ಬಿಐನಿಂದ ಹೆಚ್ಚೇನೂ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರ ಹೆಚ್ಚು ವ್ಯಯಿಸಬೇಕು. ಕೊರೊನಾ ವೈರಸ್ ನಿಯಂತ್ರಣದಲ್ಲಿಟ್ಟು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು

Seema.R | news18-kannada
Updated:February 28, 2020, 11:49 AM IST
ಆರ್ಥಿಕ ಪ್ಯಾಕೇಜ್​ಗಿಂತ ಮೊದಲು ಕೊರೊನಾ ವೈರಸ್ ವಿರುದ್ಧ ಹೋರಾಡಿ: ಸರ್ಕಾರಕ್ಕೆ ರಾಜನ್ ಸಲಹೆ
ರಘುರಾಮ್ ರಾಜನ್
  • Share this:
ನವದೆಹಲಿ(ಫೆ. 28): ಚೀನಾವನ್ನು ಕಾಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್​ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಈ ವೈರಸ್​ ಮನುಷ್ಯರ ಜೀವದ ಜೊತೆ ಮಾತ್ರವಲ್ಲದೇ ದೈನಂದಿನ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆ ಮೇಲೂ ಆಘಾತ ಮೂಡಿಸಿದೆ. ಈ ಬಗ್ಗೆ ಜಗತ್ತು ಕೂಡ ಕಳವಳದಿಂದಿದೆ. ಈ ಕುರಿತು ಮಾತನಾಡಿರುವ ಮಾಜಿ ಆರ್​ಬಿಐ ಮುಖ್ಯಸ್ಥ ರಘುರಾಮ್​ ರಾಜನ್​,  ದೇಶ ಮೊದಲು ಕೊರೊನಾ ವೈರಸ್​ನಿಂದ ಆರ್ಥಿಕತೆ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಚಿಂತಿಸುವ ಅವಶ್ಯಕತೆ ಇದೆ. ಇದಾದ ಬಳಿಕ ಆರ್ಥಿಕತೆಗೆ ಪುಷ್ಟಿ ಕೊಡುವ ಯೋಜನೆಗಳ ಬಗ್ಗೆ ಯೋಚಿಸಲಿ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್​ನಿಂದಾಗಿ ಜಾಗತಿಕ ಆರ್ಥಿಕತೆ ಹದಗೆಟ್ಟಿದ್ದು, ಹಣಕಾಸಿನ ಬಿಕ್ಕಟ್ಟು ಎದರಾಗಿದೆ ಎಂದು ಆತಂಕವ್ಯಕ್ತಪಡಿಸಿದ ಅವರು, ಆರ್​ಬಿಐನಿಂದ ಹೆಚ್ಚೇನೂ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರ ಹೆಚ್ಚು ವ್ಯಯಿಸಬೇಕು. ಕೊರೊನಾ ವೈರಸ್ ನಿಯಂತ್ರಣದಲ್ಲಿಟ್ಟು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

“ಸರ್ಕಾರ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳಿಂದಲೋ ಅಥವಾ ವೈರಸ್​ಗೆ ಮದ್ದು ಕಂಡು ಹಿಡಿಯವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಿಂದಲೋ ವೈರಸ್ ಹರಡುವಿಕೆಗೆ ಒಂದು ಮಿತಿ ಇದೆ ಎಂಬ ಭಾವನೆ ಜನರಲ್ಲಿ ಇದೆ. ಈ ಹಂತದಲ್ಲಿ ಸರ್ಕಾರವು ರೋಗ ನಿಗ್ರಹಿಸುವುದಕ್ಕೆ ಹೆಚ್ಚು ಒತ್ತು ಕೊಡುವುದು ಅತ್ಯಗತ್ಯ. ಆ ನಂತರ ಆರ್ಥಿಕ ಉತ್ತೇಜಕ ಪ್ಯಾಕೇಜ್​ಗಳನ್ನು ಪ್ರಕಟಿಸುವ ಕೆಲಸ ಮಾಡಲಿ” ಎಂದು ಚಿಕಾಕೋ ಬೂತ್ ಸ್ಕೂಲ್ ಆಫ್ ಬ್ಯುನಿಸೆಸ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ರಘುರಾಮ್ ರಾಜನ್ ಹೇಳಿದ್ಧಾರೆ.

ಇದನ್ನು ಓದಿ: ಕೊರೊನಾ ಎಫೆಕ್ಟ್; ಸೆನ್ಸೆಕ್ಸ್ 1100 ಅಂಕ ಕುಸಿತ; 5 ಲಕ್ಷ ಕೋಟಿ ನಷ್ಟದ ಅಂದಾಜು

ಕೊರೊನಾ ವೈರಸ್ ಭೀತಿ ಇಡೀ ವಿಶ್ವದ ಆರ್ಥಿಕತೆಯನ್ನು ತಲ್ಲಣಗೊಳಿಸುತ್ತಿದೆ. ಚೀನಾ ತೀವ್ರ ಮಟ್ಟಿಗೆ ಬಾಧಿತವಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೂ ಇದು ಪೆಟ್ಟು ನೀಡುತ್ತಿದೆ. ಜಾಗತಿಕವಾಗಿ ಆರ್ಥಿಕತೆಯು ತೀವ್ರ ಕುಸಿತದಲ್ಲಿದೆ. ಬ್ಯಾಂಕ್ ಆಫ್ ಅಮೆರಿಕದ ಅರ್ಥಶಾಸ್ತ್ರಜ್ಞರ ಪ್ರಕಾರ ಈ ವರ್ಷ ಜಾಗತಿಕ ಆರ್ಥಿಕ ಪ್ರಗತಿ ಶೇ. 2.8 ಇರಬಹುದು. ಇದು ಕಳೆದ 10 ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಗತಿದರವಾಗಿದೆ.
First published: February 28, 2020, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories